Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.11.2022
Share:

By Village Missionary Movement

Monday, 21-Nov-2022

ಧೈನಂದಿನ ಧ್ಯಾನ(Kannada) – 22.11.2022

 

ನೋಡಿ ಮೊರೆಯಿಡು

 

“ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ" - ಕೀರ್ತನೆ 50:15

 

ಗ್ಯಾಲೋವೇ ಎಂಬವರು ಬೀಗ ಹಾಕಿರುವ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ, ಆ ದೊಡ್ಡ ದೇವಾಲಯದಲ್ಲಿ ಒಂದು ಚಿಕ್ಕ ಗ್ಯಾಪ್ ನ ಮೂಲಕ ಒಂದು ಹಕ್ಕಿ ಒಳಗೆ ಬಂತು. ಅದು ದೇವಾಲಯದ ಎಲ್ಲಾ ಕಡೆ ಹಾರಾಡುತ್ತಾ ತಿರುಗಾಡುತ್ತಾ ನಂತರ ಸ್ವಲ್ಪ ಸಮಯ ಕಳೆದು, ಅದು ಹೊರಗೆ ಹೋಗಲು ಪ್ರಯತ್ನಿಸಿತು. ಅದಕ್ಕಾಗಿ ಅದು ಸುತ್ತಲೂ ಹಾರಾಡುತ್ತಾ ಹೊರಗೆ ಹೋಗುವ ದಾರಿ ಹುಡುಕಿತು. ಸ್ವಲ್ಪ ಕೆಳಗೆ ಬಂದಾಗ ಅವರು ಅದನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಅದು ಮತ್ತೆ ಎದ್ದು ಹಾರಲು ಪ್ರಾರಂಭಿಸಿತು. ಅವರು ಹಕ್ಕಿ ಹಾರಿಹೋದಲ್ಲೆಲ್ಲಾ ಅದರ ಜೊತೆಯಲ್ಲಿಯೇ ಹೋಗುತ್ತಿದ್ದರು. ಆದರೆ ಹಕ್ಕಿ ಕೈಗೆ ಸಿಗದೆ ದಾರಿ ಹುಡುಕುತ್ತಿತ್ತು. ಆದರೆ ಆ ಹಕ್ಕಿ ಅವರ ಕೈಗೆ ಸಿಕ್ಕದೇ, ಹೊರಗೆ ಹೋಗಲು ದಾರಿ ಹುಡುಕುತ್ತಿತ್ತು. ಅವರು ಒಂದು ಕಿಟಕಿಯನ್ನು ತೆರೆದದ್ದೂ ಅದಕ್ಕೆ ಗೊತ್ತಾಗಲಿಲ್ಲ. ಕೊನೆಗೆ ಒಂದು ಗಾಜಿನ ಕಿಟಕಿಯನ್ನು ನೋಡಿ, ಇದೇ ಹೊರಗೆ ಹೋಗುವ ದಾರಿ ಎಂದುಕೊಂಡು, ಅಲ್ಲಿಗೆ ಹೋಗಿ ಜೋರಾಗಿ ಅಪ್ಪಳಿಸಿ ಕೆಳಗೆ ಬಿದ್ದುಹೋಯಿತು. ಆಗ ಗ್ಯಾಲೋವೇ ಅದನ್ನು ಕೈಗೆ ತೆಗೆದುಕೊಂಡು, ನೀನು ನನಗೆ ಅವಕಾಶ ನೀಡಿದ್ದರೆ, ನಾನು ಯಾವಾಗಲೋ ನಿನ್ನನ್ನು ಹೊರಗೆ ಕಳುಹಿಸುತ್ತಿದೆ. ಆದರೆ ನೀನು ನನ್ನ ಕೈಗೆ ಸಿಕ್ಕಲಿಲ್ಲ, ನಿನ್ನ ಸ್ವಂತ ಇಚ್ಛೆಯಂತೆ ಹಾರಿಹೋದೆ. ಕೊನೆಗೆ ಹೀಗೆ ಪೆಟ್ಟು ಬಿದ್ದು ಕೆಳಗೆ ಬಿದ್ದುಬಿಟ್ಟೆ ಎಂದು ಹೇಳಿ ಕಿಟಕಿ ತೆರೆದು ಅದನ್ನು ಹೊರಗೆ ಎಸೆದರು. ಅದು ತನ್ನ ರೆಕ್ಕೆಗಳನ್ನು ಬಡಿಯುತ್ತಾ ಸ್ವತಂತ್ರವಾಗಿ ಹಾರಿಹೋಯಿತು.

 

ದಾವೀದನು ಫಿಲಿಷ್ಟಿಯರನ್ನು ಕೊಂದ ಆ ದಿನದಿಂದ ಸೌಲನು ದಾವೀದನನ್ನು ಅಸೂಯೆಯಿಂದ ನೋಡಿದನು. ಸೌಲನು ದಾವೀದನನ್ನು ಈಟಿಯಿಂದ ಕೊಲ್ಲಬೇಕೆಂದು ನೆನೆಸಿದನು. ಆದರೆ ದೇವರು ದಾವೀದನನ್ನು ಸೌಲನ ಕೈಯಿಂದ ಬಿಡಿಸಿದರು. ಸೌಲನು ದಾವೀದನನ್ನು ಹೀಗೆ ಅನೇಕ ವಿಧಗಳಲ್ಲಿ ಕೊಲ್ಲಲು ಪ್ರಯತ್ನಿಸಿದಾಗಲೆಲ್ಲಾ, ಕರ್ತನು ದಾವೀದನಿಗೆ ತಪ್ಪಿಸಿಕೊಳ್ಳಲು ಒಂದು ಮಾರ್ಗವನ್ನು ಇಟ್ಟಿದ್ದರು. ದಾವೀದನು ತನ್ನ ಜೀವಕ್ಕೆ ಆಪತ್ತು ಸಂಭವಿಸಿದ ಸಮಯದಲ್ಲೆಲ್ಲಾ ದೇವರಿಗೆ ಮೊರೆಯಿಟ್ಟದ್ದನ್ನು, ದೇವರು ದಾವೀದನನ್ನು ಬಿಡುಗಡೆ ಮಾಡಿದ್ದು ನಮಗೆ ಗೊತ್ತು.

 

ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಆಪತ್ತಿನಲ್ಲಿ ನಮಗೆ ಸಹಾಯ ಮಾಡಿದ ಒಬ್ಬ ಪರಾಕ್ರಮಿ ಇದ್ದಾರೆ. ಅವರೇ ಯೇಸು. ಆದರೆ ನಾವು ಕೆಲವು ಸಂದರ್ಭಗಳಲ್ಲಿ ನಮ್ಮ ಅಪಾಯಕಾರಿಯಾದ ಪರಿಸ್ಥಿತಿಗಳಲ್ಲಿ ನಮಗೆ ಸಹಾಯ ಮಾಡಿದ ದೇವರನ್ನು ನಾವು ಮರೆತುಬಿಡುತ್ತೇವೆ. ನಾವು ಎದುರಿಸುವ ಅಪಾಯವೆಂದರೆ ಕೆಲವು ಅನಗತ್ಯ ಭಯ, ಕೆಲವು ಪರಿಸ್ಥಿತಿ, ಕೆಲವು ದೌರ್ಬಲ್ಯ ಇವುಗಳಾಗಿರಬಹುದು. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ನಾವು ದೇವರಿಗೆ ಮೊರೆಯಿಡುವಾಗ, ಆತನು ಖಂಡಿತವಾಗಿಯೂ ನಮ್ಮನ್ನು ರಕ್ಷಿಸುತ್ತಾರೆ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ನಮ್ಮ ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕೆಲಸಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ, ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al