Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.11.2022
Share:

By Village Missionary Movement

Thursday, 10-Nov-2022

ಧೈನಂದಿನ ಧ್ಯಾನ(Kannada) – 11.11.2022

 

ಪ್ರಯಾಸಕ್ಕೆ ತಕ್ಕ ಪ್ರತಿಫಲ

 

"ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ" - 1 ಕೊರಿಂಥ 15:58

 

ಒಂದು ದಿನ ಭಾನುವಾರದ ಆರಾಧನೆಗೆ ಮೊದಲು, ಆ ಸಭೆಯ ಹಿರಿಯರು ವಯಸ್ಸಾದ ಬೋಧಕರನ್ನು ನೋಡಿ “ಬೋಧಕರೇ, ನಿಮ್ಮ ಉಪದೇಶ ಮತ್ತು ಸೇವೆಯಲ್ಲಿ ಏನೋ ತಪ್ಪಾಗಿದೆ. ಈ ವರ್ಷ ಒಬ್ಬ ವ್ಯಕ್ತಿ ಮಾತ್ರ ಸಭೆಗೆ ಸೇರಿದ್ದಾನೆ. “ಅದೂ ಸಹ ಒಬ್ಬ ಚಿಕ್ಕ ಹುಡುಗನೇ” ಎಂದು ಅವಾಚ್ಯವಾಗಿ ಮಾತಾಡಿದರು.

 

ಆ ದಿನ ಬೋಧಕರು ಖಿನ್ನತೆಗೊಳಗಾಗಿ ತನ್ನ ಸಭೆಗೆ ಸಂದೇಶವನ್ನು ನೀಡಿದರು. ಆರಾಧನೆ ಮುಗಿದ ಕೂಡಲೇ, ಅವರು ತಮ್ಮ ಸೇವೆಯನ್ನು ಬಿಟ್ಟು ದೂರ ಹೋಗಲು ಯೋಚಿಸಿದರು. ಎಲ್ಲರೂ ಹೋದ ನಂತರ ಹೊಸದಾಗಿ ಬಂದಿದ್ದ ಹುಡುಗ ಅವರ ಬಳಿಗೆ ಬಂದು, "ನಾನು ಕಷ್ಟಪಟ್ಟು ಓದಿದರೆ, ಒಂದು ದಿನ ನಾನು ಸಹ ಬೋಧಕನೋ ಅಥವಾ ಸುವಾರ್ತಿಕನೋ ಆಗಲು ಸಾಧ್ಯವಾ ?" ಎಂದು ಕೇಳಿದನು. ಬೋಧಕರು ತಮ್ಮ ಆತ್ಮೀಯಕಣ್ಣುಗಳಿಂದ ದರ್ಶನವನ್ನು ಕಂಡು, “ರಾಬರ್ಟ್, ನಾನು ಈಗಲೇ ದೇವರ ಕೈಯನ್ನು ನೋಡುತ್ತಿದ್ದೇನೆ. ದೇವರು ನಿನ್ನನ್ನು ಆಶೀರ್ವದಿಸಲಿ. ಹೌದು, ನೀನೊಬ್ಬ ಬೋಧಕನಾಗುತ್ತೀಯ ಎಂದರು.

 

ಹಲವು ವರ್ಷಗಳ ನಂತರ ಒಬ್ಬ ಹಿರಿಯ ಸುವಾರ್ತಾಬೋಧಕ ಆಫ್ರಿಕಾದಿಂದ ಲಂಡನ್‌ಗೆ ಬಂದರು. ಜನ ಅವರ ಬಗ್ಗೆ ಹೀಗೆ ಮಾತಾಡಿಕೊಂಡರು. ಅವರು ಆಫ್ರಿಕಾದ ಅತ್ಯಂತ ಕ್ರೂರ ಸ್ಥಳೀಯ ನಾಯಕರಲ್ಲಿ ಒಬ್ಬರನ್ನು ಒಳಗೊಂಡಂತೆ ಅನೇಕ ಆತ್ಮಗಳನ್ನು ಸಭೆಗೆ ಸೇರಿಸಿದ್ದಾರೆ, ಅವರ ಹೆಸರು ರಾಬರ್ಟ್ ಮೊಬೆಟ್ ಅಂತೆ! ಎಂದು. ಈ ರಾಬರ್ಟ್ ಮೊಬೆಟ್ ಅನೇಕ ವರ್ಷಗಳ ಹಿಂದೆ ಸ್ಕಾಟ್ಲೆಂಡ್‌ನಲ್ಲಿ ಭಾನುವಾರ ಬೆಳಿಗ್ಗೆ ಚರ್ಚ್‌ನಲ್ಲಿ ಮಾತನಾಡಿದ್ದ ಹುಡುಗ.

 

ಕ್ರಿಸ್ತನಲ್ಲಿ ಪ್ರಿಯರೇ, ನೀವು ದೇವರಿಗಾಗಿ ಪ್ರಯಾಸಪಟ್ಟು ಸೇವೆ ಮಾಡುತ್ತಾ ಆಯಾಸಗೊಂಡಿದ್ದೀರಾ? ನಮ್ಮ ಕರ್ತನಾದ ಯೇಸು ಕ್ರಿಸ್ತನು ನಿಮ್ಮ ಪ್ರಯತ್ನ ಮತ್ತು ನಿಮ್ಮ ಕೆಲಸವನ್ನು ಮರೆಯುವುದಿಲ್ಲ! "ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು" (ಮತ್ತಾಯ 10:42) ಹೇಳುತ್ತಾರೆ. ನಾವು ಮಾಡುವ ಕೆಲಸದಲ್ಲಿ ದೊಡ್ಡ ಪ್ರತಿಫಲ ತಕ್ಷಣವೇ ತಿಳಿಯದೇ ಇರಬಹುದು ಅಥವಾ ಮತ್ತೊಬ್ಬರ ದೃಷ್ಟಿಯಲ್ಲಿ ಕೊರತೆಯಾಗಿ ಕಾಣಬಹುದು. ಇದರಿಂದಾಗಿ ಬೇಸರಮಾಡಿಕೊಳ್ಳಬಾರದು. “ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ, ನಿಮ್ಮ ನೀತಿಯ ಬೆಳೆಯನ್ನು ಹೆಚ್ಚಿಸುತ್ತಾರೆ” ಎಂಬ ವಚನದಂತೆ ನಮ್ಮ ದೇವರು ನಿಮ್ಮನ್ನು ತಪ್ಪದೆ ಕೊರತೆಯಿಲ್ಲದೆ ನಡೆಸುತ್ತಾರೆ ನಂಬಿರಿ, ನೀವು ಸಮೃದ್ಧಿಯಾದ ಬೆಳೆಯನ್ನು ನೋಡುತ್ತೀರ. ಲಾಭವನ್ನು ಪಡೆಯುತ್ತೀರ. ದೇವರು ನಿಮ್ಮನ್ನು ಆಶೀರ್ವದಿಸಲಿ!

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

"ಯೆಹೋಶುವನೇ ಎದ್ದೇಳು" ಎಂದು ಯುವಕರಿಗಾಗಿ ಪ್ರತ್ಯೇಕವಾಗಿ ಹೊರಬಿಡುತ್ತಿರುವ ಪತ್ರಿಕೆಯ ಮೂಲಕ ಯುವಕರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet