By Village Missionary Movement
Tuesday, 25-Oct-2022ಧೈನಂದಿನ ಧ್ಯಾನ(Kannada) – 26.10.2022
ಸತತವಾಗಿ ಮುನ್ನಡೆ
"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ" - ಜ್ಞಾನೋಕ್ತಿ. 24:10
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ವಿಶ್ವವಿದ್ಯಾಲಯಗಳಲ್ಲಿ, ಅನೇಕ ಅಂತರಕಾಲೇಜು ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ತನ್ನ ಇತಿಹಾಸದಲ್ಲಿ ಸತತ 252 ಪಂದ್ಯಗಳನ್ನು ಗೆದ್ದಿದ್ದ ಟ್ರಿನಿಟಿ ಕಾಲೇಜು, ಸುದೀರ್ಘ ಅಂತರದ ನಂತರ 2012 ರ ಜನವರಿ 18 ರಂದು ಯೇಲ್ ವಿಶ್ವವಿದ್ಯಾಲಯದ ವಿರುದ್ಧದ ಸ್ಕ್ವಾಷ್ ಪಂದ್ಯದಲ್ಲಿ ಸೋತಿತು. 14 ವರ್ಷಗಳಲ್ಲಿ ಮೊದಲ ಬಾರಿಗೆ ಕಾಲೇಜು ವಿಫಲವಾಯಿತು. ತಂಡದ ತರಬೇತುದಾರ, ಪಾಲ್ ಏಷಿಯಾಂಟಿನ್ ಮತ್ತು ಪ್ರಸಿದ್ಧ ಫುಟ್ಬಾಲ್ ತರಬೇತುದಾರರ ಸ್ನೇಹಿತರೊಬ್ಬರು ಮೂರು ಪದಗಳ ಸಂದೇಶವನ್ನು ಇಮೇಲ್ ಮಾಡಿದರು "ಸರಿ, ಮತ್ತೆ ಎದ್ದೇಳು" ಎಂದು. ನಾವು ವಿಫಲವಾದಾಗ ನಾವೆಲ್ಲರೂ ಮತ್ತೆ ಎದ್ದೇಳಬೇಕು. ಬದಲಿಗೆ, ಖಿನ್ನತೆಯ ಕಾರಣದಿಂದಾಗಿ ನಿಂತುಬಿಡಬಾರದು. ಜೀವನದಲ್ಲಿ ಸೋಲನ್ನು ಕಾಣದ ಜನರು ಅದನ್ನು ಭೇಟಿಯಾದಾಗ ಹತಾಶೆಯಲ್ಲಿ ಮಾಯವಾಗುತ್ತಾರೆ.
1 ಅರಸುಗಳ ಪುಸ್ತಕದಲ್ಲಿ, ಪ್ರವಾದಿಯಾದ ಎಲೀಯನು ,ಈಜೆಬೆಲಳ ಪತ್ರದಿಂದಾಗಿ ಮನಸೋತು "ಸಾಕು ಕರ್ತನೇ" ಎಂದು ಹಿಂಜರಿಯುತ್ತಾರೆ. ಆದರೆ ಕರ್ತನು ಎಲೀಯನಿಗೆ, "ಎದ್ದು ಊಟಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ" ಅಂದರು. ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಅಹಿತಕರ ಸಂಗತಿಗಳು ನಮ್ಮ ಜೀವನದಲ್ಲಿ ಹಸ್ತಕ್ಷೇಪ ಮಾಡಿದಾಗ, ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅದಕ್ಕೆ ಆಸ್ಪದ ಕೊಡದೆ ಸತ್ಯವೇದವು ಏನು ಹೇಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಯೋಚಿಸಬೇಕು. ನಾವು ದಣಿಯುವುದು ಮತ್ತು ಹಿಂಜಾರಿಹೋಗುವುದು ಇವುಗಳನ್ನು ಸತ್ಯವೇದವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ, ಸ್ವಲ್ಪ ಅನ್ವೇಷಿಸಿ ಸತತವಾಗಿ ಓಡುತ್ತಲೇ ಇರಬೇಕೆಂದು ದೇವರು ಬಯಸುತ್ತಿದ್ದಾರೆ.
ಇಬ್ರಿಯರಿಗೆ ಬರೆದ ಪತ್ರಿಕೆಯಲ್ಲಿ "ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು" ಎಂದು ಓದುತ್ತೇವೆ. ಅವರು ಹಾಗೆ ಸತತವಾಗಿ ಹೇಳುವಾಗ, ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ" ಎಂದು ಬರೆಯುತ್ತಾರೆ.
ಕ್ರಿಸ್ತನಲ್ಲಿ ಪ್ರಿಯರೇ! ಇಂದಿನ ಸಂದೇಶದಲ್ಲಿ, "ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ" ಎಂದು ಓದುತ್ತೇವೆ. ಸಮಸ್ಯೆಗಳು, ವೈಫಲ್ಯಗಳು ಮತ್ತು ನಿರಾಶೆಗಳು ಬಂದಾಗ, ಸತ್ಯವೇದವನ್ನು ಹಿಡಿದುಕೊಂಡು ಮುಂದುವರಿಯಿರಿ. ಕರ್ತನು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಓಟವು ಮತ್ತು ಚಟುವಟಿಕೆಗಳು ತಡೆಯಾಗದಿರಲಿ.
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ನಾವು ಮಾಡುವ ಹಸ್ತಪ್ರತಿ ಸೇವೆಗಳ ಮೂಲಕ ಭೇಟಿಯಾಗುವ ಜನರ ಹೃದಯದಲ್ಲಿ ದೇವರು ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482