Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.11.2022 (Youth Special)
Share:

By Village Missionary Movement

Sunday, 06-Nov-2022

ಧೈನಂದಿನ ಧ್ಯಾನ(Kannada) – 07.11.2022 (Youth Special)

 

ರೆಕ್ಕೆಯ ನೆರಳು

 

“ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ. ಆತನ ಸತ್ಯತೆಯೇ ನಿನಗೆ ಖೇಡ್ಯವೂ ಗುರಾಣಿಯೂ ಆಗಿದೆ" - ಕೀರ್ತನೆ 91:4

 

ಒಂದು ತೋಟದ ಮನೆಯಲ್ಲಿ, ಕೋಳಿ ಮರಿಗಳು ನೆಲವನ್ನು ಕೆರೆದು ಹುಳಗಳನ್ನು ತಿನ್ನುತ್ತಿದ್ದವು. ಇದ್ದಕ್ಕಿದ್ದಂತೆ ತಾಯಿ ಕೋಳಿ ಒಂದು ವಿಧವಾದ ಶಬ್ದ ಮಾಡಲು ಕೋಳಿ ಮರಿಗಳು ವೇಗವಾಗಿ ಓಡಿ ಬಂದು ತನ್ನ ರೆಕ್ಕೆಗಳೊಳಗೆ ಅಡಗಿಕೊಂಡವು. ಇದನ್ನು ಗಮನಿಸುತ್ತಿದ್ದವರೊಬ್ಬರು ಕಾರಣ ತಿಳಿಯಲು ಸುತ್ತ ಮುತ್ತಲೂ ನೋಡಿದರು. ಆಗ ಆಕಾಶದಲ್ಲಿ ಗಿಡುಗವೊಂದು ಮರಿಯನ್ನು ಎತ್ತಿಕೊಳ್ಳಲು ಸುತ್ತುತ್ತಿರುವುದನ್ನು ಕಂಡರು. ತಾಯಿ ಕೋಳಿಯ ವಾತ್ಸಲ್ಯ ಮತ್ತು ಕರುಣೆಗೆ ಅವರು ಬೆರಗಾದರು.

 

ಪ್ರೀತಿಯ ಯೌವನಸ್ಥ ಸಹೋದರಿಯರೇ! ನಾವು ಕೂಡ ಅಸುರಕ್ಷಿತ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಎದುರಾಳಿಯಾದ ಸೈತಾನನು ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. ಸೈತಾನನ ತಂತ್ರಗಳು, ಪಾಪದ ಹೋರಾಟಗಳು ಮತ್ತು ಶೋಧನೆಗಳಿಂದ ತಪ್ಪಿಸಿಕೊಳ್ಳಲು ನಮಗಿರುವ ಏಕೈಕ ಸುರಕ್ಷಿತ ಸ್ಥಳವೆಂದರೆ ದೇವರ ರೆಕ್ಕೆಯ ನೆರಳು ಮಾತ್ರವೇ. ಸೈತಾನನ ಎಲ್ಲಾ ತಂತ್ರಗಳಿಂದ ನಾವು ತಪ್ಪಿಸಿಕೊಂಡು ಆಶ್ರಯ ಪಡೆಯಬೇಕಾದ ಏಕೈಕ ಸ್ಥಳವೆಂದರೆ ಅವರ ಸಮ್ಮುಖ ಮಾತ್ರವೇ! ನಾವು ಈ ದುಷ್ಟ ಪ್ರಪಂಚದ ಪಾಪಗಳಿಂದ ತಪ್ಪಿಸಿಕೊಳ್ಳಬೇಕಾದರೆ, ನಾವು ಆತನ ಸನ್ನಿಧಿಗೆ ಬರಬೇಕು. ದುಷ್ಟ ಸ್ನೇಹಿತರ ಸಲಹೆಯಿಂದ ಪಾರಾಗಲು ಆತನ ಸತ್ಯವೇದದ ವಾಕ್ಯಗಳೇ ನಮಗೆ ಭದ್ರತೆ! ದೇವರು ಮತ್ತು ಆತನ ವಾಕ್ಯವು ನಮ್ಮೊಂದಿಗೆ ಇಲ್ಲದಿದ್ದರೆ, ಅದು ಅಸುರಕ್ಷಿತ ಜೀವನ!

 

ಇದನ್ನು ಚೆನ್ನಾಗಿ ಅರಿತಿದ್ದ ಕೀರ್ತನೆಗಾರನು 91 ನೇ ಕೀರ್ತನೆಯಲ್ಲಿ ದೇವರಿಂದ ಬರುವ ರಕ್ಷಣೆಯ ಬಗ್ಗೆ ಆಶ್ಚರ್ಯ ಮತ್ತು ಸಂತೋಷದಿಂದ ಬರೆಯುತ್ತಾರೆ. ಪರಾತ್ಪರನ ಮರೆ, ಸರ್ವಶಕ್ತನ ನೆರಳು, ಅವರ ರೆಕ್ಕೆಗಳು, ಅವರೇ ದುರ್ಗವು, ಉನ್ನತವಾದ ಆಶ್ರಯಗಿರಿಯು ಎಂದು ದೇವರು ನಮ್ಮನ್ನು ರಕ್ಷಿಸುವ ಮಾರ್ಗಗಳನ್ನು ತಿಳಿದು ಅನುಭವಿಸಿ ಬರೆಯುತ್ತಿದ್ದಾರೆ.

 

ಹೌದು ಕಣ್ಮಣಿಯ ಮಕ್ಕಳೇ! ದೇವರು ನಮಗೆ ಭೌತಿಕ ರಕ್ಷಣೆಯನ್ನು ಮಾತ್ರವಲ್ಲ, ನಮ್ಮ ಆಧ್ಯಾತ್ಮಿಕ ಮನುಷ್ಯನ, ಕಲ್ಮಶವಿಲ್ಲದ ಜೀವನ ಮತ್ತು ಭದ್ರತೆಯ ಅಭಿವೃದ್ಧಿಯನ್ನೂ ನೀಡುತ್ತಾರೆ. ಆದ್ದರಿಂದ ಈ ಪಾಪದ ಜಗತ್ತಿನಲ್ಲಿ, ಅವರ ರೆಕ್ಕೆಗಳ ಕೆಳಗೆ ಬಂದು ಆಶ್ರಯವನ್ನು ಪಡೆದುಕೊಳ್ಳಿರಿ ಮತ್ತು ಭದ್ರತೆಯನ್ನು ಆನಂದಿಸಿರಿ.

- Mrs. ದಿವ್ಯಾ ಬರ್ನಾರ್ಡ್

 

ಪ್ರಾರ್ಥನಾ ಅಂಶ:

ಯುವಕರ ಸಂಜೆ ಕಾರ್ಯಕ್ರಮಗಳಲ್ಲಿ ಸಂದೇಶ ನೀಡುವ ದೇವ ಸೇವಕರನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio jojobet giriş casibom milanobet piabellacasino betpas bahiscasino atlasbet holiganbet giriş casibom giriş bahiscasino ngsbahis betplay holiganbet jojobet casibom holiganbet jojobet