Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.11.2022
Share:

By Village Missionary Movement

Thursday, 17-Nov-2022

ಧೈನಂದಿನ ಧ್ಯಾನ(Kannada) – 18.11.2022

 

ಮನುಷ್ಯ ಬದಲಾದರೆ ಲೋಕ ಬದಲಾಗುತ್ತದೆ

 

“...ಇನ್ನು ಮೇಲೆ ನೀನು ಯಾಕೋಬನೆನ್ನಿಸಿಕೊಳ್ಳುವದಿಲ್ಲ; ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲೆಂದು ಹೆಸರುಂಟಾಗುವದು ಎಂದು ಹೇಳಿದನು" - ಆದಿಕಾಂಡ 32:28

 

ಬೋಧಕರೊಬ್ಬರು ತನ್ನ ಚರ್ಚ್ ನ ಆರಾಧನೆಗಾಗಿ ಸಂದೇಶವನ್ನು ಸಿದ್ಧಪಡಿಸುತ್ತಿದ್ದರು. ಆತನ 6 ವರ್ಷದ ಮಗ ಆ ಕೋಣೆಯಲ್ಲಿ ಆಟವಾಡುತ್ತಾ ಗಲಾಟೆ ಮಾಡುತ್ತಿದ್ದನು. ಇದು ಬೊಧಕರಿಗೆ ಸಾಕಷ್ಟು ತೊಂದರೆ ನೀಡಿತು. ಹಾಗಾಗಿ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಅವರ ಮೇಜಿನ ಮೇಲೆ ವರ್ಲ್ಡ್ ಮ್ಯಾಪ್ ಒಂದಿತ್ತು. ಅವರು ಅದನ್ನು ವಿವಿಧ ತುಂಡುಗಳಾಗಿ ಹರಿದು ಅವನಿಗೆ ಕೊಟ್ಟು ಹೋಗಿ 2 ನಿಮಿಷದಲ್ಲಿ ವಿಶ್ವ ಚಿತ್ರವನ್ನು ಸರಿಯಾಗಿ ಜೋಡಿಸಿ ಎತ್ತಿಕೊಂಡು ಬಾ ನಾನು ನಿನಗೆ ಬಹುಮಾನ ಕೊಡುತ್ತೇನೆ ಎಂದು ಹೇಳಿ ಕಳುಹಿಸಿಬಿಟ್ಟರು. ಅವನು ಹೋಗಿ 2 ನಿಮಿಷದಲ್ಲಿ ಅದನ್ನು ಸರಿಯಾಗಿ ಜೋಡಿಸಿ ತಂದುಬಿಟ್ಟನು. ನೀನು ಹೇಗೆ ಇಷ್ಟು ಬೇಗ ಮಾಡಲು ಸಾಧ್ಯವಾಯಿತು ಎಂದು ಕೇಳಿದರು. ಪ್ರಪಂಚದ ಚಿತ್ರದ ಭಾಗಗಳನ್ನು ಸಂಯೋಜಿಸುವಾಗ

ಹಿಂಭಾಗದಲ್ಲಿ ಮನುಷ್ಯನ ಚಿತ್ರವಿತ್ತು. ಹಾಗಾಗಿ ಇದನ್ನು ಕಾಗದದ ಮೇಲೆ ಹಾಕಿ ಮಾನವ ಮುಖವನ್ನು ಜೋಡಿಸಿ ಕಾಗದವನ್ನು ತಿರುಗಿಸಿದರೆ ಪ್ರಪಂಚದ ಚಿತ್ರಣ ಬಂದುಬಿಟ್ಟಿತು ಎಂದನು. ಮನುಷ್ಯರು ವ್ಯವಸ್ಥಿತರಾದರೆ ಜಗತ್ತು ಕೂಡ ಸುವ್ಯವಸ್ಥೆಯಾಗುತ್ತದೆ ಎಂದನು. ಅವರು ಅದನ್ನು ಅಂದಿನ ಸಂದೇಶವಾಗಿ ಮಾರ್ಪಡಿಸಿದರು.

 

ಇದರಂತೆಯೇ ಯಾಕೋಬನು ತನ್ನ ಜೀವನದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅಂದುಕೊಂಡಿದ್ದನು. ಅವನು ತನ್ನ ಸಹೋದರನಿಗೆ ಮೋಸಮಾಡಿದ್ದನು, ತನ್ನ ತಂದೆಗೆ ಮೋಸಮಾಡಿದ್ದನು ಇದರ ಪರಿಣಾಮವಾಗಿ, ಯಾಕೋಬನು ಅವನ ಮಾವನಿಂದ ಮೋಸಹೋದನು. ನಂತರ ತನ್ನ ಸ್ವಂತ ದೇಶಕ್ಕೆ ಹಿಂದಿರುಗುವಾಗ, ಅವನು ಯೊರ್ದಾನಿನ ನದಿಯ ದಡದಲ್ಲಿ ದೇವರನ್ನು ಭೇಟಿಯಾಗುತ್ತಾನೆ. ಹೆಂಡತಿಯರು, ಮಕ್ಕಳು, ಹಿಂಡುಗಳು ಮತ್ತು ಆಸ್ತಿಯನ್ನು ಹೊಂದಿದ್ದರೂ ಇನ್ನೂ ಪರಿವರ್ತನೆಯಾಗದ ತನ್ನ ಸಹೋದರ ಏಸಾವನ ಬಗ್ಗೆ ಅವನು ಭಯದಿಂದ ತುಂಬಿದ್ದನು. ಮತ್ತೆ ವೈಯಕ್ತಿಕವಾಗಿ ದೇವರೊಂದಿಗೆ ಹೋರಾಡುತ್ತಾನೆ. ಅವನ ಹಳೆಯ ಅಭ್ಯಾಸಗಳು ಮತ್ತು ಆಲೋಚನೆಗಳನ್ನು ಬಿಟ್ಟುಬಿಡುವಂತೆ ದೇವರು ಹೇಳಿರುತ್ತಾರೆಂದು ಭಾವಿಸುತ್ತೇನೆ. ಬದಲಾವಣೆ ಹೊಂದಿದ ಯಾಕೋಬನು ಇಸ್ರಾಯೇಲ್ ಆಗಿ ಮಾರ್ಪಟ್ಟನು. ದೇವರಿಂದ ಆಶೀರ್ವಾದ ಪಡೆದನು. ತನ್ನ ಸಹೋದರನೂ ಸಹ ದ್ವೇಷವನ್ನು ಮರೆತೇ ಹೋಗುತ್ತಾನೆ.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರನೇ! ದೇವರ ದೃಷ್ಟಿಯಲ್ಲಿ ನೀವು ಸರಿಯಾಗಿದ್ದೀರಾ? ಕೊರತೆಯುಳ್ಳವರಾಗಿದ್ದರೂ ಅದನ್ನು ಎತ್ತಿ ತೋರಿಸುವವನಲ್ಲ ನಮ್ಮ ದೇವರು. ಲೋಪದೋಷಗಳನ್ನು ಎತ್ತಿ ತೋರಿಸಿ ಅದನ್ನು ವಾಸಿಮಾಡುವ ದೇವರಾಗಿದ್ದಾರೆ. ನಿಮ್ಮ ಶಾರೀರಿಕ ಸ್ವಭಾವವನ್ನು ಬದಲಾಯಿಸಿ ನಿಮ್ಮನ್ನು ಆಶೀರ್ವದಿಸಲು ದೇವರು ಸಿದ್ಧವಾಗಿದ್ದಾರೆ. ಶಾರೀರಿಕ ಸ್ವಭಾವವನ್ನು ಬದಲಾಯಿಸಿಕೊಂಡು ಆಶೀರ್ವಾದ ಪಡೆಯಲು ನೀವು ಸಿದ್ಧರಿದ್ದೀರಾ? ಅಥವಾ ನೀವಿನ್ನೂ ಹೋರಾಡುತ್ತಲೇ ಹೋಗುತ್ತೀರಾ? ನಿರ್ಧಾರ ನಿಮ್ಮ ಕೈಯಲ್ಲಿದೆ! ಅಪ್ಪಿಕೊಳ್ಳುವ ತೋಳುಗಳು ಉತ್ಸಾಹದಿಂದ ಚಾಚಲ್ಪಟ್ಟಿದೆ.

- L. ಅಲಗರಸಾಮಿ

 

ಪ್ರಾರ್ಥನಾ ಅಂಶ:

ಆಸ್ಪತ್ರೆ ಸೇವೆಯ ಮೂಲಕ ಭೇಟಿಯಾಗುವ ರೋಗಿಗಳು ಆತ್ಮದಲ್ಲಿ ಮತ್ತು ದೇಹದಲ್ಲಿ ಗುಣವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet