Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.10.2022 (Youth Special)
Share:

By Village Missionary Movement

Monday, 24-Oct-2022

ಧೈನಂದಿನ ಧ್ಯಾನ(Kannada) – 24.10.2022 (Youth Special)

 

ತಂದೆಯ ಪ್ರೀತಿ

 

“...ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಅಂದನು" - ಮತ್ತಾಯ 9: 6

 

ಪ್ರೀತಿಯ ಕಣ್ಮಣಿಗಳೇ! ನಾನು ನಿಮಗೊಂದು ಕಥೆಯನ್ನು ಹೇಳಲು ಬಯಸುತ್ತೇನೆ. ಒಂದು ಹಳ್ಳಿಯಲ್ಲಿ ಮೇರಿ ಎಂಬ ಯುವತಿ ವಾಸಿಸುತ್ತಿದ್ದಳು. ಅವಳಿಗೆ ತಾಯಿ ಇಲ್ಲದ ಕಾರಣ ಅವಳ ತಂದೆ ಅವಳನ್ನು ತುಂಬಾ ಪ್ರೀತಿಸುತ್ತಿದ್ದರು. ಉನ್ನತ ವ್ಯಾಸಂಗಕ್ಕಾಗಿ ಬೇರೆ ರಾಜ್ಯಕ್ಕೆ ಹೋದಳು. ಅಲ್ಲಿ ಅವಳು ತಪ್ಪು ಸ್ನೇಹಿತರಿಂದಾಗಿ ಪ್ರಾಪಂಚಿಕ ಜಾಲದಲ್ಲಿ ಸಿಕ್ಕಿಹಾಕಿಕೊಂಡಳು. ಅಪ್ಪನಿಗೆ ಸುಳ್ಳು ಹೇಳಿ ಹೆಚ್ಚು ಹಣ ಪಡೆಯತೊಡಗಿದಳು. ಮತ್ತು ಅವಳು ಕಾಲೇಜಿಗೆ ಹೋಗದೆ ಹಾಸ್ಟೆಲ್‌ಗಳಲ್ಲಿಯೂ ಇರದೇ ಹೊರಗೆ ಸುತ್ತಲು ಪ್ರಾರಂಭಿಸಿದಳು. ಇದನ್ನು ಆಕೆಯ ತಂದೆಗೆ ತಿಳಿಸಲಾಯಿತು. ಕೆಲವು ದಿನಗಳ ನಂತರ, ಮೇರಿಯಿಂದ ಯಾವ ಪ್ರಯೋಜನವೂ ಇಲ್ಲವೆಂದು ತಿಳಿದು, ಅವಳ ಸ್ನೇಹಿತರು ಅವಳಿಂದ ದೂರವಾದರು. ಈಗ ತನ್ನ ಸ್ಥಿತಿಯನ್ನು ತಿಳಿದ ಮೇರಿ ತುಂಬಾ ಪಶ್ಚಾತ್ತಾಪಪಟ್ಟಳು ಮತ್ತು ದೇವರನ್ನು ಕ್ಷಮಾಪಣೆ ಕೇಳಿದಳು. ಕ್ಷಮೆಯಾಚಿಸಿ ತನ್ನ ತಂದೆಗೂ ಪತ್ರವನ್ನು ಬರೆದಳು. ಅವಳ ತಂದೆ ಅವಳನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿ ಸ್ವೀಕರಿಸಿದರು.

 

 ಸತ್ಯವೇದದಲ್ಲಿಯೂ ಸಹ, ಯೇಸುಕ್ರಿಸ್ತನು ಇಂತಹಾ ಒಂದು ಸಾಮ್ಯವನ್ನು ಹೇಳಿದ್ದಾರೆ. ಲೂಕ 15:12 ರಲ್ಲಿ ನಾವು ಕಿರೀಮಗನ ಈ ಸಾಮ್ಯವನ್ನು ಓದುತ್ತೇವೆ. ಅವನು ತನ್ನ ತಂದೆಯ ಆಸ್ತಿಯಲ್ಲಿ ಪಾಲು ತೆಗೆದುಕೊಂಡು ದುಷ್ಟನಾಗಿ ಬದುಕಲು ದೂರದ ದೇಶಕ್ಕೆ ಹೋದನು. ಅಲ್ಲಿ ಅವನು ತನ್ನ ಸಂಪತ್ತನ್ನೆಲ್ಲ ಖರ್ಚು ಮಾಡಿ ಒಬ್ಬಂಟಿಯಾಗಿ ನಿಂತನು. ಆಗ ಅವನು ತನ್ನ ತಂದೆಯ ಮನೆಯನ್ನು ನೆನಪಿಸಿಕೊಂಡು, “ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ, ಎದ್ದು ನನ್ನ ತಂದೆಯ ಬಳಿಗೆ ಹೋಗುತ್ತೇನೆ" ಅಂದುಕೊಂಡನು. ಆದರೆ ಅವನ ತಂದೆಯು ಅವನನ್ನು ನೋಡಿ ಅವನನ್ನು ಅಪ್ಪಿಕೊಂಡು ಹೊಸ ಬಟ್ಟೆಗಳನ್ನು ತೊಡಿಸಿ ಅವನ ಆಗಮನವನ್ನು ಆಚರಿಸಲು ಔತಣವನ್ನು ಸಿದ್ಧಪಡಿಸಿದರು.

 

ಪ್ರೀತಿಯ ಯೌವನಸ್ಥ ಸಹೋದರ ಸಹೋದರಿಯರೇ! ಬೈಬಲ್ ಹೇಳುತ್ತದೆ, "ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ನಿಮಿತ್ತವಾಗಿ ಪರಲೋಕದಲ್ಲಿ ಬಹಳ ಸಂತೋಷವುಂಟಾಗುತ್ತದೆ" ಎಂದು. ಇನ್ನೂ ಸಹ ಲೌಕಿಕ ಇಚ್ಚೆಗಳಲ್ಲಿ ಸಿಲುಕಿ ಪಾಪಪ್ರಜ್ಞೆಯಿಂದ ಹೋರಾಡುತ್ತಿರುವ ಎಲ್ಲಾ ಕಣ್ಮಣಿಗಳಿಗೂ ದೇವರು ನುಡಿಯುತ್ತಿರುವ ಮಾತಿದು. ಅವರು ಪಾಪವನ್ನು ದ್ವೇಷಿಸುವವರು, ಆದರೆ ಪಾಪಿಗಳನ್ನು ಪ್ರೀತಿಸುತ್ತಾರೆ. ನಮಗೋಸ್ಕರ ಶಿಲುಬೆಯ ಮೇಲೆ ತನ್ನ ಸ್ವಂತ ರಕ್ತವನ್ನು ಸುರಿಸಿ ನಮ್ಮನ್ನು ವಿಮೋಚಿಸಿದರು. ಭೂಮಿಯ ಮೇಲೆ ಮನುಷ್ಯನ ಪಾಪಗಳನ್ನು ಕ್ಷಮಿಸುವ ಅಧಿಕಾರವು ಆತನಿಗಿದೆ. ಆದ್ದರಿಂದ, ನೀವು ನಿಮ್ಮ ಪಾಪಗಳನ್ನು ಮನಃಪೂರ್ವಕವಾಗಿ ಗ್ರಹಿಸಿ,ದೇವರ ಬಳಿ ಒಪ್ಪಿಕೊಂಡಾಗ, ಆತನು ಅವರನ್ನು ಕ್ಷಮಿಸಿ, ಅವುಗಳಿಂದ ನಿಮ್ಮನ್ನು ಬಿಡಿಸಲು ಶಕ್ತನಾಗಿದ್ದಾರೆ. ಆದ್ದರಿಂದ ನಿಮ್ಮ ಜೀವನವನ್ನು ದೇವರಿಗೆ ಅರ್ಪಿಸಿರಿ. ಆತನು ನಿಮ್ಮನ್ನು ಆಶೀರ್ವದಿಸುತ್ತಾರೆ.

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ನಮ್ಮ ಜೊತೆ ಸೇವಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel