By Village Missionary Movement
Tuesday, 08-Nov-2022ಧೈನಂದಿನ ಧ್ಯಾನ(Kannada) – 09.11.2022
ಸ್ವಬುದ್ಧಿ
"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು" – ಜ್ಞಾನೋಕ್ತಿ 3:5
ಒಂದಾನೊಂದು ಕಾಲದಲ್ಲಿ ಹಿರಿಯ ಗುರುವಿನ ಬಳಿ ರಾಜಮನೆತನಕ್ಕೆ ಸೇರಿದ ಅನೇಕರು ತರಬೇತಿ ಪಡೆದು ತಮ್ಮ ದೇಶವನ್ನು ಪರಿಣಾಮಕಾರಿಯಾಗಿ ಆಳ್ವಿಕೆ ಮಾಡುತ್ತಿದ್ದರು. ಗುರುವಿಗೆ ಒಬ್ಬನೇ ಒಬ್ಬ ಮಗನಿದ್ದನು. ತನ್ನ ಒಬ್ಬನೇ ಮಗನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಗುರುಗಳು, ತನ್ನ ಮಗನನ್ನು ತನ್ನಿಂದ ತರಬೇತಿ ಪಡೆದ ನೆರೆಯ ದೇಶದ ರಾಜನ ಬಳಿಗೆ ಕಳುಹಿಸಿದರು. ಅವನ ಬಳಿ ಒಂದು ಚಿಕ್ಕ ಮೂಟೆ ಕೊಟ್ಟು ರಾಜನಿಗೆ ಕೊಡಲು ಹೇಳಿದರು. ದಾರಿಯಲ್ಲಿ ಮಗನಿಗೆ ತನ್ನ ತಂದೆ ಕೊಟ್ಟ ಮೂಟೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಹಂಬಲ ಮೂಟೆಯನ್ನು ತೆರೆದು ನೋಡಿ ಆಘಾತಗೊಂಡನು. ಅದರಲ್ಲಿ ಕೋಲು, ಮರದ ಕತ್ತಿ ಮತ್ತು ಮಸುಕಾದ ಹಳೆಯ ಬಟ್ಟೆ ಇತ್ತು. ಈ ವಸ್ತುಗಳನ್ನು ರಾಜನಿಗೆ ಹೇಗೆ ಕೊಡುವುದೆಂದು ಯೋಚಿಸುತ್ತಾ, ಅವನು ತನ್ನ ಸ್ವಬುದ್ಧಿಯನ್ನು ಬಳಸಿ ವಸ್ತುಗಳನ್ನು ತಯಾರಿಸಿದನು. ಅವನು ಅರಮನೆಯ ದ್ವಾರವನ್ನು ತಲುಪಿದನು.
ಅವನು ತಾನು ಮಾಡಿದ ಹೊಸ ವಸ್ತುಗಳನ್ನು ಕಾವಲುಗಾರನ ಬಳಿ ಕೊಟ್ಟು ಕಳುಹಿಸಿದನು. ರಾಜನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ತಾಸುಗಟ್ಟಲೆ ಕಾದು ಬೇರೆ ದಾರಿಯಿಲ್ಲದೆ ತಂದೆ ಕೊಟ್ಟಿದ್ದ ಮೂಟೆಯನ್ನು ಕಾವಲುಗಾರನಿಗೆ ಕೊಟ್ಟು ಕಳುಹಿಸಿದನು. ಕೆಲವೇ ನಿಮಿಷಗಳಲ್ಲಿ ರಾಜನೇ ಅರಮನೆಯ ದ್ವಾರಕ್ಕೆ ಓಡಿ ಬಂದು ಅವನನ್ನು ತಬ್ಬಿಕೊಂಡು ಅರಮನೆಯೊಳಗೆ ಕರೆದೊಯ್ದನು. ರಾಜನು ಮೂಟೆಯಲ್ಲಿದ್ದ ವಸ್ತುಗಳನ್ನು ಅವನಿಗೆ ಎತ್ತಿ ತೋರಿಸಿ ಹೇಳಿದನು, “ನಾನು ತಪ್ಪು ಮಾಡಿದಾಗ ಈ ಕೋಲು ನನಗೆ ಮಾರ್ಗದರ್ಶನ ನೀಡಿತು. ನನ್ನ ಕೈಗಳು ಈ ಕತ್ತಿಯಿಂದಲೇ ತರಬೇತಿ ಪಡೆದವು. ಒಮ್ಮೆ ನಾನು ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡಾಗ ನನ್ನ ಗುರುಗಳು ಈ ಬಟ್ಟೆಯನ್ನು ಎಸೆದು ನನ್ನನ್ನು ರಕ್ಷಿಸಿದರು. ಇವೆಲ್ಲವೂ ನನ್ನ ಪಾಲಿಗೆ ಅಮೂಲ್ಯವಾದ ಸಂಪತ್ತು’’ ಎಂದು ಹೇಳಿ, "ನೀನು ಮೊಟ್ಟಮೊದಲೇ ಇವುಗಳನ್ನು ಕೊಟ್ಟು ಕಳುಹಿಸಿದ್ದರೆ, ನೀನು ಯಾವಾಗಲೋ ಅರಮನೆಯೊಳಗೆ ಪ್ರವೇಶಿಸಬಹುದಿತ್ತು’’ ಎಂದು ಹೇಳಿದರು. ಅವನು ಒಳ್ಳೆಯ ಗೌರವವನ್ನು ಪಡೆಯಬೇಕೆಂದು ಬಯಸಿ ತನ್ನ ಸ್ವಂತ ಪ್ರತಿಭೆಯನ್ನು ಬಳಸಿ ಸಮಯ ಹಾಳುಮಾಡಿಕೊಂಡದ್ದನ್ನು ನೆನಸಿ ಚಿಂತಿಸಿದನು.
ನಾವು ಸತ್ಯವೇದದಲ್ಲಿ ಲೂಕ 5: 2-11 ರಲ್ಲಿ ಪೇತ್ರನ ಬಗ್ಗೆ ಧ್ಯಾನಿಸಬಹುದು. ಪೇತ್ರನು ಒಬ್ಬ ನುರಿತ ಮೀನುಗಾರನಾಗಿದ್ದನು. ಅವನಿಗೆ ಅದರ ಎಲ್ಲಾ ಸೂಕ್ಷ್ಮತೆಗಳು ತಿಳಿದಿದ್ದವು. ರಾತ್ರಿಯಿಡೀ ಕಷ್ಟಪಟ್ಟು ಏನೂ ಸಿಗದ ಪರಿಸ್ಥಿತಿಯಿಂದ ಬೇಸತ್ತು ಬಲೆ ಜಾಲಾಡುತ್ತಿದ್ದ. ನಂತರ ಯೇಸು ಕ್ರಿಸ್ತನು ಪೇತ್ರನ ದೋಣಿಯನ್ನು ಹತ್ತಿ ಕುಳಿತರು. “ಆಳಕ್ಕೆ ಹಾಕಿ ಮೀನು ಹಿಡಿಯಲು ಬಲೆ ಬೀಸು” ಎಂದು ಹೇಳಿದಾಗ ತನಗೆ ತಿಳಿದದ್ದನ್ನು ಹೇಳದೆ “ನಿನ್ನ ಮಾತಿನಂತೆ ಬಲೆ ಬೀಸುತ್ತೇನೆ” ಎಂದು ಹೇಳಿ ಅವರ ಮಾತಿಗೆ ವಿಧೇಯನಾಗಿ ಅದನ್ನು ಮಾಡುವಾಗ ಬಲೆ ಹರಿದು ಹೋಗುವಷ್ಟು ಮಟ್ಟಿಗೆ
ಮೀನುಗಳನ್ನು ಹಿಡಿದನು.
ಹೌದು, ದೇವರ ಮಕ್ಕಳೇ! ವಿದ್ಯಾಭ್ಯಾಸದಲ್ಲೋ, ಉದ್ಯೋಗದಲ್ಲೋ, ಸೇವೆಯಲ್ಲೋ, ನಮ್ಮ ಸ್ವಂತ ಸಾಮರ್ಥ್ಯ ಅಥವಾ ಜನರ ಮೇಲೆ ನಂಬಿಕೆ ಇಟ್ಟು ನಾವು ಕ್ರಿಸ್ತನನ್ನು ಮರೆತು ಅನೇಕ ಸಮಯಗಳಲ್ಲಿ ಸೋಲನ್ನನುಭವಿಸಿರಬಹುದು. ನಮ್ಮಲ್ಲಿರುವ ಸ್ವಾರ್ಥ ಎಂಬ ಶಾರೀರಿಕವಾದ ಕಾರ್ಯವು ಕ್ರಿಸ್ತನನ್ನು ಮರೆತು ನಮಗೆ ಸಿಗುವ ಆಶೀರ್ವಾದಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಮ್ಮ ಜೀವನದ ಎಲ್ಲಾ ಸಂದರ್ಭಗಳಲ್ಲಿ, ನಮ್ಮ ಸ್ವಬುದ್ಧಿಯನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ದೇವರ ಮಾತುಗಳಿಗೆ ವಿಧೇಯರಾಗಿ ಕೆಲಸಗಳನ್ನು ಮಾಡಲು ನಿರ್ಧರಿಸೋಣ. ದೇವರು ನಮಗಾಗಿ ಸಿದ್ಧಪಡಿಸಿರುವ ಆಶೀರ್ವಾದಗಳನ್ನು ಸ್ವತಂತ್ರಿಸಿಕೊಂಡು ಸಂತೋಷದಿಂದ ಬದುಕೋಣ. ಹಲ್ಲೇಲೂಯ!
- Mrs. ಜೆಬಕಣಿ ಶೇಖರ್
ಪ್ರಾರ್ಥನಾ ಅಂಶ:
ದೇವರು ಪ್ರತಿ ಕಾರ್ಯ ಸ್ಥಳದಲ್ಲಿ 4 ಕ್ರಿಯಾಶೀಲ ವ್ಯಕ್ತಿಗಳನ್ನು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482