Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.10.2022
Share:

By Village Missionary Movement

Thursday, 27-Oct-2022

ಧೈನಂದಿನ ಧ್ಯಾನ(Kannada) – 28.10.2022

 

ದೇವರ ಆಲೋಚನೆಗಳು

 

“ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ" - ಯೆಶಾಯ 55:8

 

ಆಲ್ಬರ್ಟ್ ಐನ್ಸ್ಟೈನ್ ಬಗ್ಗೆ ಗೊತ್ತಿಲ್ಲದವರು ಯಾರೂ ಇರಲಾರರು. ಅವರು ಗಣಿತದ ಕೌಶಲ್ಯಗಳನ್ನು ಹೊಂದಿರುವ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದಾರೆ. ಆದರೆ ಅವರ ಯೌವನದ ಬಗ್ಗೆ ಓದಿದಾಗ, ಅವರು ವೇಗವಾಗಿ ಕಲಿಯುವಂತವರಲ್ಲ ಎಂಬುದು ನಮಗೆ ತಿಳಿಯುತ್ತದೆ. ಅದೇ ರೀತಿ ಥಾಮಸ್ ಅಲ್ವಾ ಎಡಿಸನ್ ಎಂಬ ವಿಜ್ಞಾನಿಯ ಜೀವನವನ್ನು ಹಿಂತಿರುಗಿ ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ. ಚಿಕ್ಕಂದಿನಿಂದಲೂ ಅವರ ಶ್ರವಣ ಸಾಮರ್ಥ್ಯ ತೀರಾ ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ಶಾಲೆಯಲ್ಲಿ ಶಿಕ್ಷಕರು "ಬ್ರೈನ್ ಡಿಸಾರ್ಡರ್" ಎಂದು ಹೇಳಿ ಶಾಲೆಯಿಂದ ಅರ್ಧಕ್ಕೆ ಹೊರಹಾಕಿದ್ದರು. ಆ ನಂತರ ಮನೆಯಲ್ಲಿಯೇ ತಾಯಿಯಿಂದ ಶಿಕ್ಷಣ ಪಡೆದರು. ಅಂತಹ ಇನ್ನೊಬ್ಬ ವ್ಯಕ್ತಿ ಅಬ್ರಹಾಂ ಲಿಂಕನ್. ನಾವು ಅವರನ್ನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಎಂದು ತಿಳಿದಿದ್ದೇವೆ. ಆದರೆ, ಅವರು ತನ್ನ ಜೀವನದಲ್ಲಿ ಅನೇಕ, ಅನೇಕ ವೈಫಲ್ಯಗಳನ್ನು ಕಂಡಿದ್ದಾರೆ. 1826 ರಲ್ಲಿ, ಅವರು ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು 6 ತಿಂಗಳ ಕಾಲ ಹಾಸಿಗೆ ಹಿಡಿದರು. ತರುವಾಯ, ಅವರು ಮೂರು ಬಾರಿ ರಾಜಕೀಯ ಕಚೇರಿಗೆ ಸ್ಪರ್ಧಿಸಿ ವಿಫಲರಾದರು. ಆದರೆ ಕೊನೆಯಲ್ಲಿ, ಅವರ ಸತತ ಪ್ರಯತ್ನವು ಅವರನ್ನು ರಾಷ್ಟ್ರದಲ್ಲಿ ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷರನ್ನಾಗಿ ಮಾಡಿತು.

  

ನನ್ನ ಪ್ರಿಯರೇ! ಸಾಧಕರ ಪಟ್ಟಿ ನೋಡಿದರೆ ಸೋತ ನಂತರ ಸಾಧನೆ ಮಾಡಿದವರು ಹಲವರಿದ್ದಾರೆ. ಯೇಸು ಪ್ರತಿಯೊಬ್ಬರಿಗೂ ಪ್ರತಿಭೆಯನ್ನು ಕೊಟ್ಟಿದ್ದಾರೆ. ಇದನ್ನು ಬರೆಯುತ್ತಿರುವ ನಾನೂ ಸಹ ಚೆನ್ನಾಗಿ ಓದಿ ದೊಡ್ಡವನಾಗಬೇಕು ಎಂದುಕೊಂಡಿದ್ದೆ. ಆದರೆ ದೇವರ ಯೋಜನೆ ನನ್ನನ್ನು ವಿಭಿನ್ನವಾಗಿ ನಡೆಸಿತು. ನಾನು ದೇವರಿಗೆ ಮೊರೆಯಿಟ್ಟ ದಿನಗಳೂ ಇವೆ. ದೇವರು ಮೌನವಾಗಿದ್ದರು. ಹಲವು ಹೋರಾಟಗಳ ನಡುವೆ ಹಾದುಹೋಗುವಾಗ, ನಾನು ದೇವರನ್ನು ಪ್ರಶ್ನಿಸುತ್ತಿದ್ದೆ. ಆಗ ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು (ಯೆರೆಮಿಯ 1:5) ಎಂದು ಉತ್ತರಿಸಿದ ದೇವರು, ಇಂದು ಅನೇಕರಿಗೆ ಆಶೀರ್ವಾದದ ನಿಧಿಯಾಗಿ ನನ್ನನ್ನು ಉಪಯೋಗಿಸುತ್ತಿದ್ದಾರೆ. ನನ್ನನ್ನು ಉಪಯೋಗಿಸಿದ ದೇವರು ನಿಮ್ಮನ್ನೂ ಉಪಯೋಗಿಸುತ್ತಾರೆ.

     

ಆದ್ದರಿಂದ ನಾವು ಸೋಲಿನ ಸಮಯದಲ್ಲಿ ಬಿಟ್ಟುಕೊಡದೆ, ನಮ್ಮ ಭಾರವನ್ನು ದೇವರ ಮೇಲೆ ಹಾಕಿ, ಅವರು ಕೊಡುವಂತಹ ಶಕ್ತಿಯಿಂದ ಪರಿಸ್ಥಿತಿಗಳನ್ನು ಎದುರಿಸಿ ಹೋರಾಡುವಾಗ, ಅದು ಖಂಡಿತವಾಗಿಯೂ ನಮ್ಮ ಜೀವನದಲ್ಲಿ ದೇವರ ಆಲೋಚನೆಗಳನ್ನು ನೆರವೇರಿಸುತ್ತದೆ. ದೇವರು ನಮಗಾಗಿ ಇಟ್ಟಿರುವ ಓಟದಲ್ಲಿ ತಾಳ್ಮೆಯಿಂದ ಓಡೋಣ, ಆತನ ಚಿತ್ತವನ್ನು ಪೂರೈಸೋಣ ಮತ್ತು ದೇವರ ಆಶೀರ್ವಾದವನ್ನು ಪಡೆಯೋಣ. ಆಮೆನ್.

- Mrs. S. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಂಬಿಕೆ ಟಿವಿ ಮತ್ತು ಸತ್ಯಂ ಟಿವಿಯ ದೈನಂದಿನ ಕಾರ್ಯಕ್ರಮಗಳ ಮೂಲಕ ಭೇಟಿಯಾಗುವ ಜನರು ದೇವರ ಪ್ರೀತಿಯಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel