Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.11.2022 (Kids Special)
Share:

By Village Missionary Movement

Saturday, 05-Nov-2022

ಧೈನಂದಿನ ಧ್ಯಾನ(Kannada) – 06.11.2022 (Kids Special)

 

ಸುಗಂಧ

 

“ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು..." - ಎಫೆಸದವರಿಗೆ 2:10

 

ಹಲೋ ಪುಟಾಣಿಗಳೇ! ನೀವು ಹೇಗಿದ್ದೀರ. ನೀವೆಲ್ಲರೂ ಚೆನ್ನಾಗಿದ್ದೀರೆಂದು ಕರ್ತನಲ್ಲಿ ನಂಬುತ್ತೇನೆ. ಪ್ರತಿದಿನ ನಮ್ಮನ್ನು ಆರೋಗ್ಯವಾಗಿಡುತ್ತಿರುವ ಯೇಸುವಿಗೆ ಕೃತಜ್ಞತೆ ಹೇಳಲು ನಾವು ಮರೆಯಬಾರದು. ಸರಿ ಪುಟಾಣಿಗಳೇ! ಕಥೆ ಕೇಳಲು ರೆಡೀನಾ?

 

ರಸ್ತೆ ಸೌಕರ್ಯವೇ ಇಲ್ಲದ ಸುಂದರವಾದ ಒಂದು ಪುಟ್ಟ ಹಳ್ಳಿ ಇತ್ತು. ಆ ಗ್ರಾಮದಲ್ಲಿ ಒಂದರಿಂದ ಐದನೇ ತರಗತಿಯ ಶಾಲೆಯೂ ಇತ್ತು. ಅಲ್ಲಿಯೇ ಮಧ್ಯಾಹ್ನದ ಊಟ ನೀಡಲಾಗುತ್ತಿತ್ತು. ಓಹ್.. ನಿಮ್ಮ ಶಾಲೆಯಲ್ಲೂ ಮಧ್ಯಾಹ್ನದ ಊಟವಿದೆಯಾ? ಸೂಪರ್. ಅಲ್ಲಿ ಸಿಕ್ಕ ಆಹಾರಕ್ಕಾಗಿ ದಿನವೂ ಪ್ರಾರ್ಥಿಸಿ ಯೇಸುವಿಗೆ ಕೃತಜ್ಞತೆ ಹೇಳಿಬಿಟ್ಟೇ ಊಟಮಾಡುತ್ತಿದ್ದ ವಿಕ್ಕಿ. ನೀವು ಊಟ ಮಾಡುವಾಗ ಯೇಸುವಿಗೆ ಕೃತಜ್ಞತೆ ಹೇಳುತ್ತೀರ? ಇಲ್ವಾ? ಖಂಡಿತವಾಗಿ ಹೇಳ್ಬೇಕು ಪುಟಾಣಿಗಳೇ ಓಕೆನಾ. ವಿಕ್ಕಿ ದಿನವೂ ಪ್ರಾರ್ಥನೆ ಮಾಡಿ ಊಟ ಮಾಡುವುದನ್ನು ನೋಡುತ್ತಿದ್ದ ಇತರ ವಿದ್ಯಾರ್ಥಿಗಳು ವಿಕ್ಕಿಯನ್ನು ಗೇಲಿಮಾಡಿದರು. ಇವನು ಪ್ರಾರ್ಥಿಸುತ್ತಿರುವುದರಿಂದ ಸಾಂಬಾರ್ ಅನ್ನವು ಬಿರಿಯಾನಿಯಾಗಿಬಿಡುತ್ತಾ ನೋಡೋಣ ಎಂದು ನಗುತ್ತಿದ್ದರು.

 

ಆಗ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳು ಹೇಗೆ ಊಟ ಮಾಡುತ್ತಿದ್ದಾರೆ, ಊಟ ಚೆನ್ನಾಗಿದೆಯೇ ಎಂದು ನೋಡಲು ಬಂದರು. ಆಹಾರವನ್ನು ವ್ಯರ್ಥ ಮಾಡದೆ ಚೆನ್ನಾಗಿ ತಿನ್ನಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿಕ್ಕಿಯನ್ನು ಗೇಲಿಮಾಡುತ್ತಿದ್ದ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಕಂಡು ಸುಮ್ಮನಾದರು. ಇಲ್ಲಿ ಏನು ನಗು! ಏನೋ ಹಬ್ಬ ನಡೀತಾ ಇರುವಂತಿದೆ ಎಂದು ಸರ್ ಕೇಳಿದರು... ಒಬ್ಬ ವಿದ್ಯಾರ್ಥಿ ಎದ್ದು ಸಾರ್ ವಿಕ್ಕಿ ದಿನವೂ ಪ್ರಾರ್ಥನೆ ಮಾಡಿ ಊಟ ಮಾಡುತ್ತಾನಲ್ಲಾ ಅದೇ... ಎಂದು ರಾಗ ತೆಗೆದನು, ಏನು ಪ್ರಾರ್ಥನೆಯನ್ನು ತಮಾಷೆ ಮಾಡುತ್ತಿದ್ದೀರಾ? ಅವನು ತನ್ನ ವಿಧ್ಯಾಭ್ಯಾಸದಲ್ಲಿ ಶಿಸ್ತಿನಲ್ಲಿ ಎಷ್ಟು ಒಳ್ಳೆಯ ವಿದ್ಯಾರ್ಥಿಯಾಗಿದ್ದಾನೆ ಎಂಬುದನ್ನು ನೀವು ನೋಡುದ್ರಾ? ಅವನು ಪ್ರಾರ್ಥನೆ ಮಾಡಿಯೇ ಎಲ್ಲವನ್ನೂ ಮಾಡುತ್ತಾನೆ ಆದ್ದರಿಂದಲೇ ಅವನು ಉತ್ತಮವಾದ ವಿದ್ಯಾರ್ಥಿಯಾಗಿದ್ದಾನೆ. ಎಂದು ಸರ್ ಹೇಳಿದ ಮಾತುಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಎಲ್ಲರೂ ಇನ್ನು ಮುಂದೆ ವಿಕ್ಕಿಯಂತೆಯೇ ಇರಬೇಕೆಂಬ ಆಸೆ ಮೂಡಿತು. ಮರುದಿನ ಎಲ್ಲರೂ ಆಹಾರಕ್ಕಾಗಿ ಯೇಸುವಿಗೆ ಕೃತಜ್ಞತೆ ಹೇಳಿದರು. ಪ್ರಿನ್ಸಿಪಾಲರು ಏನನ್ನೋ ಯೋಚಿಸುತ್ತಾ ಹೋದರು. ಅವರು ಯೇಸುವನ್ನು ತಿಳಿದಿದ್ದರೂ, ನಾನು ಒಂದು ದಿನವೂ ಆಹಾರ ತಿನ್ನುವ ಮೊದಲು ಪ್ರಾರ್ಥಿಸಲಿಲ್ಲವಲ್ಲಾ ಎಂಬುದನ್ನು ಅರಿತುಕೊಂಡರು. ಅವರಲ್ಲೂ ಒಂದು ಬದಲಾವಣೆ ಬಂತು. ವಿಕ್ಕಿಯ ಸುಗಂಧವು ಅನೇಕರನ್ನು ಯೇಸುವಿನ ಕಡೆಗೆ ಸೆಳೆಯಿತು.

 

ಪ್ರೀತಿಯ ಮುದ್ದು ಮಕ್ಕಳೇ! ಈ ಕಥೆಯ ಹೀರೋ ವಿಕ್ಕಿಯ ಹಾಗೆ ನೀವೂ ಸಹ ಪರಿಮಳಯುಕ್ತ ಒಳ್ಳೆಯತನದ ಜೀವನವನ್ನು ನಡೆಸುವಾಗ, ನಿನ್ನ ಸುತ್ತಲಿರುವ ಸ್ನೇಹಿತರು ಯೇಸುವನ್ನು ತಿಳಿದುಕೊಳ್ಳುತ್ತಾರೆ. ಏನು ಪುಟಾಣಿಗಳೇ, ಯೇಸಪ್ಪಾ ಕೂಡ ತುಂಬಾ ಸಂತೋಷಪಡುತ್ತಾರೆ ಅಲ್ವಾ? ನೀವು ಅವರನ್ನು ಸಂತೋಷಪಡಿಸಲು ರೆಡೀನಾ?

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al