By Village Missionary Movement
Monday, 14-Nov-2022ಧೈನಂದಿನ ಧ್ಯಾನ(Kannada) – 14.11.2022 (Youth Special)
ನಂಬಿಕೆಯ ಪ್ರಾರ್ಥನೆ
"...ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು;..." - ಯಾಕೋಬ 5:15
ಸೆಲ್ವಂ 11 ವರ್ಷದ ಅನಾಥ ಬಾಲಕ. ಅವನು ಸ್ವಚ್ಛತೆ ಇಲ್ಲದ ಬೀದಿಗಳಲ್ಲಿ ವಾಸಿಸುತ್ತಿದ್ದದರಿಂದ, ಭಯಾನಕ ರೋಗವು ಅವನನ್ನು ತಾಕಿತು. ರೋಗದ ತೀವ್ರತೆಯಿಂದಾಗಿ ದೇಹದ ಅಂಗಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಬದುಕಲು ಸಾಧ್ಯ ಎಂದು ವೈದ್ಯರು ಹೇಳಿಬಿಟ್ಟರು. ಸೆಲ್ವಂ ಚೆನ್ನಾಗಿ ಪ್ರಾರ್ಥಿಸುವ ವ್ಯಕ್ತಿಯಾಗಿದ್ದನು. ಒಳ್ಳೆಯ ಸ್ನೇಹಿತರೊಂದಿಗೆ ಒಡನಾಟ ಇಟ್ಟುಕೊಂಡಿದ್ದನು. ವೈದ್ಯರೂ ಸಹ ಅವನಿಗೆ ಸಹಾಯ ಮಾಡಲು ಮುಂದೆ ಬಂದರು. ಚಿಕಿತ್ಸೆಗೆ ಮುನ್ನ ಬಾಲಕ ಮಾಡಿದ್ದು ಅವನ ಕೌಶಲ್ಯಕ್ಕೆ ದೊಡ್ಡ ಸವಾಲಾಗಿದೆ ಎಂದು ವೈದ್ಯರು ಅರಿತುಕೊಂಡರು. ಸೆಲ್ವಂ ನಂಬಿಕೆಯಿಂದ ಮೊಣಕಾಲೂರಿ "ವೈದ್ಯರು ಅಧಿಕಶ್ರಮವಿಲ್ಲದೆ ಶಸ್ತ್ರಚಿಕಿತ್ಸೆ ಮಾಡಲು ಸಹಾಯ ಮಾಡಿ ಆಮೆನ್" ಎಂದು ಪ್ರಾರ್ಥಿಸಿದನು. "ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ... ದೇವರಾತ್ಮನ ಬಲವನ್ನು ತೋರ್ಪಡಿಸುವದಾಗಿದೆ." (1ಕೊರಿಂಥ. 2:4,5) ಶಸ್ತ್ರಚಿಕೆತ್ಸೆಯನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಲು ಕಾರಣವಾಗಿತ್ತು. ಸೆಲ್ವಂನ ನಂಬಿಕೆಯ ಪ್ರಾರ್ಥನೆಯೇ ಇದಕ್ಕೆ ಕಾರಣ ಎಂದು ವೈದ್ಯರು ದೇವರನ್ನು ಕೊಂಡಾಡಿದರು.
ಸತ್ಯವೇದದಲ್ಲಿಯೂ ಸಹ ದಾನಿಯೇಲನೆಂಬ ಪ್ರಾರ್ಥನಾ ವೀರನನ್ನು ನೋಡುತ್ತೇವೆ. ರಾಜನ ಆಜ್ಞೆಯನ್ನು ಪಾಲಿಸದೆ ತನ್ನ ದೇವರ ಮುಂದೆ ಮೂರು ಬಾರಿ ಮಂಡಿಯೂರಿ ಪ್ರಾರ್ಥಿಸಿದನು. ದಾನಿಯೇಲನು ಸಿಂಹಗಳ ಗವಿಯಲ್ಲಿ ಹಾಕಲ್ಪಟ್ಟರೂ ಯಾವುದೇ ಹಾನಿಗೊಳಗಾಗದೆ ಹೊರಬಂದನು. ಏಕೆಂದರೆ ಯಾವಾಗಲೂ ಪ್ರಾರ್ಥಿ ಸುವ ನಿನ್ನ ದೇವರು ನಿನ್ನನ್ನು ಬಿಡಿಸುವನು ಎಂದು ರಾಜನೇ ಸಾಕ್ಷಿ ಹೇಳುವಂತೆ ಮಾಡಿದರು (ದಾನಿಯೇಲ 6:16)
ಪ್ರಿಯರೇ, ಇದನ್ನು ಓದುತ್ತಿರುವ ನಿಮ್ಮ ನಂಬಿಕೆಯು ಎಂಥದ್ದಾಗಿದೆ? ಎಲ್ಲಾ ಸಮಯಗಳಲ್ಲಿ ಆತನ ಮೇಲೆ ಅವಲಂಬಿತರಾಗಿದ್ದೇವೆಯೇ ಆತನಲ್ಲೇ ನಂಬಿಕೆ ಇಟ್ಟಿದ್ದೇವೆಯೇ? ಅಥವಾ ದೇವರಿಗೂ ನನಗೂ ಯಾವ ಸಂಬಂಧವೂ ಇಲ್ಲ ಅಂದುಕೊಂಡು ಮಾಡುವ ಎಲ್ಲಾ ಕೆಲಸಗಳಲ್ಲಿ ಸಾಧ್ಯವಿಲ್ಲ ಆಗಲ್ಲ ಎಂದು ಇನ್ನೂ ಅವಿಶ್ವಾಸಿಗಳಾಗಿದ್ದೇವೆಯೇ? ಎಂದು ಯೋಚಿಸಿ ನೋಡೋಣ! ಸೆಲ್ವಂನ ಹಾಗೆ ನಾವೂ ಸಹ ದೇವರ ಮೇಲಿಟ್ಟಿರುವ ನಂಬಿಕೆಯನ್ನು ಮತ್ತೊಬ್ಬರಿಗೂ ಒತ್ತಿ ಹೇಳೋಣ. ನಂಬಿಕೆಯ ಶಕ್ತಿಯಿಂದ ಆನಂದಿಸೋಣ.
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ಹಳ್ಳಿಗಳಲ್ಲಿ Tution Center ಮೂಲಕ ಸಂಧಿಸಲ್ಪಡುವ ಪ್ರತಿಯೊಂದು ಮಕ್ಕಳೂ ಯೇಸುವಿನ ಪ್ರೀತಿಯನ್ನು ಕಂಡುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482