Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.11.2022
Share:

By Village Missionary Movement

Monday, 14-Nov-2022

ಧೈನಂದಿನ ಧ್ಯಾನ(Kannada) – 15.11.2022

 

ಕಾಪಾಡಲಿ

 

"...ನಾನು ಪಿತ್ರಾರ್ಜಿತ ಸ್ವಾಸ್ತ್ಯವನ್ನು ನಿನಗೆ ಮಾರದಂತೆ ಯೆಹೋವನು ನನ್ನನ್ನು ತಡೆಯಲಿ ಎಂದು ಉತ್ತರಕೊಟ್ಟನು" - 1 ಅರಸುಗಳು 21: 3

 

ಒಂದು ಊರಿನಲ್ಲಿ ಭದ್ರತೆಯ ಪಾಠಶಾಲೆ ಎಂಬ ಹೆಸರಿನಲ್ಲಿ ಒಂದು ಶಾಲೆಯು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಪ್ರತಿದಿನ ಬೆಳಿಗ್ಗೆ ಅವರು ಸುಂದರವಾದ ಕ್ರೈಸ್ತ ಸ್ತೋತ್ರ ಹಾಡುಗಳನ್ನು ಕಲಿಸುತ್ತಿದ್ದರು. ಒಂದು ದಿನ ಅನ್ಯಮತಕ್ಕೆ ಸೇರಿದ ಚಳುವಳಿಯವರು, ಆ ಶಾಲೆಗೆ ದೊಡ್ಡ ಮೊತ್ತದ ಹಣವನ್ನು ನೀಡುತ್ತೇವೆಂದು ಆ ಶಾಲೆಗೆ ಮಾತು ಕೊಟ್ಟಿದ್ದರು. ಶಾಲೆಯ ಉದ್ದೇಶವೇ ಬದಲಾಯಿತು. ಆ ನಿರ್ವಾಹಕರು ಪರಲೋಕದಿಂದ ಸಿಗುವ ಆಶೀರ್ವಾದಗಳನ್ನು ಅಲ್ಪವಾದ ಈ ಲೌಕಿಕ ಹಣಕ್ಕೆ ಮಾರಿದರು. ಎಷ್ಟು ಕರುಣಾಜನಕ! ದ್ರಾಕ್ಷಿತೋಟವು ಸೊಪ್ಪಿನ ತೋಟವಾಗಿ ಮಾರ್ಪಟ್ಟಿತು.

 

ನಾಬೋತನಿಗೆ ಇದ್ದದ್ದು ಪಿತ್ರಾರ್ಜಿತ ಸ್ವಾಸ್ತ್ಯವಾದ ದ್ರಾಕ್ಷೇತೋಟ. ಅರಸನಾದ ಅಹಾಬನು ಅದನ್ನು ಸೊಪ್ಪಿನ ತೋಟವನ್ನಾಗಿ ಮಾಡಲು ಬಯಸುತ್ತಾನೆ. ಆದರೆ ಅರಸನು ನಾಬೋತನೊಡನೆ ಮಾತಾಡಿದಾಗ ಅವನು ಮಾರುವುದಕ್ಕೆ ಅಥವಾ ಬೇರೆ ಯಾವುದೇ ದ್ರಾಕ್ಷಿತೋಟಕ್ಕೆ ಒಪ್ಪಲಿಲ್ಲ. ನಾಬೋತನ ಆಲೋಚನೆಯು, "ಇದು ನನ್ನ ಪಿತ್ರಾರ್ಜಿತ ಸ್ವಾಸ್ಥ್ಯ" ನನ್ನ ಪೂರ್ವಜರು ಕಾನಾನ್ ದೇಶಕ್ಕೆ ಬಂದಾಗ, ಈ ಸ್ವಾಸ್ತ್ಯವನ್ನು ಪಡೆಯಲು 31 ರಾಜರೊಂದಿಗೆ ಹೋರಾಡಿದರು ಎಂದು ಭಾವಿಸಿದ್ದನು. ನಾಬೋತನು ಕಲ್ಲೆಸೆಯಲ್ಪಟ್ಟಾಗಲೂ (1 ಅರಸುಗಳು 9:14) ತನ್ನ ಸ್ವಾಸ್ಥ್ಯವನ್ನು ಬಿಟ್ಟುಕೊಡಲಿಲ್ಲ!

 

ದೇವರ ಮಗುವೇ! ಕಾನಾನ್ ದೇಶದ ಸ್ವಾಸ್ಥ್ಯಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದು, ಪವಿತ್ರಾತ್ಮನು ಕೊಟ್ಟಿರುವ ವರಗಳು ಮತ್ತು ಫಲಗಳೆಂಬ ಸ್ವಾತಂತ್ರ್ಯಗಳು! ಅನೇಕ ಸಲ ಈ ಲೋಕದ ಅಧಿಪತಿಯಾದ ಸೈತಾನನು ನಮ್ಮೊಂದಿಗೆ ಚೌಕಾಸಿ ಮಾಡಲು ಬರುತ್ತಾನೆ. ಅವನು ನಾಶವಾಗುವ ಲೌಕಿಕ ಗುಣಗಳನ್ನು ಪ್ರದರ್ಶಿಸುವ ಮೂಲಕ ಬಾಡದ ಮತ್ತು ನಾಶವಾಗದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಉದ್ದೇಶಿಸಿದ್ದಾನೆ. ದ್ರಾಕ್ಷೇತೋಟದ ಆಧ್ಯಾತ್ಮಿಕ ಜೀವನವನ್ನು ಎಂದಿಗೂ ಕಳೆದುಕೊಳ್ಳಬೇಡ. (ಕೀರ್ತನೆ 119:111) ರಲ್ಲಿ "ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ" ಎಂದು ಹೇಳಿದ ದಾವೀದನ ಹಾಗೆ, ಪಿತ್ರಾರ್ಜಿತ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಹೋರಾಡಿದ ನಾಬೋತನಂತೆ, ನಾವು ಸಹ ಯೇಸುವಿನ ಶಿಲುಬೆಯ ಮರಣದಿಂದ ನಾವು ಗಳಿಸಿದ ಶಾಶ್ವತ ಸ್ವಾಸ್ಥ್ಯವನ್ನು, ಆತ್ಮದ ವರಗಳನ್ನೂ ಕಳೆದುಕೊಳ್ಳದೆ ಕಾಪಾಡಿಕೊಳ್ಳೋಣ.

- A. ಬ್ಯೂಲಾ

 

ಪ್ರಾರ್ಥನಾ ಅಂಶ:

ಪ್ರತಿಯೊಂದು ಸೇವಾಕ್ಷೇತ್ರದಲ್ಲೂ ತಿಂಗಳ 30 ದಿನಗಳಲ್ಲಿ 30 ಮನೆಗಳಲ್ಲಿ ಪ್ರಾರ್ಥನಾ ಗುಂಪುಗಳು ಕ್ರಮವಾಗಿ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş