Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.11.2022
Share:

By Village Missionary Movement

Monday, 07-Nov-2022

ಧೈನಂದಿನ ಧ್ಯಾನ(Kannada) – 08.11.2022

 

ನಾವು

 

"ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ" - ಕೀರ್ತನೆ 34:3

 

ಒಬ್ಬ ಮಾನವಶಾಸ್ತ್ರಜ್ಞರು ಆಫ್ರಿಕನ್ ಬುಡಕಟ್ಟು ಹುಡುಗರಿಗಾಗಿ ಸ್ಪರ್ಧೆಯನ್ನು ನಡೆಸಿದರು. ಬುಟ್ಟಿಯಲ್ಲಿ ಹಣ್ಣುಗಳನ್ನು ತುಂಬಿ ಮರದ ಕೆಳಗೆ ಇಟ್ಟು ಅಲ್ಲಿದ್ದ ಹುಡುಗರನ್ನೆಲ್ಲ ನೂರು ಮೀಟರ್ ದೂರದಲ್ಲಿ ಸಾಲಾಗಿ ನಿಲ್ಲುವಂತೆ ಮಾಡಿದರು. "ಯಾರು ಮೊದಲು ಮರವನ್ನು ಮುಟ್ಟುತ್ತಾರೋ ಅವರಿಗೆ ಸಂಪೂರ್ಣ ಹಣ್ಣು ಸಿಗುತ್ತದೆ" ಎಂದು ಅವರು ಹೇಳಿದರು. ಸಿದ್ಧವಾಗಿ ನಿಂತಿದ್ದ ಹುಡುಗರಿಗೆ ಶಿಳ್ಳೆ ಹೊಡೆದರು. ಅವರೆಲ್ಲರೂ ಪರಸ್ಪರ ಕೈ ಹಿಡಿದುಕೊಂಡು ಓಡಿ, ಮರ ಮುಟ್ಟಿ ಹಣ್ಣುಗಳನ್ನು ಹಂಚಿಕೊಂಡು ತಿನ್ನಲು ಆರಂಭಿಸಿದರು. ಇದನ್ನು ಕಂಡು ಆಶ್ಚರ್ಯಪಟ್ಟ ಮಾನವಶಾಸ್ತ್ರಜ್ಞರು ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದಾಗ ಎಲ್ಲರೂ ಒಂದೇ ಸಮನೆ "ಉಬುಂಟು" ಎಂದರಂತೆ. ಅದಕ್ಕೆ "ನಾನು ಎಂದರೆ ಅದು ನಾನಲ್ಲ! ನಾವು!!" (I am because, we are!) ಎಂದು ಅರ್ಥವಂತೆ. ಕೆಲವರು ಬೇಸರವಾಗಿರುವಾಗ ಒಬ್ಬರು ಮಾತ್ರ ಹೇಗೆ ಸಂತೋಷವಾಗಿರುವುದು ಎಂದು ಹೇಳಿದರಂತೆ.

 

ಕೆಲವು ಯುವಕರನ್ನು ಯೆರೂಸಲೇಮಿನಿಂದ ಬಾಬಿಲೋನಿಗೆ ಗುಲಾಮರನ್ನಾಗಿ ತರಲಾಯಿತು. ದಾನಿಯೇಲ್, ಶದ್ರಕ್, ಮೇಶಕ್, ಅಬೇದ್ನೆಗೋ! ಆ ಯುವಕರು ತಾವು ತಿನ್ನುವ ಆಹಾರದಿಂದಲೂ ಸಹ ಅಪವಿತ್ರವಾಗಬಾರದೆಂದು ನೆನೆಸಿ ಒಗ್ಗಟ್ಟಾಗಿ ಪ್ರದಾನಿಗಳ ನಾಯಕರ ಬಳಿ ಬೇಡಿಕೊಂಡರು. ಅವರಿಗೆ ಪ್ರತ್ಯೇಕವಾಗಿ ಆಹಾರವನ್ನು ನೀಡಲಾಯಿತು. ಅಷ್ಟೇ ಅಲ್ಲ, ನೆಬೂಕದ್ನೆಚ್ಚರನು ತಾನು ಕಂಡ ಕನಸನ್ನೂ, ಕನಸಿನ ಅರ್ಥವನ್ನೂ ಹೇಳದವರನ್ನು ಕೊಲ್ಲಲಾಗುವುದು ಎಂದು ಆದೇಶಿಸಿದಾಗ, ದಾನಿಯೇಲನು ತನ್ನ ಸಂಗಡಿಗರೊಂದಿಗೆ ದೇವರ ಕರುಣೆಗಾಗಿ ಬೇಡಿಕೊಂಡನು. (ದಾನಿ. 2:17). ನಮ್ಮ ದೇವರು ಕನಸನ್ನು ಮತ್ತು ಅದರ ಅರ್ಥವನ್ನು ದಾನಿಯೇಲನಿಗೆ ತಿಳಿಸಿದರು. ರಾಜನ ಬಳಿ ಅವರು ಕಂಡ ಕನಸನ್ನು ಮತ್ತು ಅದರ ಅರ್ಥವನ್ನು ತಿಳಿಸಿದಾಗ, ಅವರು ಅವನಿಗೆ ಅನೇಕ ಬಹುಮಾನಗಳನ್ನು ಕೊಟ್ಟು ಅವನನ್ನು ಇಡೀ ಬಾಬಿಲೋನ್ ಪ್ರಾಂತ್ಯಕ್ಕೆ ಅಧಿಪತಿಯಾಗಿಯೂ ಮತ್ತು ಮುಖ್ಯಾಧಿಕಾರಿಯನ್ನಾಗಿಯೂ ಮಾಡಿದರು. ದಾನಿಯೇಲ್ ರಾಜನ ಬಳಿ ಬೇಡಿಕೊಂಡದ್ದರಿಂದ, ಅವನ ಸ್ನೇಹಿತರೂ ಅವನೊಂದಿಗೆ ಹೆಚ್ಚಿಸಲ್ಪಟ್ಟರು. (ದಾನಿ. 2:24-49)

 

ಹೌದು, ಪ್ರಿಯರೇ! ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! (ಕೀರ್ತನೆ 133:1) ಎಂಬ ವಾಕ್ಯವು ಎಷ್ಟು ನಿಜವಾಗಿದೆ. ಅದು ಸುಂದರವಾದದ್ದೂ ಕೂಡ. ಸಹೋದರಸ್ನೇಹವನ್ನೂ ಸಹೋದರಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ ಎಂದು ಸತ್ಯವೇದವು ಹೇಳುತ್ತಿದೆ. ಬಹುಶಃ ಸಹೋದರರೊಳಗೂ, ನಮ್ಮ ಸುತ್ತಮುತ್ತಲಿನವರೊಳಗೂ ಏನಾದರೂ ಒಡಕುಗಳಿದ್ದರೆ, ಪ್ರೀತಿಯು ಮಾತ್ರವೇ ಅಸ್ತ್ರವಾಗಿರಲಿ ಮತ್ತು ಕೆಟ್ಟದ್ದನ್ನು ಒಳಿತಿನಿಂದ ಜಯಿಸಿರಿ. ಸಮಾಧಾನ ಪಡಿಸುವವರು ಧನ್ಯರು, ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು. ನಾವು ಸಹ ಯೇಸುವಿನ ಪ್ರೀತಿಯನ್ನು ಪ್ರತಿಬಿಂಬಿಸೋಣ. ಆಮೆನ್!

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಳಿಗೆ ಅಗತ್ಯವಾಗಿರುವ ಲ್ಯಾಪ್‌ಟಾಪ್, ಕ್ಯಾಮೆರಾ, ಲೈಟ್ ಗಳನ್ನು ಖರೀದಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş