By Village Missionary Movement
Saturday, 12-Nov-2022ಧೈನಂದಿನ ಧ್ಯಾನ(Kannada) – 12.11.2022
ಶಾಪ
"ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು." - ಜ್ಞಾನೋಕ್ತಿ 3:33
ಸುಮಾರು 20 ವರ್ಷಗಳ ಹಿಂದೆ ಒಂದು ದಿನ ವಯಸ್ಸಾದ ಕ್ರೈಸ್ತ ತಾಯಿಯೊಬ್ಬರು ಸೇವಕರೊಬ್ಬರನ್ನು ತನ್ನ ಮನೆಗೆ ಪ್ರಾರ್ಥಿಸಲು ಕರೆದರು. ಸಂಜೆ 7 ಗಂಟೆ ಸುಮಾರಿಗೆ ಸೇವಕರು ಪ್ರಾರ್ಥನೆ ಮಾಡಲು ಹೋದರು. ಆ ತಾಯಿಯ ಮನೆಯ ಬಾಗಿಲಲ್ಲಿ ಒಂದು ದೊಡ್ಡ ಸ್ವೀಟ್ ಸ್ಟಾಲ್ ಇತ್ತು. ಅಲ್ಲಿಂದ ಮುಂದಿನ ಕೋಣೆಯಲ್ಲಿದ್ದ ಮಂಚದ 4 ತುದಿಗಳಲ್ಲಿ ಹಗ್ಗಗಳಿಂದ ಕಟ್ಟಿಹಾಕಿದ್ದ ಒಬ್ಬ ಯೌವನಸ್ಥ ಹುಡುಗನನ್ನು ಕಂಡರು. ಮುಖ ಪೂರ್ತಿ ಗಡ್ಡದೊಂದಿಗೆ, ಅರೆಬರೆ ಬಟ್ಟೆ ಹಾಕಿಕೊಂಡು ಹುಚ್ಚನಂತೆ ಕಾಣುತ್ತಿದ್ದನು. ನಂತರ ಅವರು ಮುಂದಿನ ಕೋಣೆಯ ಬಾಗಿಲು ತೆರೆದರು. ಅಲ್ಲಿ ಅವರು ಮೆದುಳಿನ ಬೆಳವಣಿಗೆಯಿಲ್ಲದ ಹದಿಹರೆಯದ ಹುಡುಗಿಯನ್ನು ನೋಡಿದರು. ಆ ತಾಯಿ ಕಣ್ಣೀರಿನಿಂದ, "ನಮಗೆ 60 ವರ್ಷ ಆಗೋಯ್ತು. ನಮ್ಮ ನಂತರ ಈ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ನಮಗೆ ದೊಡ್ಡ ಮನೆ, ಅಂಗಡಿ, ಆಸ್ತಿ, ಎಲ್ಲಾ ಸೌಕರ್ಯಗಳಿವೆ. ಆದರೆ ಸುಖವೂ ಇಲ್ಲ ಶಾಂತಿಯೂ ಇಲ್ಲ. ಯಾರ ಪಾಪ, ಶಾಪವೋ ಗೊತ್ತಿಲ್ಲ. ದಿನವೂ ನರಕಯಾತನೆ ಅನುಭವಿಸುತ್ತಿದ್ದೇವೆ’’ ಎಂದು ಹೇಳಿ "ನೀವು ನಮಗಾಗಿ ಪ್ರಾರ್ಥಿಸಿ" ಎಂದರು. ಆ ಸೇವಕರು ಪ್ರಾರ್ಥಿಸಿ ಬಂದರು. ನಂತರ, ಹಿರಿಯ ಸೇವಕರಿಗೆ ನಡೆದ ಸಂಗತಿಯನ್ನು ಹೇಳಿದಾಗ, ಅವರು ತಮ್ಮಾ.. ಇದು "ಶಾಪ" ಎಂದು ಹೇಳಿದರು.
ಶಾಪ ಎಂದರೇನು? ಶಾಪವೆಂದರೆ "ಕ್ಷಮಿಸಲಾಗದ ಪಾಪ" ಮತ್ತು "ದೇವರ ಕೋಪ". ನಮ್ಮ ಪಾಪಗಳಿಗಾಗಿ ನಾವು ಇನ್ನೂ ಜೀವಂತವಾಗಿರುವಾಗಲೇ ಕ್ಷಮೆಯನ್ನು ಕೇಳಬೇಕು ಎಂದರ್ಥ. ಇಲ್ಲದಿದ್ದಲ್ಲಿ ಅವರ ಸಂತಾನಕ್ಕೆ ಅದು “ಶಾಪ”ವಾಗಿ ಬರುತ್ತದೆ. ಸತ್ಯವೇದದಲ್ಲಿ ವಿಮೋಚನಕಾಂಡ 34:7 ರಲ್ಲಿ ತಂದೆಗಳ ದೋಷ ಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು ಎಂದು ಮೋಶೆಯ ಮೂಲಕ ಇಸ್ರಾಯೇಲ್ ಜನರಿಗೆ ಹೇಳಲಾಯಿತು. ಧರ್ಮೋಪದೇಶಕಾಂಡ 11:26 ರಲ್ಲಿ ವಾಕ್ಯ ಹೇಳುತ್ತದೆ. "ನೋಡಿರಿ, ಈ ಹೊತ್ತು ನಾನು ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ" ಎಂದು. ನಾವು ಯಾವುದನ್ನು ಆರಿಸಿಕೊಳ್ಳಲಿದ್ದೇವೆ? ಒಂದು ವೇಳೆ ನಾವು ಧೈರ್ಯವಾಗಿ ಪಾಪ ಮಾಡುತ್ತಾ ದುಷ್ಟರಾಗಿ ಜೀವಿಸುವಾಗ, ಶಾಪಗಳು ನಮ್ಮ ಮನೆಯನ್ನು ಆವರಿಸಿಕೊಳ್ಳುತ್ತವೆ. ನಾವು ನಮ್ಮ ಸಂತಾನಕ್ಕೆ ಸಂಪತ್ತನ್ನು ಸೇರಿಸುತ್ತೇವೆಯೋ ಇಲ್ಲವೋ, ನಾವು ಶಾಪಗಳನ್ನು ಸೇರಿಸಬಾರದು. ಪ್ರಿಯರೇ! ನಮ್ಮ ಜೀವನದಲ್ಲಿ ಶಾಪಗಳನ್ನು ಬದಲಾಯಿಸಲು ಶಾಪಗಳ ಸಂಕೇತವಾದ ಶಿಲುಬೆಯಲ್ಲಿ ಯೇಸು ಕ್ರಿಸ್ತನು ಮರಣಹೊಂದಿದರು. ಅವರ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಡಲಾಯಿತು. ಆ ಮುಳ್ಳು ಶಾಪವನ್ನು ಸೂಚಿಸುತ್ತದೆ. ನಮ್ಮ ಕುಟುಂಬದಲ್ಲೂ ಶಾಪವಿದ್ದರೆ ದೇವರಲ್ಲಿ ಕ್ಷಮೆ ಕೇಳಿ ಆತನ ರಕ್ತದಿಂದ ತೊಳೆಯಲ್ಪಟ್ಟಾಗ ಆ ಶಾಪ ತೊಲಗಿಹೋಗುತ್ತದೆ. ಯಾವುದೇ ರೀತಿಯ ಶಾಪವಾದರೂ ದೇವರು ನಿಮ್ಮನ್ನು ವಿಮೋಚಿಸುತ್ತಾರೆ. ಅವರ ಶಿಲುಬೆಯನ್ನು ದೃಷ್ಟಿಸಿ ನೋಡಿರಿ. ಖಂಡಿತವಾಗಿ ಮುಕ್ತಿ ಇದೆ.
- Bro. ಬರ್ನಬಾಸ್
ಪ್ರಾರ್ಥನಾ ಅಂಶ:
"ಕಣ್ಮಣಿ ಮಕ್ಕಳು ಯೇಸುವಿಗಾಗಿ ಪ್ರಾರ್ಥನಾ ಯೋಜನೆ" ಈ ಯೋಜನೆಯಲ್ಲಿ ಸೇರಿರುವ ಮಕ್ಕಳ ಭವಿಷ್ಯವು ಆಶೀರ್ವಾದವಾಗಿರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482