By Village Missionary Movement
Thursday, 03-Nov-2022ಧೈನಂದಿನ ಧ್ಯಾನ(Kannada) – 03.11.2022
ಭಾಗ್ಯವಂತರ ಕೀರ್ತನೆ
"ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು" - ಕೀರ್ತನೆ 84:10
ಸತ್ಯವೇದದಲ್ಲಿರುವ ಒಂದೊಂದು ಕೀರ್ತನೆಯನ್ನೂ ನಾವು ಧ್ಯಾನಿಸಿ ನೋಡುವಾಗ, ನಾವು ಅನೇಕ ಸತ್ಯಗಳನ್ನು ಕಲಿಯಬಹುದು. ಈ ದಿನದಲ್ಲಿ ನಾವು ಧ್ಯಾನಕ್ಕಾಗಿ 84 ನೇ ಕೀರ್ತನೆಯನ್ನು ತೆಗೆದುಕೊಳ್ಳೋಣ. ಇದರಲ್ಲಿ ಈ ಕೀರ್ತನೆಗಾರನು "ಭಾಗ್ಯವಂತರು" ಎಂಬ ಪದವನ್ನು ಮೂರು ಬಾರಿ ಬಳಸುವುದನ್ನು ನಾವು ನೋಡುತ್ತೇವೆ. ಯಾರು ಭಾಗ್ಯವಂತರು? ಎಂದು ಒತ್ತಿ ತೋರಿಸುವ ಈ ಕೀರ್ತನೆಯು ಕಂಠಪಾಠ ಮಾಡಲು ಸೂಕ್ತವಾಗಿದೆ!
ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು(ವಚನ. 4):
ದೇವರ ಪ್ರಸನ್ನತೆಯಲ್ಲಿರುವ ಅನುಭವವನ್ನು ಸೂಚಿಸುತ್ತದೆ. ದೇವರ ಆಲಯ ಎಂಬುದು ಅವರ ಸಮೂಹ. ನಾವು ನಿಜವಾದ ಹಂಬಲದಿಂದ ಆತನ ಬಳಿಗೆ ಬಂದರೆ ಮತ್ತು ಆತನೊಂದಿಗೆ ನಿರಂತರವಾದ ಸಹಭಾಗಿತ್ವದ ಅನುಭವವನ್ನು ಹೊಂದಿಕೊಂಡರೆ ನಾವು ನಿಜವಾಗಿಯೂ ಭಾಗ್ಯವಂತರೇ. ನಾವು ಮನೆಯಲ್ಲಿ ಕುಳಿತಿರುವಾಗ, ಎದ್ದೇಳುವಾಗ, ಬಟ್ಟೆ ಮಡಚಿಡುವಾಗ, ಅಡುಗೆ ಮಾಡುವಾಗ, ಆಫೀಸಿಗೆ ಹೋಗುವಾಗ ದೇವರೊಂದಿಗೆ ಮಾತನಾಡುತ್ತಲೇ ಇರೋಣ. ಆಹಾ! ಎಂತಹ ಆನಂದ!
ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು (ವಚನ. 5):
ಅನೇಕ ಜನರು 40 ನೇ ವಯಸ್ಸನ್ನು ತಲುಪಿದ ನಂತರ ಆಯಾಸವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಯಾವುದಾದರು ರೋಗ ಬಂದುಬಿಡುತ್ತದೆಯೇ ಎಂದು ಪರಿಶೀಲಿಸುತ್ತೇವೆ. 60 ವರ್ಷ ದಾಟಿದ ನಂತರ ಲೋಕವೇ ನಮಗೆ ಹಿರಿಯ ನಾಗರಿಕ ಎಂಬ ಬಿರುದನ್ನು ನೀಡುತ್ತದೆ. ನಾವು ನಮ್ಮ ಹದಿಹರೆಯದಲ್ಲಿ ಮೇಕಪ್ ಮಾಡಿದ್ದೇವೆಯೋ ಇಲ್ಲವೋ, ನಾವು ಈಗ ಚಿಕ್ಕವರಾಗಿ ಕಾಣಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಬಲ ಕುಂಠಿತವಾಗದಂತೆ ನಾವು ನಮ್ಮ ಆಹಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತೇವೆ. ನಮ್ಮ ಆರೋಗ್ಯವು ನಾವು ಸೇವಿಸುವ ಪೌಷ್ಟಿಕಾಂಶದ ಆಹಾರ, ಪೌಷ್ಟಿಕಾಂಶದ ಮಾತ್ರೆಗಳು ಅಥವಾ ಚುಚ್ಚುಮದ್ದುಗಳಲ್ಲಿಲ್ಲ. ನಮ್ಮ ಬಲ ಅವರಲ್ಲಿರಬೇಕು. ನಾವು ಅವರಲ್ಲಿ ಬಲಗೊಳ್ಳುವಾಗ, ಉನ್ನತದ ಬಲ, ಉತ್ತೇಜನ ನೀಡುವ ಶಕ್ತಿ ನಮ್ಮನ್ನು ತುಂಬುವುದನ್ನು ಗ್ರಹಿಸಬಹುದು. ಎಂದು ನಾವು ಅನುಭವಿಸಬಹುದು. ಹಬಕ್ಕೂಕ್ಕ ಪ್ರವಾದಿಯ ಹಾಗೆ ಕರ್ತನು ನನ್ನ ಬಲ ಎಂದು ಕೂಗೋಣ.
ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು (ವಚನ. 12):
ಹೌದು, ನಮ್ಮ ನಂಬಿಕೆಯನ್ನು ಸಂಪೂರ್ಣವಾಗಿ ಕರ್ತನ ಮೇಲಿಡೋಣ. 99% ಕರ್ತನನ್ನು ನಂಬುತ್ತೇನೆ; 1% ಮಾತ್ರ ನಾನು ಮನುಷ್ಯರ ಮೇಲೆ ನಂಬಿಕೆ ಇಡುತ್ತೇನೆ ಎಂದು ಹೇಳದೇ ದೇವರನ್ನು 100% ನಂಬೋಣ. ಈ ಲೋಕದಲ್ಲಿ ಭಾಗ್ಯವಂತರಾಗಿ ಬದುಕೋಣ.
-Mrs. ಜೆಬಾ ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ದೇವರು ನಮ್ಮ ಮಿಷನರಿ ಕುಟುಂಬಗಳನ್ನು ಕಾಪಾಡಬೇಕೆಂದು, ಉಪಯೋಗಿಸಬೇಕೆಂದು ಮತ್ತು ಆಶೀರ್ವದಿಸಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482