By Village Missionary Movement
Saturday, 19-Nov-2022ಧೈನಂದಿನ ಧ್ಯಾನ(Kannada) – 19.11.2022 (Kids Special)
ಜಕ್ಕಾಯ ಅಂಕಲ್
"ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು" - ಪ್ರಕಟಣೆ 3:20
ಹಾಯ್ ಪುಟಾಣಿಗಳೇ! ನಿಮಗೆ ಬೈಬಲ್ ಕಥೆಗಳನ್ನು ಕೇಳಲು ತುಂಬಾ ಇಷ್ಟತಾನೇ! ಅಮ್ಮ ಹೇಳಿರುತ್ತಾರೆ ಅಲ್ವಾ. ಸಂಡೇ ಸ್ಕೂಲ್ ಟೀಚರ್ ಮೂಲಕವೂ ನೀವು ಬಹಳಷ್ಟು ಬೈಬಲ್ ಕಥೆಗಳನ್ನು ಕೇಳಿರುತ್ತೀರ ಅಲ್ವಾ? ನಾವು ಇಂದು ಬೈಬಲ್ ನಲ್ಲಿ ಜಕ್ಕಾಯನ ಕಥೆಯನ್ನು ಕೇಳೋಣ್ವಾ?
ಯೆರಿಕೋ ಎಂಬ ಒಂದು ದೊಡ್ಡ ಪಟ್ಟಣವಿತ್ತು. ಆ ನಗರದಲ್ಲಿ ಜಕ್ಕಾಯ ಎಂಬ ಅತಿ ಶ್ರೀಮಂತ ಅಂಕಲ್ ಒಬ್ಬರು ಇದ್ದರು. ಆತ ಸರ್ಕಾರಿ ಅಧಿಕಾರಿ. ಹಾಗಾಗಿ, ಜನ ಮಾತನಾಡಿಕೊಳ್ಳುವುದು ಮತ್ತು ದೇಶದ ಪ್ರಚಲಿತ ವಿದ್ಯಮಾನಗಳು ಚೆನ್ನಾಗಿ ತಿಳಿದಿತ್ತು. ಅವರು ಯೇಸುವಿನ ಬಗ್ಗೆಯೂ ಕೇಳಿದ್ದರು. ಎಲ್ಲರೂ ಬಂದು ಜಕ್ಕಾಯ ಅಂಕಲ್ ಬಳಿ ಹೇಳುತ್ತಿದ್ದರು. ಆದ್ದರಿಂದ ಜಕ್ಕಾಯ ಅಂಕಲ್ ಗೆ ಯೇಸುವನ್ನು ನೋಡಲು ಆಸೆಯಾಗಿತ್ತು. ಒಂದು ದಿನ ಯೆರಿಕೋ ಪಟ್ಟಣದಲ್ಲಿ ಜನರ ದೊಡ್ಡ ಗುಂಪು ಬಂದಿತು. ಏನು ವಿಷಯ ಎಂದು ಜಕ್ಕಾಯ ಅಂಕಲ್ ಕೇಳಿದಾಗ, ಅವರು ಯೇಸು ಬಂದಿದ್ದಾರೆ ಎಂದು ಹೇಳಿದರು. ಇವರಿಗೆ ಯೇಸುವನ್ನು ನೋಡಲು ತುಂಬಾ ಆಸೆ. ಆದರೆ ಇವರು ತುಂಬಾ ಕುಳ್ಳಗಿರುತ್ತಾರೆ. ಅದಕ್ಕಾಗಿ ಜನರ ಗುಂಪಿನಲ್ಲಿ ಯೇಸುವನ್ನು ನೋಡಲು ಸಾಧ್ಯವಾಗಲಿಲ್ಲ, ಆದ್ದರಿಂದ ಏನು ಮಾಡಬೇಕೆಂದು ಯೋಚಿಸಿದರು. ಯೇಸು ಈ ಮಾರ್ಗವಾಗಿ ತಾನೇ ಬರುತ್ತಾರೆ. ನಾನು ಮುಂದೆ ಓಡಿಹೋಗಿ, ಆ ಅಂಜೂರದ ಮರದ ಮೇಲೆ ಕೂತುಕೊಳ್ಳುತ್ತೇನೆ'' ಎಂದು ಬೇಗ ಹೋಗಿ ಅಂಜೂರದ ಮರದ ಮೇಲೆ ಕುಳಿತರು. ಯೇಸು ಆ ಸ್ಥಳಕ್ಕೆ ಬಂದ ಕೂಡಲೆ ತಲೆಯೆತ್ತಿ ಮೇಲೆ ನೋಡಿ, ಜಕ್ಕಾಯ ಅಂಕಲ್ ಬಳಿ “ಜಕ್ಕಾಯನೇ, ಬೇಗ ಇಳಿದು ಬಾ. ಇಂದು ನಾನು ನಿನ್ನ ಮನೆಯಲ್ಲಿ ಉಳಿಯಬೇಕು" ಎಂದು ಹೇಳಿದರು. ಕೂಡಲೇ ಯೇಸಪ್ಪಾಗೆ ನನ್ನ ಹೆಸರು ಕೂಡ ಗೊತ್ತಿದೆ ಎಂದುಕೊಂಡು ಸಂತೋಷವಾಗಿ ಇಳಿದು ಬಂದರು.
ಮನೆಗೆ ಹೋಗುವಾಗ, ಯೇಸಪ್ಪನ ಬಳಿ ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ. ಒಬ್ಬನ ಬಳಿ ಅನ್ಯಾಯವಾಗಿ ತೆಗೆದುಕೊಂಡದ್ದನ್ನು ನಾಲ್ಕು ಪಟ್ಟು ಹಿಂತಿರುಗಿಸಿ ಕೊಡುತ್ತೇನೆ ಎಂದು ಹೇಳಿದರು. ಇದನ್ನು ಕೇಳಿ ಯೇಸು - ಈಹೊತ್ತು ಈ ಮನೆಗೆ ರಕ್ಷಣೆಯಾಯಿತು." (ಲೂಕ 19:9) ಎಂದು ಹೇಳಿ ಸಂತೋಷಪಟ್ಟರು. ಏನು ಪುಟಾಣಿಗಳೇ! ನೀವು ಕೂಡ ಯೇಸಪ್ಪನ ಬಳಿ "ನಮ್ಮ ಮನೆಗೆ ಬನ್ನಿ. ನನ್ನ ಹೃದಯದೊಳಗೆ ಬನ್ನಿ ಎಂದು" ಪ್ರಾರ್ಥಿಸುತ್ತೀರಾ? ಆಗ ನೀವೂ ಸಹ ತುಂಬಾ ಸಂತೋಷವುಳ್ಳವರಾಗಿ ಮಾರ್ಪಡುತ್ತೀರ.
- A. ಬ್ಯೂಲ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482