Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.02.2021
Share:

By Village Missionary Movement

Monday, 15-Feb-2021

ಧೈನಂದಿನ ಧ್ಯಾನ(Kannada) – 15.02.2021

ಚೀಟು ನಿನ್ನ ಹೆಸರಿನಲ್ಲಿ

"...ಚೀಟು ಮತ್ತೀಯನಿಗೆ ಬಂದದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರ ಸಂಗಡ ಸೇರಿ ಎಣಿಸಲ್ಪಟ್ಟನು" - ಅಪೊಸ್ತಲ 1:26

ಅಂತರಾಷ್ಟ್ರೀಯ ಭಾರತದ ಕ್ರಿಕೆಟ್ ತಂಡದಲ್ಲಿ ಒಬ್ಬ ವೀರನಾಗಿ ಸ್ಥಳ ಹಿಡಿಯುವುದೆಂದರೆ ಅದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಈಗ ಬಹಳ ಇಷ್ಟಪಡುವ T20 ಅಂತರ್ರಾಷ್ಟ್ರೀಯ ಭಾರತ ತಂಡದಲ್ಲಿ ಸ್ಥಳ ಹಿಡಿಯುವುದು ಬಹಳ ಕಠಿಣವಾದದ್ದು. 2020 ಅಕ್ಟೋಬರ್ 26 ನೇ ತಾರೀಕು ಅಂತರಾಷ್ಟ್ರೀಯ ಭಾರತ ತಂಡದ ಆಸ್ಟ್ರೇಲಿಯಾ ಪ್ರಯಾಣದಲ್ಲಿ 15 ಜನ ಹೆಸರುಗೊಂಡ ಗುಂಪಿನಲ್ಲಿ ನಟರಾಜನ್ ಎಂಬ ತಮಿಳ್ ಆಟಗಾರನು ಸ್ಥಳ ಹಿಡಿದಿದ್ದರು. ಅದೇ ವರ್ಷ ನವಂಬರ್ 4 ನೇ ತಾರೀಕು ನಡೆದ ಈ ಎರಡನೆಯ T20 ಆಟದಲ್ಲಿ ಮುಖ್ಯವಾದ ಆಟಗಾರನಿಗೆ ಗಾಯವಾಗಿದ್ದರಿಂದ ಚೀಟು ಹಾಕಲು ನಟರಾಜನ್ ಹೆಸರಿಗೆ ಬಿದ್ದದ್ದರಿಂದ ಆಟವಾಡುವ ಅವಕಾಶ ಸಿಕ್ಕಿತು. ಬಹಳ ಕಷ್ಟ ಪಟ್ಟ ಕುಟುಂಬ ಹಿನ್ನೆಲೆ, ಯಾವುದೇ ಒಂದು ದೊಡ್ಡ ಶಿಫಾರಸ್ಸು ಇಲ್ಲ. ಅವರು ಆಡಿದ ಮೊದಲ ಆಟದಲ್ಲಿಯೇ ಮುಖ್ಯವಾದ ಮೂರು ವಿಕೆಟ್ ಗಳನ್ನು ಬೀಸಿ ಭಾರತ ತಂಡದ ಗೆಲುವಿಗೆ  ದಾರಿ ತೋರಿಸಿದರು. ಅದರ ನಂತರ ಗೆದ್ದ ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಪ್ಪನ್ನು ಹೊಸ ಆಟಗಾರನಾದ ನಟರಾಜನ್ ಕೈಗೆ ಕೊಟ್ಟು ಸಂತೋಷಪಟ್ಟರು. ಇನ್ನೊಂದು ಆಟಗಾರನಾದ  ಕಾರ್ತಿಕ್ ಪಾಂಡ್ಯ ಕೂಡ ಅದನ್ನೇ ಮಾಡಿದರು. ಇದರ ಮೂಲಕ ನಟರಾಜನ್ ಹೆತ್ತವರಿಗೂ, ಊರಿಗೂ, ಮಾತ್ರವಲ್ಲದೆ ತಮಿಳುನಾಡಿಗೇ ಹೆಮ್ಮೆ. ಈಗ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ T20 ಯಲ್ಲಿ ಒಂದು ನಿರಂತರವಾದ ಆಟಗಾರನಾಗಿ ಇದ್ದು ಬಿಟ್ಟಿದ್ದಾರೆ ನಟರಾಜನ್.

ಪರಿಶುದ್ಧ ಗ್ರಂಥದಲ್ಲಿಯೂ ಅಪೊಸ್ತಲರ ಕೃತ್ಯಗಳು ಮೊದಲನೇ ಅಧ್ಯಾಯದಲ್ಲಿ ನೋಡುವಾಗ, ಯೇಸುಕ್ರಿಸ್ತನ 12 ಜನ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತ ಯೂದನು ಹಣದಾಸೆಯಿಂದ ಸೈತಾನನಿಗೆ ತನ್ನನ್ನು ಒಪ್ಪಿಸಿಕೊಟ್ಟು, ಯೇಸುವನ್ನು ತೋರಿಸಿಕೊಟ್ಟು, ನಂತರ ನೇಣು ಹಾಕಿಕೊಂಡು ಸತ್ತನು ಎಂದು ನೋಡುತ್ತೇವೆ. ಅವನು ಬಿಟ್ಟು ಬಂದ ಆ ದೊಡ್ಡ ಸ್ಥಳವನ್ನು ತುಂಬಿಸಲು ಶಿಷ್ಯರು ತೀರ್ಮಾನಿಸಿದರು. ಆಗ ಚೀಟು ಮತ್ತೀಯನ ಹೆಸರಿಗೆ ಬಿತ್ತು. (ಅಪೊಸ್ತಲ.1:26) ಇದು ಮತ್ತೀಯನಿಗೆ ಸಿಕ್ಕಿದ ಒಂದು ಹೆಮ್ಮೆಯೆಂದು ಹೇಳಬಹುದು. ಮತ್ತೀಯನಿಗೆ ಅಪೊಸ್ತಲ ಪದವಿಯು ಸಿಕ್ಕಿತು. ಎಂಥಾ ಆಶ್ಚರ್ಯ ಮತ್ತೀಯ ನೆನಸಿ ಕೂಡ ನೋಡಿರುವುದಿಲ್ಲ. ಆದರೆ ಚೀಟು ಬಿದ್ದ ಕೂಡಲೇ ಅಂಗೀಕರಿಸಿ 11 ಜನ ಅಪೊಸ್ತಲರೊಂದಿಗೆ ಸೇರಿಕೊಂಡು ಸುವಾರ್ತೆ ಸಾರುವುದಕ್ಕೆ ಒಂದು ಕಾರಣವಾಗಿ ನೇಮಿಸಲ್ಪಟ್ಟರು.

ಇದನ್ನು ಓದುತ್ತಿರುವ ಪ್ರಿಯರೇ! ಚೀಟು ಬೀಳುವ ಹಾಗೆ ದೇವರ ಸೇವೆಯನ್ನು ಮಾಡಬೇಕಾದ ಕರೆಯುವಿಕೆ ನಿಮಗೂ ಬರ ಬಹುದು ಒಂದು ಸಂದೇಶದ ಮೂಲಕವೋ, ದೈವ ಧ್ಯಾನದ ಮೂಲಕವೋ ಪರಿಸ್ಥಿತಿಗಳ ಮೂಲಕವೋ, ನೀವು ದೇವರ ಸೇವೆಯನ್ನು ಮಾಡಲು ಪ್ರೇರೇಪಿಸಬಹುದು. ಆಗ ನೀವು ಆ ಕರೆಯುವಿಕೆಯನ್ನು ಅಂಗೀಕರಿಸಿ ಸೇವೆಯನ್ನು ಬೆಂಬಲಿಸಲು ಮುಂದೆ ಬನ್ನಿರಿ. ಮೇಲ್ಕಂಡ ಇಬ್ಬರು ಚೀಟು ಬಿದ್ದಾಗ ಅದನ್ನು ಅಂಗೀಕರಿಸಿ ತಮ್ಮಿಂದ ಸಾಧ್ಯವಾದಷ್ಟು ಅವರವರ ಸ್ಥಳಕ್ಕೆ ಹೆಮ್ಮೆಯನ್ನು ಸೇರಿಸಿದರು. "ನಿಮ್ಮ ಹೆಸರಿನಲ್ಲಿ ಚೀಟು ಬಿದ್ದರೆ?" ನೀವು ದೇವರ ಸೇವೆಯನ್ನು ಮಾಡಿರಿ ನಿಮ್ಮಿಂದಲೂ ಕೂಡ ಸಾಧ್ಯವಾದಷ್ಟು ನಮ್ಮ ದೇಶಕ್ಕೆ ಆಶೀರ್ವಾದವನ್ನು ಹೊತ್ತು ತರಲು ಸಾಧ್ಯ.
-    T. ಶಂಕರ್ ರಾಜನ್

ಪ್ರಾರ್ಥನಾ ಅಂಶ:-
ಗ್ರಾಮಗಳನ್ನು ದತ್ತು ತೆಗೆದುಕೊಂಡಿರುವ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel