Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.11.2022
Share:

By Village Missionary Movement

Wednesday, 09-Nov-2022

ಧೈನಂದಿನ ಧ್ಯಾನ(Kannada) – 10.11.2022

 

ಕನ್ನಡಿ

 

"ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟು ಮುಖವನ್ನು ನೋಡಿದ ಮನುಷ್ಯನಂತಿರುವನು" - ಯಾಕೋಬ 1:23

 

ಒಂದು ಬಾರಿ ಒಂದು ದೊಡ್ಡ ಕಂಪನಿಯೊಂದರ ಬಾಗಿಲಿನಲ್ಲಿ ಅಲ್ಲಿ ಕೆಲಸಮಾಡಲು ಬರುವವರಿಗೆ ಕಾಣುವಂತೆ ನೋಟೀಸು ಒಂದನ್ನು ನೇತು ಹಾಕಲಾಗಿತ್ತು. ಅದರಲ್ಲಿ ನಿಮ್ಮ ಬೆಳವಣಿಗೆಗೆ ತಡೆಯೊಡ್ಡುತ್ತಿದ್ದ ವ್ಯಕ್ತಿ ಇಂದು ಸತ್ತುಹೋದನು. ಅಂತಿಮ ಕಾರ್ಯಗಳನ್ನು ಕೆಳಗಿನ ಕೋಣೆಯಲ್ಲಿ ಇಂದು ನಡೆಸಲಾಗುತ್ತದೆ. ಎಲ್ಲರೂ ಬಂದು ಅದರಲ್ಲಿ ಸೇರುವಂತೆ ಆಹ್ವಾನಿಸಲಾಗುತ್ತಿದೆ ಎಂದು ಕರೆ ನೀಡಲಾಯಿತು. ಅದನ್ನು ನೋಡಿದ ಎಲ್ಲರಿಗೂ, ತಮ್ಮ ಜೊತೆಯಲ್ಲಿ ಕೆಲಸ ಮಾಡಿದವರು ಸತ್ತಿದ್ದಾರೆ ಎಂಬ ಬೇಸರವಿದ್ದರೂ ತಮ್ಮ ಬೆಳವಣಿಗೆಗೆ ಅಡ್ಡಿಪಡಿಸಿದವರು ಯಾರು ಎಂದು ಆಶ್ಚರ್ಯ ಮತ್ತು ಬೆರಗುಗಣ್ಣಿನಿಂದ ಕಾಯುತ್ತಿದ್ದರು. ಕೊನೆಗೆ ಕೋಣೆ ತೆರೆದಾಗ ಒಬ್ಬೊಬ್ಬರಾಗಿ ಶವಪೆಟ್ಟಿಗೆಯನ್ನು ನೋಡಲು ಮುಗಿಬಿದ್ದರು. ಹೋಗಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ. ಒಂದು ನಿಮಿಷ ಅವರಿಗೆ ಮಾತನಾಡಲಾಗಲಿಲ್ಲ. ಆ ಪೆಟ್ಟಿಗೆಯಲ್ಲಿ ಮುಖ ನೋಡಿಕೊಳ್ಳುವ ಕನ್ನಡಿ ಇತ್ತು. ಅವರು ನೋಡಿದಾಗ ಪೆಟ್ಟಿಗೆಯಲ್ಲಿ ಅವರ ಚಿತ್ರ ಕಾಣಿಸಿತು. ಅದರ ಪಕ್ಕದಲ್ಲಿ “ನಿನ್ನ ಬೆಳವಣಿಗೆಯನ್ನು ನಿನ್ನ ಹೊರತು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಬರೆದಿತ್ತು.

 

ಹಿಜ್ಕೀಯನು ಅಸ್ವಸ್ಥನಾಗಿದ್ದು ನಂತರ ಆರೋಗ್ಯವಾಗಿದ್ದಾನೆಂದು ಕೇಳಲ್ಪಟ್ಟ ಬಾಬಿಲೋನ್ ರಾಜನು ಬಹುಮಾನವನ್ನು ಕಳುಹಿಸಿದನು. ಹಿಜ್ಕೀಯನು ಅವರನ್ನು ನೋಡಿ ಸಂತೋಷಪಟ್ಟನು ಮತ್ತು ಅವನ ರಾಜ್ಯದಲ್ಲಿ ಅವನು ಅವರಿಗೆ ತೋರಿಸದೇ ಇರುವಂಥದ್ದು ಏನೂ ಇರಲಿಲ್ಲ. ಈ ಸಂದರ್ಭದಲ್ಲಿ, ಹಿಜ್ಕೀಯನು ತನ್ನ ಅಭಿವೃದ್ಧಿ ಮತ್ತು ಆಶೀರ್ವಾದಕ್ಕೆ ಕಾರಣವಾದ ದೇವರನ್ನು ಮರೆತು ತನ್ನ ಸಂತತಿಯ ಅಭಿವೃದ್ಧಿಗೆ ಅಡ್ಡಿಯಾಗುತ್ತಾನೆ. ಹಿಜ್ಕೀಯನ ವಂಶಸ್ಥರಲ್ಲಿ ಕೆಲವರು ಬಾಬಿಲೋನ್ ರಾಜನ ಅರಮನೆಯಲ್ಲಿ ಕೆಲಸಗಾರರಾಗಿರುವರು ಎಂದು ಪ್ರವಾದಿಯ ಮೂಲಕ ಹೇಳಲ್ಪಟ್ಟಿತು.

 

ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಗುಣ ಎಂಬುದು ಒಂದು ಕನ್ನಡಿ. ಪ್ರತಿಯೊಬ್ಬರೂ ತಮ್ಮ ನಿಜವಾದ ರೂಪವನ್ನು ಅದರಲ್ಲಿ ನೋಡಿಕೊಳ್ಳಬಹುದು. ದೇವರಿಂದ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ಮನುಷ್ಯನು ಹೇಗೆ ಬದುಕಬೇಕು ಮತ್ತು ಹೇಗಿರಬೇಕು? ಎಂದು ಸತ್ಯವೇದವೆಂಬ ಕನ್ನಡಿ ನಮಗೆ ಬೋಧಿಸುತ್ತಿದೆ. ಆದ್ದರಿಂದ ಈ ಕನ್ನಡಿಯನ್ನು ನಮ್ಮ ಮುಖದ ಮೇಕಪ್ ಮಾಡಲು ಮತ್ತು ನಮ್ಮನ್ನು ಸರಿಪಡಿಸಲು ಮಾತ್ರ ಬಳಸಲಾಗುತ್ತದೆ. ಆದರೆ ಸಾಮಾನ್ಯ ಕನ್ನಡಿಗಿಂತ ಸತ್ಯವೇದ ಕನ್ನಡಿಯು ಬಹಳ ಉಪಯುಕ್ತವಾದದ್ದು. ಆದ್ದರಿಂದ ಈ ಕನ್ನಡಿಯನ್ನು ಪ್ರತಿದಿನವೂ ಉಪಯೋಗಿಸಿ, ನಮ್ಮ ಬೆಳವಣಿಗೆಗೆ ತಡೆಯಾಗಿರುವುದು ಯಾವುದೆಂದು ಕಂಡುಹಿಡಿದು ಅದನ್ನು ಸರಿಮಾಡಿಕೊಳ್ಳೋಣ. ನಮ್ಮ ಬೆಳವಣಿಗೆಗೆ ದೇವರು ನಮಗೆ ಸಹಾಯ ಮಾಡುವರು!

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಯೌವನಸ್ಥ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಹೊರಬಿಡುತ್ತಿರುವ "ಕಣ್ಮಣಿಯೇ ಕೇಳ್" ಎಂಬ ಪತ್ರಿಕೆಯ ಮೂಲಕ ಅನೇಕರು ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino betcio bahiscasino atlasbet matbet matbet giriş bahiscasino celtabet queenbet casibom jojobet