By Village Missionary Movement
Wednesday, 16-Nov-2022ಧೈನಂದಿನ ಧ್ಯಾನ(Kannada) – 17.11.2022
ಬಸ್ಸಿನಲ್ಲಿ ಕಲಿತ ಪಾಠ
"ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಿರಿ" - ಯಾಕೋಬ 5:20
ಒಮ್ಮೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಜಾಗವಿಲ್ಲದೆ ಮೆಟ್ಟಿಲುಗಳ ಪಕ್ಕದಲ್ಲಿ ನಿಂತು ನನ್ನ ಬ್ಯಾಗನ್ನು ಮೆಟ್ಟಿಲುಗಳ ಮೇಲೆ ಇಟ್ಟಿದ್ದೆ. ಅದನ್ನು ಗಮನಿಸಿದ ವೃದ್ಧರೊಬ್ಬರು ನನ್ನನ್ನು ಕರೆದು, ನಿಮ್ಮ ಚೀಲವನ್ನು ಬಸ್ಸಿನೊಳಗೆ ಇಡಿ. ಹೊರ ಬೀಳಲಿದೆ ಎಂದರು. ನಾನು ಅವರನ್ನು ಹಿಂದೆಂದೂ ನೋಡಿರಲಿಲ್ಲ. ಆದರೆ ಅವರ ಕ್ರಿಯೆಯು ಮಾನವೀಯತೆಯ ಮೇಲೆ ಆಧಾರಿತವಾಗಿತ್ತು. ನಾನು ಅಪರಿಚಿತ ವ್ಯಕ್ತಿಯಾಗಿದ್ದರೂ ನನ್ನ ಮೇಲೆ ಅವರ ಕಾಳಜಿ ಎದ್ದುಕಾಣುತ್ತಿತ್ತು. ನನ್ನ ಹೃದಯದಲ್ಲಿ ತಕ್ಷಣ ಏರ್ಪಟ್ಟ ಭಾವನೆ ಏನೆಂದರೆ, ನನ್ನ ಸುತ್ತಲೂ ನಾಶವಾಗುತ್ತಿರುವವರನ್ನು ಬಿಡಿಸಲು ನಾನು ಈ ರೀತಿ ಏನಾದರೂ ಮಾಡುತ್ತಿದ್ದೇನಾ? ಎಂದು ಯೋಚಿಸಿದೆ.
ಇಂದಿಗೂ ಎಷ್ಟೋ ಜನ ನಮ್ಮ ಕಣ್ಣೆದುರೇ ನಾಶವಾಗುತ್ತಿದ್ದಾರೆ. ಕುಡಿತ, ವ್ಯಭಿಚಾರ, ವೇಶ್ಯಾವಾಟಿಕೆ, ಮಾದಕ ವ್ಯಸನಗಳು ಹಲವು ಪಾಪಗಳು ವಿನಾಶದತ್ತ ಸಾಗುತ್ತಿವೆ. ಅಂಥವರ ಮೇಲೆ ಕ್ರಿಸ್ತನನ್ನು ಅಂಗೀಕರಿಸಿರುವ ನಮ್ಮ ದೃಷ್ಟಿ ಹೇಗಿದೆ? ಸಾವಿನ ನಂತರದ ಜೀವನ, ನ್ಯಾಯತೀರ್ಪು, ನಿತ್ಯಜೀವ ಮತ್ತು ನರಕ ಇವೆಲ್ಲವುಗಳ ಬಗ್ಗೆ ತಿಳಿದಿರುವ ನಾವು ಅವರಿಗೆ ಏನು ಮಾಡಿದ್ದೇವೆ? ಅವರು ರಕ್ಷಿಸಲ್ಪಡಬೇಕೆಂಬ ಕಾಳಜಿ ಇದೆಯೇ?
ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ ಒಂದು ಸಾಮ್ಯವನ್ನು ಹೇಳಿದರು. ಒಬ್ಬಾನೊಬ್ಬ ಮನುಷ್ಯನು ಯೆರೂಸಲೇವಿುನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನು ಹಾಗೆಯೇ ಹೊರಟು ಹೋದನು. ಆದರೆ ಆ ಮಾರ್ಗವಾಗಿ ಬಂದ ಒಬ್ಬ ಸಮಾರ್ಯದವನು ಅವನನ್ನು ಕಂಡು ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. ಹೌದು, ಈ ಸಾಮ್ಯವು ನಮಗೆ ಹೇಳುವ ಇನ್ನೊಂದು ಸತ್ಯವೇನು? ನಿತ್ಯ ಮರಣದ ಕಡೆಗೆ ಹೋಗುತ್ತಿರುವವರ ಮೇಲೆ ಮನಮರುಗಿ ಗಾಯಕಟ್ಟಿ ದೇವರ ಬಳಿಗೆ ಕೊಂಡೊಯ್ಯುವುದೇ ಆತ್ಮ ಆದಾಯ. ಅದನ್ನು ಮಾಡುವುದೇ ನಮ್ಮ ಕರ್ತವ್ಯ!
ಯಾರೆಂದು ತಿಳಿಯದ ಒಬ್ಬ ಮುದುಕನಿಗೇ ನನ್ನ ವಸ್ತುವಿನ ಮೇಲೆ ಅಷ್ಟೊಂದು ಅಕ್ಕರೆ ತೋರುವಂತೆ ಮಾಡಿತು ಮಾನವೀಯತೆ ಎಂದು ಹೇಳುವುದಾದರೆ, ಕ್ರೈಸ್ತರು ಎಂದು ಹೇಳಿಕೊಳ್ಳುವ ನಮ್ಮ ಹೃದಯದಲ್ಲಿ ಆತ್ಮಭಾರ ಇಲ್ಲದಿರುವುದೇಕೆ? ದೇವರನ್ನು ಪ್ರೀತಿಸುವ ಒಬ್ಬ ವ್ಯಕ್ತಿಯು ಆತ್ಮ ಆದಾಯ ಮಾಡದೇ ಸುಮ್ಮನಿರಲು ಆಗುವುದೇ ಇಲ್ಲ. ಸುವಾರ್ತೆ ಸಾರುವುದು ನಮ್ಮ ಕರ್ತವ್ಯ! ನಾವು ಘೋಷಿಸದಿದ್ದರೆ ನಮಗೆ ಅಯ್ಯೋ! ಆದ್ದರಿಂದ ಆತ್ಮಗಳನ್ನು ಗೆಲ್ಲೋಣ. ಜನರನ್ನು ನರಕದ ಜೀವನದಿಂದ ತಿರುಗಿಸಿ ಯೇಸುವಿನ ಬಳಿಗೆ ಕರೆದೊಯ್ಯೋಣ.
- Bro. ವಿಲಿಯಮ್ಸ್
ಪ್ರಾರ್ಥನಾ ಅಂಶ:
ನಮ್ಮ ಮಿಷನರಿಗಳು ಪ್ರತಿದಿನ 100 ಹಸ್ತ ಪ್ರತಿಗಳನ್ನು ನೀಡುತ್ತಿದ್ದಾರೆ. ಇದನ್ನು ಸ್ವೀಕರಿಸುವವರು ಯೇಸುವನ್ನು ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482