Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.10.2022 (Kids Special)
Share:

By Village Missionary Movement

Sunday, 30-Oct-2022

ಧೈನಂದಿನ ಧ್ಯಾನ(Kannada) – 30.10.2022 (Kids Special)

 

PRAISE ಮಾಡು

 

“ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ" - 1 ಥೆಸ. 5:18

 

ನೀವು ಕುತೂಹಲದಿಂದ ಕಾಯುತ್ತಿದ್ದ Children's special ಬಂದುಬಿಟ್ತು, ನೀವು ಪ್ರವಾಸಕ್ಕೆ ಹೋಗಿದ್ದೀರಾ? ಇದು ತುಂಬಾ ಸೂಪರ್ ಮತ್ತು ಜಾಲಿಯಾಗಿ ಇರುತ್ತೆ ಅಲ್ವಾ! ನೀವು ಅದನ್ನು ಸಂತೋಷವಾಗಿ Enjoy ಮಾಡಿರ್ತೀರ ಹೌದು ತಾನೇ! ಮನೋ ಅಣ್ಣ ಮತ್ತು ಅವನ ಸ್ನೇಹಿತರು ಪ್ರವಾಸಕ್ಕೆ ಹೋಗಿದ್ದರು. ಎಲ್ಲಾ ಸ್ಥಳಗಳನ್ನು ಸುತ್ತಿ ನೋಡಿಬಿಟ್ಟು ನಂತರ ಅವರು ಉದ್ಯಾನವನದಿಂದ ಹೊರಬಂದರು. "ಬನ್ನಿ ಎಲ್ಲರಿಗೂ ಐಸ್ ಕ್ರೀಂ ತೆಗೆದುಕೊಡುತ್ತೇನೆ" ಎಂದು ಮನೋ ಅಣ್ಣ ಎಲ್ಲರಿಗೂ ತೆಗೆದುಕೊಟ್ಟರು. ತಿನ್ನುತ್ತಾ ಪ್ಯಾಂಟ್ ಮತ್ತು ಶರ್ಟ್ ಪಾಕೆಟ್ ಪರಿಶೀಲಿಸಿದಾಗ ಪರ್ಸ್ ಕಾಣಲಿಲ್ಲ. "ಯೇಸಪ್ಪಾ! ನನ್ನ ಪ್ಯಾಂಟಿನ ಜೇಬು ಹರಿದು ಹೋಗದೇ ಪರ್ಸ್ ಕಳೆದು ಹೋದದ್ದಕ್ಕಾಗಿ ನಿಮಗೆ ಸ್ತೋತ್ರ’’ ಎಂದು ಮನೋ ಅಣ್ಣ ಹೇಳಿದ್ದು ಗೆಳೆಯರಿಗೆ ಅಚ್ಚರಿ ಮೂಡಿಸಿತು.

 

“ಏನು, ನೀನು ಹಣ ಕಳೆದುಕೊಂಡು ಸ್ತೋತ್ರ ಎಂದು ಹೇಳುತ್ತಿದ್ದೀಯ! ನಮಗೆ ತುಂಬಾ ಕೋಪ ಬರ್ತಿದೆ” ಎಂದು ಹೇಳಿದರು. ಮಧ್ಯದಲ್ಲಿ ಒಬ್ಬ ಬಂದು, “ಅಯ್ಯಾ! ನನ್ನನು ಕ್ಷಮಿಸಿ. ನಿಮ್ಮ ಪರ್ಸ್ ಕದ್ದು ಅದರಲ್ಲಿ ಹಣ ಎತ್ತುವಾಗ ಒಂದು ವಾಕ್ಯದ ಕಾರ್ಡ್ ಅದರಲ್ಲಿತ್ತು. ಅದರಲ್ಲಿ “ಇಗೋ! ನಿನ್ನನ್ನು ನನ್ನ ಅಂಗೈಯಲ್ಲಿ ಚಿತ್ರಿಸಿದ್ದೇನೆ" ಎಂದು ಬರೆದಿತ್ತು. ಅವರು ನನ್ನನ್ನು ಅಂಗೈಯಲ್ಲಿ ಇಟ್ಟುಕೊಂಡು ನೋಡಿಕೊಳ್ಳುತ್ತಲೇ ಇದ್ದಾರೆ. ಇನ್ನು ನನ್ನಿಂದ ಕದಿಯಲು ಸಾಧ್ಯವಿಲ್ಲ. ಕಳ್ಳತನದ ಕಸುಬನ್ನು ಬಿಟ್ಟು ದುಡಿದು ಜೀವನ ನಡೆಸುತ್ತೇನೆ’ ಎಂದು ಹೇಳಿದ ಕೂಡಲೇ ಮನೋ ಅಣ್ಣನ ಗೆಳೆಯರ ಕೋಪ ಎಲ್ಲಿ ಹೋಯಿತೋ ಗೊತ್ತೇ ಇಲ್ಲ. ಹೀಗೆ ನಡೆಯುತ್ತದಾ? ಎಂಬಂತೆ ನೋಡುತ್ತಿದ್ದರು. ಅದರ ನಂತರ ಅವರೂ ಸಹ ಸಂತೋಷವಾದರೂ, ದುಃಖವಾದರೂ ಎಲ್ಲಾ ಸಮಯದಲ್ಲಿಯೂ ದೇವರಿಗೆ ಸ್ತೋತ್ರವನ್ನು ಹೇಳಲು ಕಲಿತುಕೊಂಡರು. "ಇಂದಿನ ಪ್ರವಾಸೋದ್ಯಮ ನಮ್ಮ ಹೃದಯಕ್ಕೆ ಮಾತ್ರವಲ್ಲ, ನಮ್ಮ ಜೀವನಕ್ಕೂ ಸಂತೋಷವನ್ನು ತಂದಿದೆ" ಎಂದು ಸ್ನೇಹಿತರು ಹೇಳಲು ಮನೋ ಅಣ್ಣ Jesus ಗೆ Thank you ಹೇಳಿ ಸಂತೋಷವಾಗಿ ಮನೆಗೆ ಹೊರಟರು.

 

ಏನು ಪುಟಾಣಿಗಳೇ! ಕಥೆ ಹೇಗಿದೆ? "Supero.. super" ಎಂದು ಮಾತ್ರ ಹೇಳಿ ಸುಮ್ಮನೇ ಹೋಗಿಬಿಡಬಾರದು. ನೀವು ಸಹ ಎಲ್ಲಾದಕ್ಕೂ ಸ್ತೋತ್ರ ಹೇಳಬೇಕು. ನಿಮಗೆ ಇಷ್ಟವಾಗಲಿ, ಇಷ್ಟವಾಗದಿರಲಿ, ಸಂತೋಷವಾಗಲಿ ಅಥವಾ ದುಃಖವಾಗಲಿ, ಯಾವುದಾದರೂ ಸರಿ Jesus - ನ್ನು praise ಮಾಡಿಬಿಟ್ಟರೆ ಸಾಕು, ಎಂಥಹಾ ತಡೆಗಳನ್ನಾದರೂ ದಾಟಿ ಯಶಸ್ವಿ ಜೀವನವನ್ನು ನಡೆಸಬಹುದು. Ok ನಾ! Bye, Happy Sunday.

- Mrs. ಅನ್ಬುಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet padişahbet bets10 extrabet royalbet süperbetin padişahbet betcio romabet giriş romabet queenbet bahiscasino atlasbet bahiscasino atlasbet matbet matbet giriş bahiscasino celtabet queenbet casibom jojobet