Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.10.2022
Share:

By Village Missionary Movement

Friday, 28-Oct-2022

ಧೈನಂದಿನ ಧ್ಯಾನ(Kannada) – 29.10.2022

 

ಯೇಸುವಿನ ಹೆಸರಿನಲ್ಲಿ ಜಯ

 

"ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು" - ಯೋಹಾನ 14:14

 

20 ವರ್ಷದ ಲುಡ್ವಿಕ್ ಕಾಲುಗಳು ಮುರಿದ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ನಡೆಯಲು ಸಾಧ್ಯವಾಗದೆ ನೋವಿನಲ್ಲಿ ತನ್ನ ದಿನಗಳನ್ನು ಕಳೆಯುತ್ತಿದ್ದರು. ಒಂದು ದಿನ ಸತ್ಯವೇದವನ್ನು ಓದುತ್ತಿರುವಾಗ ಯೋಹಾನ 14:14 ಅವರನ್ನು ಅಲುಗಾಡಿಸಿತು. ಅವರು ಆ ವಾಕ್ಯವನ್ನು ಮತ್ತೆ ಮತ್ತೆ ಓದುತ್ತಲೇ ಇದ್ದರು. ತನ್ನ ಅಮ್ಮನನ್ನು ಹತ್ತಿರ ಕರೆದು, “ದೇವರು ನನಗೆ ಒಳ್ಳೆ ಸ್ವಸ್ಥತೆ ಕೊಟ್ಟು ನಾನು ಎದ್ದು ನಡೆಯುವಂತೆ ಮಾಡುತ್ತಾರಾ? ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು ಎಂದು ಹೇಳಿದ್ದಾರಲ್ಲಾ ನನಗೆ ಈ ಉಪಕಾರವನ್ನು ಮಾಡಿ ಆಶೀರ್ವದಿಸುತ್ತಾರಾ?" ಎಂದು ಕೇಳಿದರು ಅದಕ್ಕೆ ಆ ತಾಯಿಯು ಸಹ ಬಹಳ ನಂಬಿಕೆಯಿಂದ ತನ್ನ ಮಗನ ಕೈಗಳೊಂದಿಗೆ ತನ್ನ ಕೈಗಳನ್ನೂ ಜೋಡಿಸಿ ಪ್ರಾರ್ಥಿಸಲು ಪ್ರಾರಂಭಿಸಿದರು.

 

ಲುಡ್ವಿಕ್ ಕ್ರಿಸ್ತನನ್ನು ಪೂರ್ಣ ಹೃದಯದಿಂದ ನಂಬಲು ಪ್ರಾರಂಭಿಸಿದರು. 3 ವರ್ಷಗಳು ಕಳೆದವು. ಒಂದು ದಿನ ಅವರು ತನ್ನ ಹಾಸಿಗೆಯಿಂದ ಎದ್ದರು, ನಡೆದರು, ಓಡಿದರು. 24 ವಯಸ್ಸಿನ ಆ ಯುವಕನು ಕೈಯಲ್ಲಿ ಬೈಬಲ್ ಹಿಡಿದು ಇಂಡೋನೇಷ್ಯಾದ ಸುಮತ್ರಾ ದ್ವೀಪಕ್ಕೆ ಮಿಷನರಿಯಾಗಿ ಹೋದರು. ಕ್ರಿಸ್ತನು ಯಾರೆಂದೇ ತಿಳಿಯದ, "ಪೋಪಾಕ್" ಎಂದು ಕರೆಯಲ್ಪಡುವ ಆ ಜನರಿಗೆ, ಅವರು ತನ್ನ ಜೀವನದಲ್ಲಿ ಅದ್ಭುತವನ್ನು ಮಾಡಿ ದೇವರ ಪ್ರೀತಿಯನ್ನು ರುಚಿ ನೋಡುವಂತೆ ಮಾಡಿದ ದೇವರನ್ನು ಪ್ರಕಟಿಸಿದರು. ಅವರು ತಾಳ್ಮೆಯಿಂದ ಅನೇಕ ಕಷ್ಟಗಳನ್ನು ಮತ್ತು ಅಡೆತಡೆಗಳನ್ನು ಸಹಿಸಿಕೊಂಡು ಕ್ರಿಸ್ತನನ್ನು ಬೋಧಿಸಿದರು. ಅವರು ಸತ್ಯವೇದವನ್ನು ಆ ಜನರ ಭಾಷೆಗೆ ಭಾಷಾಂತರಿಸಲು ಪ್ರಾರಂಭಿಸಿದರು. 1862 ರಿಂದ 1876 ರವರೆಗೆ 2000 ಆತ್ಮಗಳನ್ನು ಸಂಪಾದಿಸಿದರು. 1878 ರಲ್ಲಿ ಅವರು ಹೊಸ ಒಡಂಬಡಿಕೆಯನ್ನು ಪೋಪಾಕ್ ಭಾಷೆಯಲ್ಲಿ ಹೊರಬಿಟ್ಟರು. ಜನರು ಮಹಾನ್ ನಿಧಿಯನ್ನು ಸ್ವೀಕರಿಸಿದ ಸಂತೋಷದಲ್ಲಿ ದಿನದಿಂದ ದಿನಕ್ಕೆ ಕ್ರಿಸ್ತನಲ್ಲಿ ಬೆಳೆಯಲು ಪ್ರಾರಂಭಿಸಿದರು. ಪ್ರಸ್ತುತ, ಅತ್ಯಧಿಕವಾದ ಕ್ರೈಸ್ತ ಜನಸಂಖ್ಯೆಯು ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿ ವಾಸಿಸುತ್ತಿದ್ದಾರೆ.

 

ನನ್ನ ಪ್ರಿಯರೇ! ನಾವು ಪ್ರಾರ್ಥಿಸುವಾಗ, ದೇವರು ಅದನ್ನು ಕೇಳುತ್ತಾರೆ ಮತ್ತು ಅದಕ್ಕೆ ಉತ್ತರಿಸುತ್ತಾರೆ ಎಂಬುದನ್ನು ನಂಬಿ ಪ್ರಾರ್ಥಿಸಬೇಕು. ನಂಬಿಕೆಯಿಲ್ಲದ ಪ್ರಾರ್ಥನೆ ನಿಷ್ಪ್ರಯೋಜಕವಾಗಿದೆ. ಕ್ರಿಸ್ತನು ತಂದೆಯೊಂದಿಗೆ ನಮಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದಾರೆ ಎಂದು ತಿಳಿದು ನಾವು ಪ್ರಾರ್ಥಿಸುವಾಗ, ಪವಿತ್ರಾತ್ಮನೂ ಸಹ ನಮಗಾಗಿ ಬೇಡಿಕೊಳ್ಳುತ್ತಾರೆ. (ರೋಮಾ 8:26-27) ನಾವು ತಂದೆಯ ಬಳಿ ಪ್ರಾರ್ಥಿಸಲು ಕರ್ತನಾದ ಯೇಸುಕ್ರಿಸ್ತನ ಮೂಲಕವೇ ಅರ್ಹತೆಯನ್ನು ಪಡೆದಿದ್ದೇವೆ. ಆದ್ದರಿಂದ ಯೇಸುವಿನ ಹೆಸರಿನಲ್ಲಿ ನಮ್ಮ ವಿಜ್ಞಾಪನೆಗಳನ್ನು ಸಲ್ಲಿಸಿ ಯಶಸ್ವಿ ಜೀವನವನ್ನು ನಡೆಸೋಣ. ದೇವರ ಕೃಪೆ ನಮ್ಮನ್ನು ಕಾಪಾಡಲಿ! ಆಮೆನ್.

- Mrs. ಸರೋಜಾ ಮೋಹನ್ ದಾಸ್

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗೆ ಕರ್ತನು ಬೇಕಾದ ಜ್ಞಾನವನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel