Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.11.2022
Share:

By Village Missionary Movement

Friday, 04-Nov-2022

ಧೈನಂದಿನ ಧ್ಯಾನ(Kannada) – 05.11.2022

 

ಮೌನವಾಗಿರುವುದರಿಂದ ಬರುವ ಆಶೀರ್ವಾದ

 

"ಆದರೆ ನಾನು ನಿಮಗೆ ಹೇಳುವದೇನಂದರೆ... ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ... ಪ್ರಾರ್ಥಿಸಿರಿ" – ಮತ್ತಾಯ 5:44

 

ತರಂಗಂಬಾಡಿಯಲ್ಲಿ, ಒಂದು ಬಡ ವಿಧವೆಗೆ ನ್ಯಾಯ ಕೋರುವ ವಿಷಯದಲ್ಲಿ ಹಾಸಿಯಸ್ ಸೀಗನ್ ಮೇಲೆ ಕೋಪಗೊಂಡರು. ಅವರ ಮಿಷನರಿ ಉತ್ಸಾಹವನ್ನು ಕುಗ್ಗಿಸುವ ಮತ್ತು ಮಿಷನರಿ ಕೆಲಸವನ್ನು ತ್ಯಜಿಸುವ ಉದ್ದೇಶದಿಂದ ಅವರು ಅವರನ್ನು ವಿವಿಧ ಅವಮಾನಗಳಿಗೆ ಒಳಪಡಿಸಿದರು. ನವೆಂಬರ್ 1708 ರಲ್ಲಿ, ಅತ್ಯಂತ ಕ್ಷುಲ್ಲಕ ಘಟನೆಯ ನೆಪದಲ್ಲಿ, ಬಂದೂಕು ಹಿಡಿದ ಪೊಲೀಸರು ಸೀಗನ್ ಅವರ ಮನೆಗೆ ಪ್ರವೇಶಿಸಿದರು, ಅವರು ಪ್ರಾರ್ಥನೆ ಮಾಡುತ್ತಿದ್ದಾಗ ಅವರನ್ನು ಬಂಧಿಸಿ ರಾಜ್ಯಪಾಲರ ಮುಂದೆ ಕರೆತಂದರು. ಸೀಗನ್ ಅವರನ್ನು ಸುಳ್ಳು ಆರೋಪದ ಮೇಲೆ ಜೈಲಿನಲ್ಲಿ ಬಂಧಿಸಿದರು ಅವರನ್ನು ಹೊಡೆದು "ನಾಯಿ" ಎಂದು ಸಹ ಕರೆದರು. ಇದರಿಂದ ತೃಪ್ತರಾಗದ ಅವರು, ಸುತ್ತಿಗೆಯಿಂದ ಥಳಿಸುವುದಾಗಿ ಬೆದರಿಸಿ ಅಸಹ್ಯವಾಗಿ ಮಾತಾಡಿದರು. ಬಲವಾದ ಹೃದಯ ಮತ್ತು ಮಿಷನರಿ ದರ್ಶನ ಹೊಂದಿರುವ ಅವರು ಪರಿಸ್ಥಿತಿಗಳನ್ನು ನೋಡಿ ಎದೆಗುಂದಲಿಲ್ಲ. ಅವರ ನಾಲ್ಕು ತಿಂಗಳ ಸೆರೆವಾಸದ ಸಮಯದಲ್ಲಿ, ಇಬ್ಬರು ಜರ್ಮನ್ ಸೈನಿಕರು ಸೀಗನ್‌ಗೆ ಕಿಟಕಿಯ ಮೂಲಕ ಪೆನ್ನು ಮತ್ತು ಕಾಗದವನ್ನು ನೀಡಿ ಸಹಾಯಮಾಡಲು, "The God Pleasing state of a Christian" "The God pleasing profession of Teaching" ಎಂಬ ಎರಡು ಚಿಕ್ಕ ಪುಸ್ತಕಗಳನ್ನು ಅವರು ಬರೆದರು.

 

ಅರಸನಾದ ದಾವೀದನು ಅವನ ಸ್ವಂತ ಮಗನಾದ ಅಬ್ಷಾಲೋಮನಿಂದ ಅಟ್ಟಾಡಿಸಲ್ಪಟ್ಪು ತಲೆಮರೆಯಾದ ಸ್ಥಳಕ್ಕೆ ಹೋಗುತ್ತಾರೆ. ಆಗ ಶಿಮ್ಮೀ ಅರಸನಾದ ದಾವೀದನನ್ನು ನೋಡಿ ನಡೆ, ಕೊಲೆಗಾರನೇ, ನೀಚನೇ, ನಡೆ ಎಂದು ದೂಷಿಸಿ ನೀನೊಬ್ಬ ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ ಎಂದು ಹೇಳುತ್ತಲೇ ಕಲ್ಲೆಸೆಯ ತೊಡಗಿದನು. ದಾವೀದನು ಮೌನವಾಗಿ ಮುನ್ನಡೆದರು. ಅಬೀಷೈಯು ದಾವೀದನನ್ನು ನೋಡಿ ಈ ಸತ್ತ ನಾಯಿ ಅರಸನಾದ ನನ್ನ ಒಡೆಯನನ್ನು ಶಪಿಸುವದೇನು, ನಾನು ಅವನಿರುವಲ್ಲಿಗೆ ಹೋಗಿ ಅವನ ತಲೆ ಹಾರಿಸಿಕೊಂಡು ಬರುವೆನೆಂದ ಕೂಡಲೇ ದಾವೀದನು, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಇವನು ಇನ್ನೇನು ದೊಡ್ಡದಾಗಿ ಮಾಡಿಬಿಡುತ್ತಾನೆ. ಅವನು ದೂಷಿಸಲಿ, ಹೀಗೆ ಮಾಡಬೇಕೆಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ್ದಾನೆ. ಒಂದು ವೇಳೆ ಯೆಹೋವನು ನನ್ನ ಕಷ್ಟವನ್ನು ನೋಡಿ ಈಹೊತ್ತಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಾನು ಎಂದು ಹೇಳಿದನು. (2 ಸಮು 16: 5 - 12) ದಾವೀದನು ಮತ್ತೆ ಸಿಂಹಾಸನಕ್ಕೆ ಬಂದಾಗ, ಆ ಶಿಮ್ಮೀಯು ಅರಸನಾದ ದಾವೀದನನ್ನು ಎದುರುಗೊಂಡು ಅರಸನೇ ನನ್ನನ್ನು ಕ್ಷಮಿಸಿಬಿಡು ಎಂದು ಗೋಳಾಡಿದನು.

 

ಕರ್ತನಲ್ಲಿ ಪ್ರಿಯರೇ! ನಿಮ್ಮ ಜೀವನದಲ್ಲಿ ಸಮಸ್ಯೆಗಳು, ಹೋರಾಟಗಳು, ಪಿತೂರಿಗಳು ಹೀಗೆ ಅನೇಕ ಕಾರ್ಯಗಳು ಕಂಡುಬರುವ ಸಾಧ್ಯತೆಯಿದೆ. ನೀವು ಯಾವುದೇ ತಪ್ಪು ಮಾಡದಿದ್ದರೂ ಅನೇಕ ಜನರು ನಿಮ್ಮನ್ನು ನಿಂದಿಸಬಹುದು. ಒಂದು ದಿನವೂ ಅದರ ಬಗ್ಗೆ ಚಿಂತಿಸಬೇಡಿರಿ. ಅಧಿಕಾರಿಗಳು ಸೀಗನ್ ಗೆ ವಿರುದ್ಧವಾಗೆದ್ದರು. ದೂಷಣೆಯ ಮಾತುಗಳನ್ನಾಡಿದರು. ಅವರು ಮೌನವಾಗಿದ್ದರು. ಆದರೆ ಕೊನೆಯಲ್ಲಿ, ದೇವರು ಅದನ್ನು ಉತ್ತಮಗೊಳಿಸಿದರು. ಅರಸನಾದ ದಾವೀದನಿಗೆ ವಿರುದ್ಧವಾಗಿ ಶಿಮ್ಮೀಯು ಎದ್ದೇಳಿದನು. ಆದರೆ ಸಮಯ ಬಂದಾಗ ನಿಂದನೆಗೆ ಬದಲಾಗಿ ಒಳ್ಳೆಯದನ್ನು ಮಾಡಿದರು. ನೀವು ಸಹ ಇತರರು ನಿಮ್ಮನ್ನು ನಿಂದಿಸಿದಾಗ ಮೌನವಾಗಿದ್ದರೆ ಒಳ್ಳೇದನ್ನು ಪಡೆದುಕೊಳ್ಮುತ್ತೀರ. ಕರ್ತನು ನಿಮ್ಮನ್ನು ಆಶೀರ್ವದಿಸಲಿ.

- P. ಸ್ಟೀವ್ ಮ್ಯಾಥ್ಯೂ

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ 40 ಕಾರ್ಯ ಸ್ಥಳಗಳಲ್ಲಿ “ಯುವ ಸಂಜೆ” ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇವರು ಈ ಕೂಟಗಳನ್ನು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al