By Village Missionary Movement
Sunday, 23-Oct-2022ಧೈನಂದಿನ ಧ್ಯಾನ(Kannada) – 23.10.2022 (Kids Special)
TIME IS GOLD
"ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ" - ಎಫೆಸದವರಿಗೆ 5:16
Hello ಪುಟಾಣಿಗಳೇ! School life ತುಂಬಾ ಜಾಲಿಯಾಗಿ ಹೋಗುತ್ತಿದಿಯಾ? ಒಂದು ದಿನ ರಜೆ ಸಿಕ್ಕರೂ ಹೊರಗೆ ಹೋಗಿ ಸುತ್ತಿ ನೋಡ್ಬೇಕು ಅಂತ ಆಸೆ ಪಡುತ್ತಾ ಇದ್ದೀರಲ್ವಾ? ನಿಮ್ಮ ಬಯಕೆ ಸಮಂಜಸವಾದದ್ದೇ. ಆದರೆ ನೀವು ಸಮಯವನ್ನು ಹೇಗೆ ಬಳಸುತ್ತೀರಿ? ಸಣ್ಣ ಮಕ್ಕಳು ತಾನೇ! ನಾವು ಜಾಲಿಯಾಗಿ ಇರಬಾರದಾ? ಎಂದು ನೀವು ಕೇಳಬಹುದು. ಚಿಕ್ಕಂದಿನಿಂದಲೇ ನಿಮ್ಮ ಸಮಯವನ್ನು ಸರಿಯಾಗಿ ಬಳಸಲು ಕಲಿತರೇನೆ, ನೀವು ಅನೇಕರಿಗೆ ಆಶೀರ್ವಾದವಾಗಿ ಮಾರ್ಪಡುತ್ತೀರ. ಕ್ಯಾಥಿ ಎಂಬ ಹುಡುಗಿ ತನ್ನ ರಜೆಯ ದಿನಗಳನ್ನು ಹೇಗೆ ಬಳಸಿದಳು ಎಂಬ ಕಥೆಯನ್ನು ಕೇಳೋಣ್ವಾ?
ಒಂದು ದಿನ ರಜೆಯಲ್ಲಿ, ಕ್ಯಾಥಿ ತನ್ನ ತಂದೆಯೊಂದಿಗೆ ತಮ್ಮ ತೆಂಗಿನ ತೋಟಕ್ಕೆ ಹೋದಳು. ಅದು ಬೆಟ್ಟದ ಕೆಳಗೆ ಮತ್ತು ನದಿಯ ಪಕ್ಕದಲ್ಲಿ ಇತ್ತು. ನೋಡಲು ತುಂಬಾ ಸುಂದರವಾಗಿತ್ತು. ತೆಂಗಿನ ಮರದಲ್ಲಿ ಅಲ್ಲಿ ಇಲ್ಲಿ ಓಡುತ್ತಿರುವ ಅಳಿಲುಗಳನ್ನು... ಗುಬ್ಬಚ್ಚಿಗಳು ಕಿಚ್..ಕಿಚ್... ಅನ್ನುತ್ತಾ ಶಬ್ದ ಮಾಡುತ್ತಿದ್ದದ್ದನ್ನು ನೋಡಿ ಆನಂದಿಸುತ್ತಿದ್ದಳು ಕ್ಯಾಥಿ. ಅಷ್ಟೊತ್ತಿಗಾಗಲೇ ತಂದೆ ಎಳನೀರು ಒಡೆದು ಕೊಟ್ಟರು. ತುಂಬಾ ರುಚಿಯಾಗಿತ್ತು. ನೀವೂ ಎಳನೀರು ಕುಡಿದಿದ್ದೀರಾ? ಹೌದು ಬಿಸಿ ವಾತಾವರಣದಲ್ಲಿ ಇದನ್ನು ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು. ಸರಿ, ಈ ಕ್ಯಾಥಿ ಮುಂದೆ ಏನು ಮಾಡಿದಳು ಗೊತ್ತಾ? ಪಂಪ್ ಸೆಟ್ ಮೂಲಕ ತೋಪಿನಲ್ಲಿದ್ದ ಮರಗಳಿಗೆ ನೀರು ಹರಿಯುತ್ತಿತ್ತು. ಅವಳು ಸಂತೋಷದಿಂದ ಸ್ನಾನ ಮಾಡಿ ಅದರಲ್ಲಿ ಆಟವಾಡಿದಳು, ಅದು ತುಂಬಾ ಜಾಲಿಯಾಗಿತ್ತು. ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿದಳು. ಸಂಜೆ ಹೋಮ್ ವರ್ಕ್ ಮಾಡಿದ ನಂತರ ಮನೆಯನ್ನು ಸ್ವಚ್ಛಗೊಳಿಸಿದಳು.
ಮುದ್ದು ಪುಟಾಣಿಗಳೇ! ನೀವೂ ಅಮ್ಮನಿಗೆ ಸಹಾಯ ಮಾಡುತ್ತೀರಾ? ಸೂಪರ್! ಟೀ ಮಾಡಲು ಸಕ್ಕರೆ ಇಲ್ಲದ ಕಾರಣ ತಾಯಿ ಅಂಗಡಿಗೆ ಹೋಗುವಂತೆ ಹೇಳಿದರು. ಅವಳು ಸಂತೋಷದಿಂದ ಆ ಕೆಲಸವನ್ನು ಮಾಡಿದಳು. ರಾತ್ರಿ ಕುಟುಂಬ ಪ್ರಾರ್ಥನೆಯಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿದಳು. ಆ ಒಂದು ದಿನದ ರಜೆಯನ್ನು ಉತ್ತಮವಾಗಿ ಬಳಸಿಕೊಂಡಲು ಕ್ಯಾಥಿ. ಯೇಸಪ್ಪ ಕ್ಯಾಥಿಯನ್ನು ನೋಡಿ ತುಂಬಾ ಸಂತೋಷಪಟ್ಟಿರಬೇಕು ಅಲ್ವಾ ಪುಟಾಣಿಗಳೇ?
ಪ್ರೀತಿಯ ಪುಟಾಣಿಗಳೇ! ಯೇಸಪ್ಪ ನಮಗೆ ನೀಡಿದ ಪ್ರತಿ ದಿನವೂ ಮತ್ತೆ ಸಿಗದಂತಹ ಅಮೂಲ್ಯ ಸಂಪತ್ತಾಗಿದೆ. ಸಮಯ ಬಂಗಾರವಿದ್ದಂತೆ. ಆದ್ದರಿಂದ, ನೀವು ಮೊಬೈಲ್ ಮತ್ತು ಟಿವಿ ನೋಡುತ್ತಾ, ಹೋಮ್ ವರ್ಕ್ ಬರೆಯದೇ ಓದುವುದರಲ್ಲಿ ಗಮನ ಹರಿಸದೇ ಇರಬಾರದು. ಕ್ಯಾಥಿಯಂತೆ ಜಾಲಿಯಾಗಿ ಎಂಜಾಯ್ ಮಾಡಬಹುದು. ಅದೇ ಸಮಯದಲ್ಲಿ ನಿಮ್ಮ ಕರ್ತವ್ಯಗಳನ್ನು ಸಹ ಮಾಡಬೇಕು. ಓಕೆ-ನಾ. ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲು ನನ್ನ ಶುಭಾಶಯಗಳು!
- A. ಬ್ಯೂಲಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482