Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.11.2022
Share:

By Village Missionary Movement

Saturday, 12-Nov-2022

ಧೈನಂದಿನ ಧ್ಯಾನ(Kannada) – 13.11.2022

 

ಸೃಷ್ಟಿಕರ್ತನು

 

“...ಸರ್ವವು ಆತನ ಮುಖಾಂತರವಾಗಿ... ಸೃಷ್ಟಿಸಲ್ಪಟ್ಟಿತು" - ಕೊಲೊಸ್ಸೆ. 1:16

 

ರೇಮಂಡ್ ತನ್ನ ಚಿಕ್ಕ ಮಗಳು ರೀನಾ ಜೊತೆ ಶಾಪಿಂಗ್ ಗೆ ಹೋಗಲು ತಯಾರಾಗುತ್ತಿದ್ದರು. ರೀನಾ ಕೂಡ ತುಂಬಾ ಸಂತೋಷದಿಂದ, ನಾನು ಅಂಗಡಿಗೆ ಹೋಗುತ್ತಿದ್ದೇನೆ! ಅಪ್ಪ ಇವತ್ತು ನಾನು ಏನು ಕೇಳಿದರೂ ತೆಗೆದುಕೊಡುತ್ತಾರೆ... ಅಯ್ ಜಾಲಿ ಜಾಲಿ ಎಂದು ಅಮ್ಮನಿಗೆ Bye ಹೇಳಿದಳು. ಪುಟ್ಟ ಮಕ್ಕಳೇ, ನಿಮಗೂ ಕೂಡ ಅಪ್ಪನೊಂದಿಗೆ ಶಾಪಿಂಗ್ ಗೆ ಹೋಗಲು ತುಂಬಾ ಇಷ್ಟಾನಾ? ಸರಿ. ಆದರೆ ಹಠ ಮಾಡಿ ತೆಗೆದುಕೊಡಿ ಎಂದು ತೊಂದರೆ ಪಡಿಸಬಾರದು. ನೀವೆಲ್ಲಾ ತುಂಬಾ ಒಳ್ಳೆಯ ಮಕ್ಕಳು ಅಲ್ವಾ...

 

ರೇಮಂಡ್ ಅಂಕಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ಕಶ ಶಬ್ದದೊಂದಿಗೆ ಕಾರು ನಿಂತುಬಿಟ್ಟಿತು. ಅವರು ಕೆಳಗಿಳಿದು ಏನೇನೋ ಮಾಡಿ ಪ್ರಯತ್ನಿಸಿದರು. ಕಾರು ಚಲಿಸಲೇ ಇಲ್ಲ. ಪುಟ್ಟ ರೀನಾಳ ಸಂತೋಷವೂ ಟುಸ್ ಅಂಥ ಆಗೋಯ್ತು. ಸ್ವಲ್ಪ ಸಮಯದ ನಂತರ, ಬೆತ್ತವನ್ನು ಹಿಡಿದುಕೊಂಡು ಹೋಗುತ್ತಿದ್ದ ಒಬ್ಬ ಮುದುಕ ನಾನು ನಿಮಗೆ ಏನಾದರೂ ಸಹಾಯ ಮಾಡಬಹುದಾ ಎಂದು ಕೇಳಿದರು. ರೇಮಂಡ್ ಅಂಕಲ್ ಅವರನ್ನು ಮೇಲಿಂದ ಕೆಳಗೆ ನೋಡಿ, ಇವರು ನಮಗೆ ಏನು ಸಹಾಯ ಮಾಡಲು ಸಾಧ್ಯ ಅಂದುಕೊಂಡು ನಾನು ನೋಡಿಕೊಳ್ಳುತ್ತೇನೆ ಹೋಗಿ ಎಂದು ಹೇಳಿಬಿಟ್ಟರು. ಮತ್ತೆ ಏನೇನೋ ಮಾಡಿ ನೋಡಿದರು... ಕಾರ್ Start ಆಗಲೇ ಇಲ್ಲ. ಅಪ್ಪಾ ನನಗೆ ತುಂಬಾ ಬೋರ್ ಆಗುತ್ತಿದೆ ಎಂಬ ರೀನಾಳ ಮಾತುಗಳನ್ನು ಕೇಳಿದ ರೇಮಂಡ್‌ ಅಂಕಲ್ ಗೆ ತುಂಬಾ ಕಷ್ಟವಾಯಿತು. ವಾಕಿಂಗ್ ಮುಗಿಸಿ ಹಿಂತಿರುಗಿದ ಆ ವಯಸ್ಸಾದ ತಂದೆಯವರು ಮತ್ತೆ ಬಂದು ನಾನೇನಾದರೂ ಸಹಾಯ ಮಾಡಬಹುದೇ ಎಂದು ಕೇಳಿದರು.

 

ಬೇಸರಗೊಂಡಿದ್ದ ರೇಮಂಡ್ ಸರಿ ಎಂದು ಹೇಳುವ ಮೊದಲು ರೀನಾ ಸರಿ ಅಜ್ಜ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಹೇಳಿದಳು. ಅವರು ಕೆಲ ನಿಮಿಷಗಳು ಏನೋ ಮಾಡಿದರು. ನಂತರ ಕಾರು ಸ್ಟಾರ್ಟ್ ಮಾಡಲು ಹೇಳಿದರು. ಎರಡು ಕೆಮ್ಮು ಕೆಮ್ಮಿ ಕಾರು ಸ್ಟಾರ್ಟ್ ಆಗೋಯ್ತು. ತಂದೆಗೆ ತಿಳಿಯದಿರುವುದು ವಯಸ್ಸಾದ ತಾತನಿಗೆ ಗೊತ್ತಿದೆಯಲ್ಲಾ! ಎಂಬಂತೆ ನೋಡಿದಳು ರೀನಾ. ಆ ಫೋರ್ಡ್ ಕಾರಿನ ತಯಾರಕರೇ ಈ ವಯಸ್ಸಾದ ತಾತ. ಆದ್ದರಿಂದ ಅವರು ಅದನ್ನು ಅಷ್ಟು ಸುಲಭವಾಗಿ ಸರಿಪಡಿಸಿದರೆಂದು ಇಬ್ಬರಿಗೂ ತಿಳಿದಿರಲಿಲ್ಲ. ಅವರು ಆಶ್ಚರ್ಯದಿಂದ ಅವರತ್ತ ನೋಡಿದರು. ರೇಮಂಡ್ “ಧನ್ಯವಾದಗಳು ಅಯ್ಯಾ! ನಿಮ್ಮ ಹೆಸರೇನು?" ಎಂದು ಕೇಳಿದಾಗ "ನಾನು ಹೆನ್ರಿ ಫೋರ್ಡ್" ಎಂದು ಹೇಳಿಬಿಟ್ಟು ಕೈ ಕುಲುಕಿ ಟಾ...ಟಾ... ಎಂದು ಹೇಳಿ ಹೊರಟು ಹೋದರು. ಅವರು ಹೇಳಿದ ನಂತರ ಎಲ್ಲವೂ ಅರ್ಥವಾಯಿತು. ಅವರು ಕೃತಜ್ಞತೆಯಿಂದ ಅವರಿಗೆ ಕೈಯಾಡಿಸಿ ಹೋದರು. ತಂದೆಯು ತನ್ನ ಮಗಳೊಂದಿಗೆ ಮಾತನಾಡಲು ಪ್ರಾರಂಭಿಸಿದರು, "ಅಂತೆಯೇ, ನಮಗೆ ಸಂಭವಿಸುವ ಕಷ್ಟಕರ ಸಂದರ್ಭಗಳ ಬಗ್ಗೆ ಸೃಷ್ಟಿಕರ್ತನಾದ ಯೇಸಪ್ಪನಿಗೆ ಹೇಳುವಾಗ, ಅವರು ಅವುಗಳನ್ನು ಸುಲಭವಾಗಿ ಸರಿಪಡಿಸುತ್ತಾರೆ. ಏನು ರೀನಾ ಅಪ್ಪ ಹೇಳಿದ್ದು ಅರ್ಥವಾಗುತ್ತಿದೆಯಾ? ನೀನು ಎದುರುನೋಡುತ್ತಿದ್ದ ಸೂಪರ್ ಮಾರ್ಕೆಟ್ ಬಂತು'' ಎಂದರು. ರೀನಾಗೆ ಸ್ವಲ್ಪ ಸಂಡೇ ಕ್ಲಾಸಿಗೆ ಹೋದಂತೆ ಅನಿಸಿತು...

 

ಪ್ರೀತಿಯ ತಮ್ಮ-ತಂಗಿ ನನ್ನನ್ನು ನೋಡಿಕೊಳ್ಳಲು, ನನಗೆ ಸಹಾಯ ಮಾಡಲು, ನನ್ನ ಅಗತ್ಯಗಳನ್ನು ಪೂರೈಸಲು ನನಗೆ ಯಾರೂ ಇಲ್ಲ ಎಂದು ನೀವು ಭಾವಿಸುತ್ತಿದ್ದೀರಾ? ನಿಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನು ನಿಮ್ಮೊಂದಿಗಿದ್ದಾರೆ. ನಿಮ್ಮ ಸ್ಥಿತಿ ಹೇಗಿದ್ದರೂ ಅವರು ಸರಿಪಡಿಸುತ್ತಾರೆ. ಚಿಂತಿಸಬೇಡಿರಿ!

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al