By Village Missionary Movement
Wednesday, 26-Oct-2022ಧೈನಂದಿನ ಧ್ಯಾನ(Kannada) – 27.10.2022
ಸಂತೈಸುವ ದೇವರು
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ." - 1 ಪೇತ್ರ 5:7
ಒಂದು ಪುಟ್ಟ ಮಗು ಆಟವಾಡುವಾಗ ಕೆಳಗೆ ಬಿದ್ದು ಅವಳ ಬೆರಳಿಗೆ ಪೆಟ್ಟಾಯಿತು. ಅವಳು ತನ್ನ ಬೆರಳಿನಲ್ಲಾದ ಗಾಯದಿಂದ ಅಳುತ್ತಾ ತನ್ನ ತಂದೆಯ ಬಳಿಗೆ ಓಡಿ ಬಂದಳು. ಅಪ್ಪಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. "ಅಪ್ಪಾ, ನನ್ನ ಬೆರಳಿಗೆ ಪೆಟ್ಟು ಬಿದ್ದಿದೆ, ನೋವಾಗ್ತಿದೆ, ಔಷಧಿ ಹಾಕಿ" ಎಂದು ಪುಟ್ಟ ಹುಡುಗಿ ಅತ್ತಳು. ಅಪ್ಪಾ ತಲೆಯೆತ್ತಿ ನೋಡಿ, "ನಾನೀಗ ತುಂಬಾ ಬ್ಯುಸಿ ಇದ್ದೇನೆ, ಹೋಗು ಈಗ ಏನೂ ಮಾಡಲು ಸಾಧ್ಯವಿಲ್ಲ" ಎಂದರು. ಪುಟ್ಟ ಹುಡುಗಿ ತುಂಬಾ ಹಂಬಲಿಸುತ್ತಾ, “ಅಪ್ಪಾ, ನನಗೆ ಔಷಧಿ ಹಾಕದಿದ್ದರೂ ಪರವಾಗಿಲ್ಲ, ಸ್ವಲ್ಪ ಸಮಾಧಾನದ ಮಾತುಗಳನ್ನಾದರೂ ಹೇಳಿರಬಹುದೇ?” ಎಂದು ಅತ್ತಳು. ಆಗ ಅಪ್ಪ ಅವಳ ತಲೆ ಸವರುತ್ತಾ ಹಿತವಾದ ಮಾತುಗಳನ್ನಾಡಿ ಬೆರಳಿಗೆ ಔಷಧಿ ಹಾಕಿದರು.
1 ಪೇತ್ರ 5:7 ರಲ್ಲಿ, "ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" ಎಂದು ಹೇಳಿರುವುದನ್ನು ಓದುತ್ತೇವೆ. ಅನೇಕ ಬಾರಿ ಪರಿಸ್ಥಿತಿಗಳು ನಮ್ಮನ್ನು ಒತ್ತುತ್ತಿರುವಾಗ, ಚಿಂತೆಗಳು ನಮ್ಮನ್ನು ಕಾಡುತ್ತಿರುವಾಗ, ಯಾರಾದರೂ ನಮ್ಮನ್ನು ಸಾಂತ್ವನಗೊಳಿಸಿ ನಮ್ಮನ್ನು ಕೇಳುವುದಿಲ್ಲವೇ? ಎಂದು ನಾವು ಹಂಬಲಿಸುತ್ತೇವೆ. ಆದರೆ ನಮ್ಮನ್ನು ವಿಚಾರಿಸಲು ಒಬ್ಬರಿದ್ದಾರೆ. ಅವರು ನಮ್ಮನ್ನು ಪ್ರೀತಿಯಿಂದ ವಿಚಾರಿಸುತ್ತಾರೆ. ಅವರೇ ನಮ್ಮ ಕರ್ತನಾದ ಯೇಸು ಕ್ರಿಸ್ತನು "ನಿಮ್ಮ ಎಲ್ಲಾ ಚಿಂತಾಭಾರವನ್ನು ಅವರ ಮೇಲೆ ಹಾಕಿರಿ" ಎಂದು ಸತ್ಯವೇದವು ಹೇಳುತ್ತಿದೆ. ಮನುಷ್ಯರು ಬದಲಾಗಬಹುದು, ತಂದೆ-ತಾಯಿಯೂ ನಮ್ಮನ್ನು ತ್ಯಜಿಸಬಹುದು, ಆದರೆ ಆತನು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ಅವರು ಯಾವಾಗಲೂ ನಮ್ಮ ಪಕ್ಕದಲ್ಲಿದ್ದಾರೆ. ನೀವು ಆತನನ್ನು "ಅಪ್ಪಾ, ತಂದೆಯೇ" ಎಂದು ಕರೆಯುವಾಗ ಅವರು ನಿಮಗೆ ಉತ್ತರಿಸುತ್ತಾರೆ.
ಪ್ರಿಯರೇ! ಇಂದಿಗೂ ನಾವು ನಮ್ಮನ್ನು ಪ್ರೀತಿಸಲು ಮನುಷ್ಯರನ್ನು ಹುಡುಕುತ್ತಿರಬಹುದು. ಆದರೆ ದೇವರು, "ನನ್ನ ಮಗ, ನನ್ನ ಮಗಳು, ನನ್ನನ್ನು ಪ್ರೀತಿಸುವುದಿಲ್ಲವಾ?" ಎಂದು ಕಾಯುತ್ತಿದ್ದಾರೆ. ದಿಕ್ಕಿಲ್ಲದವರಿಗೆ ಆತನೇ ಸಹಾಯಕನು, ತಾಯಿ, ತಂದೆಯಾಗಿರುವಾತನು ಆತನೇ. ಆತನು ನಮ್ಮ ಮೇಲಿಟ್ಟಿರುವ ಪ್ರೀತಿಯ ಆಳ, ಅಗಲ, ಉದ್ದ ಮತ್ತು ಎತ್ತರವನ್ನು ತಿಳಿಯಲು ನಮ್ಮಿಂದ ಸಾಧ್ಯವಿಲ್ಲ. ನಮ್ಮ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು ಆತನು ತನ್ನ ಪ್ರಾಣವನ್ನೇ ಕೊಟ್ಟರೆಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ನಿಮ್ಮನ್ನು ಪ್ರೀತಿಸುತ್ತಿರುವ ಆತನನ್ನು ನೀವು ಪ್ರೀತಿಸಿರಿ. ನಿಮ್ಮ ಜೀವನ ಸಂತೋಷವಾಗಿ ಮಾರ್ಪಡುತ್ತದೆ ದೇವರು ನಿಮ್ಮನ್ನು ಆಶೀರ್ವದಿಸಲಿ!
- M. ಹೆಪ್ಸಿಬಾ
ಪ್ರಾರ್ಥನಾ ಅಂಶ:
ನಾವು ಮಾಡುತ್ತಿರುವ ವಾಕ್ಯಗಳ ಪೋಸ್ಟರ್ ಸೇವೆಯ ಮೂಲಕ ಮನೆಗಳಲ್ಲಿ ಅಂಟಿಸಿರುವ ವಚನಗಳನ್ನು ಓದುವವರ ಹೃದಯದಲ್ಲಿ ದೇವರು ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482