By Village Missionary Movement
Sunday, 20-Nov-2022ಧೈನಂದಿನ ಧ್ಯಾನ(Kannada) – 21.11.2022 (Youth Special)
ಬಿದ್ದರೂ ಏಳುತ್ತೇನೆ
"...ದೇವರೇ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ" – ಕೀರ್ತನೆ 32:5
ಪಾಪದ ಕೆಸರಿನಲ್ಲಿದ್ದರೂ ಪರಿಶುದ್ಧ ದೇವರ ಕೈಯಲ್ಲಿ ಸಾಧನವಾಗಿ ಬದುಕಲು ಹೇಗೆ ಸಾಧ್ಯ ಎಂಬುದಕ್ಕೆ ರಾಹಾಬಳೇ ಒಂದು ಉದಾಹರಣೆ. ಈ ರಾಹಾಬಳು ಯಾರು? ಯೆರಿಕೋ ಗೋಡೆಯ ಮೇಲೆ ಮನಬಂದಂತೆ ಸುಖ ಭೋಗವಾಗಿ ಬಾಳುತ್ತಿದ್ದ ವೇಶ್ಯೆ ಎಂದು ಸತ್ಯವೇದವು ನಮಗೆ ಪರಿಚಯಿಸುತ್ತಿದೆ. ತನ್ನ ಹದಿಹರೆಯದ ದಿನಗಳಲ್ಲಿ ಬಹಳ ಕೇವಲವಾಗಿ ಜೀವಿಸಿ ಎಲ್ಲರೂ ನೋಡಿ ಅಸಹ್ಯಪಡುತ್ತಿದ್ದ ಪಾಪವನ್ನೇ ರಾಹಾಬಳು ಮಾಡಿದಳು.
ಇಸ್ರಾಯೇಲ್ ಜನರನ್ನು ಮುನ್ನಡೆಸಿದ ಯೆಹೋಶುವನು, ಯೆರಿಕೋವನ್ನು ರಹಸ್ಯವಾಗಿ ನೋಡಿಕೊಂಡು ಬರಲು ಇಬ್ಬರು ಗೂಢಚಾರರನ್ನು ಕಳುಹಿಸುತ್ತಾರೆ. ಅವರು ಈ ರಾಹಾಬಳ ಮನೆಗೆ ಹೋಗಿ ತಂಗಿದ್ದರು. ಯೆರಿಕೋವಿನ ರಾಜನಿಗೆ ಈ ಸುದ್ದಿಯು ಗೊತ್ತಾಗಲು ಆಳುಗಳನ್ನು ಕಳುಹಿಸಿ ವಿಚಾರಿಸುತ್ತಾರೆ. ರಾಹಾಬಳು ಅವರನ್ನು ತೋರಿಸಿಕೊಡದೇ ಬಚ್ಚಿಟ್ಟು ಕಾಪಾಡುತ್ತಾಳೆ. ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ ಎಂದು ದೇವರ ಮೇಲೆ ತಣಿಸಲಾಗದ ದಾಹ ಹೊಂದಿದ್ದ ರಾಹಾಬಳಾಗಿ ಮಾರ್ಪಟ್ಟು ಕೇಳಲ್ಪಟ್ಟ ಅದ್ಬುತಗಳನ್ನು ಮನದಲ್ಲಿಟ್ಟುಕೊಂಡು ನಿಜವಾದ ದೇವರನ್ನು ಕಂಡುಕೊಂಡಳು.
ಯೆರಿಕೋ ಕೋಟೆ ನಾಶವಾದರೂ ದೇವರು ನಮ್ಮ ಕುಟುಂಬವನ್ನು ಖಂಡಿತವಾಗಿ ಕಾಪಾಡುತ್ತಾರೆ ಎಂಬ ನಂಬಿಕೆ ಮಾತ್ರವಲ್ಲ ಪಾಪ ಜೀವನವನ್ನು ದ್ವೇಷಿಸಿ ಪರಿಶುದ್ಧ ಜೀವನವನ್ನು ನಡೆಸಲು ಸಹಾಯ ಮಾಡುತ್ತಾರೆ ಎಂಬ ಕದಲಿಸಲಾಗದ ನಂಬಿಕೆ ಅವಳ ಹೃದಯದಲ್ಲಿತ್ತು. ಯೆರಿಕೋ ಕೋಟೆಯು ನೆಲಮಟ್ಟಕ್ಕೆ ಕುಸಿದು ಬಿದ್ದರೂ ಆ ಕೋಟೆಯ ಮೇಲಿರುವ ರಾಹಾಬಳ ಮನೆ ಮಾತ್ರ ಬಲವಾಗಿ ನಿಂತಿತು. ತನ್ನನ್ನು ನಂಬಿ ಬಂದ ಒಬ್ಬರನ್ನೂ ತಳ್ಳಿಬಿಡದ ದೇವರು ರಾಹಾಬಳ ಜೀವನದಲ್ಲಿ ಹೊಸ ಕಾರ್ಯಗಳನ್ನು ಮಾಡಿದರು. ಇಬ್ರಿಯ 11:31 ರಲ್ಲಿ ಇರುವ ನಂಬಿಕೆ ಯೋಧರ ಪಟ್ಟಿಯಲ್ಲಿ ರಾಹಾಬಳ ಹೆಸರನ್ನೂ ಸೇರಿಸಲಾಗಿದೆ. ಅಷ್ಟೇ ಅಲ್ಲ, ಮತ್ತಾಯ 1: 5 ರಲ್ಲಿ ಯೇಸು ಕ್ರಿಸ್ತನು ಜನಿಸಿದ ರಾಜವಂಶದ ಇತಿಹಾಸದಲ್ಲಿಯೂ ಸ್ಥಾನ ಸಂಪಾದಿಸಿದಳು. ಇದು ಹೇಗೆ ಸಾಧ್ಯ? ರಾಹಾಬಳ ಆರಂಭವು ಪಾಪದ ಕೆಸರಿನಲ್ಲಿತ್ತು ನಿಜ. ಆದರೆ ಪರಿಶುದ್ಧ ದೇವರನ್ನು ಕಂಡುಕೊಂಡ ನಂತರ, ಅವಳ ಜೀವನವು ಸಂಪೂರ್ಣವಾಗಿ ಬದಲಾಯಿತು ಮತ್ತು ಯೇಸುವನ್ನು ಹೊತ್ತುಕೊಂಡು ಬಂದು ಇತಿಹಾಸ ನಿರ್ಮಿಸಿದ ರಾಹಾಬಳಾಗಿ ಇನ್ನೂ ಮಾತನಾಡುತ್ತಿದ್ದಾರೆ.
ಪ್ರೀತಿಯ ಕಣ್ಮಣಿ ಮಕ್ಕಳೇ! ಹದಿಹರೆಯದ ದಿನಗಳಲ್ಲೂ ಪಾಪದ ಕೆಸರಿನಲ್ಲಿ ಬಿದ್ದು ಏಳಲು ಹರಸಾಹಸ ಮಾಡುತ್ತಿದ್ದೀರಾ? "ಯೇಸುವನ್ನು ದೃಷ್ಟಿಸಿ ನೋಡಿರಿ, ಆತನು ನಿನ್ನನ್ನು ರಕ್ಷಿಸುವನು" ಪರಮ ಕುಂಬಾರನಿಗೆ ನಿಮ್ಮ ಜೀವನವನ್ನು ಕೊಟ್ಟರೆ, ಅವರು ನಿಮ್ಮನ್ನು ಅನೇಕರಿಗೆ ಸಾಕ್ಷಿಯಾಗಿ ಪರಿವರ್ತಿಸಿ ಅಂದ ನೋಡುವ ದೇವರಾಗಿ ಕಾಯುತ್ತಿದ್ದಾರೆ.
- Mrs. ಜೀವಾ ವಿಜಯ್
ಪ್ರಾರ್ಥನಾ ಅಂಶ:
ಮೇ 1 ರಂದು ನಡೆಯಲಿರುವ ಯೌವನಸ್ಥರ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಯುವಕ-ಯುವತಿಯರನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482