Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.10.2022
Share:

By Village Missionary Movement

Friday, 21-Oct-2022

ಧೈನಂದಿನ ಧ್ಯಾನ(Kannada) – 22.10.2022

 

ಬರಹ ಬದಲಾಗುತ್ತದೆ

 

"...ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದದ್ದನ್ನು ನೆನಪು ಮಾಡಿಕೋ..." - 2 ಅರಸುಗಳು 20:3

 

ಜಾನ್ ಡಿ. ರಾಕ್‌ಫೆಲ್ಲರ್ ಸೀನಿಯರ್ ಅವರು ಹೇಗಾದರೂ ಹಣ ಸಂಪಾದಿಸಬೇಕೆಂದು ನಿರ್ಧರಿಸಿದರು ಮತ್ತು ಅದಕ್ಕಾಗಿ ಅವರು ಶ್ರಮಿಸಲು ಪ್ರಾರಂಭಿಸಿದರು. 43 ನೇ ವಯಸ್ಸಿನಲ್ಲಿ, ಅವರು ವಿಶ್ವದ ಅತಿದೊಡ್ಡ ಕಂಪನಿಯ ಮಾಲೀಕರಾದರು. ಅವರು 53 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದರು. ಆದರೆ ಆ ಸಮಯದಲ್ಲಿ ಅವರಿಗೆ ಅಲೋಪೆಸಿಯಾ ಎಂಬ ಕಾಯಿಲೆ ಕಾಣಿಸಿಕೊಂಡಿತು, ಅವರ ಕೂದಲುಗಳೆಲ್ಲ ಉದುರಿದವು. ಅವರಿಗೆ ಹಾಲು ಮತ್ತು ಕೆಲವು ಬಿಸ್ಕತ್ತುಗಳನ್ನು ಮಾತ್ರ ತಿನ್ನಲು ಸಾಧ್ಯವಾಗುತ್ತಿತ್ತು, ಬೇರೇನೂ ತಿನ್ನಲು ಆಗುತ್ತಿರಲಿಲ್ಲ! ಎಂತಹ ದಯನೀಯ ಪರಿಸ್ಥಿತಿ! ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಇನ್ನು "ಎರಡು ವರ್ಷ ಮಾತ್ರ ಬದುಕುತ್ತಾರೆ" ಎಂದು ಹೇಳಿಬಿಟ್ಟರು. ಅವರು ನಿದ್ರೆಯನ್ನೇ ಮರೆತು ಹೋದರು. ಒಂದು ದಿನ ಬೆಳಗ್ಗೆ ಉತ್ಸಾಹದಿಂದ ಎದ್ದರು. ಅವರು ತಮ್ಮ ಅಪಾರ ಸಂಪತ್ತನ್ನು ತೆಗೆದುಕೊಂಡು ಮಿಷನರಿ ಸೇವೆಗೆ ಮತ್ತು ಬಡವರಿಗೆ ಸಹಾಯ ಹಸ್ತವನ್ನು ನೀಡಲು ಪ್ರಾರಂಭಿಸಿದರು. ರಾಕ್‌ಫೆಲ್ಲರ್ ಫೌಂಡೇಶನ್ ಅನ್ನು ಪ್ರಾರಂಭಿಸಿ ವೈದ್ಯಕೀಯ ಸಂಶೋಧನೆಗೆ ಅಗತ್ಯವಾದ ಧನಸಹಾಯ ಮಾಡುವ ಮೂಲಕ ಪೆನ್ಸಿಲಿನ್ ಅನ್ನು ಕಂಡುಹಿಡಿಯಲಾಯಿತು. ಅವರ ದುಃಖ ಸಂತೋಷವಾಗಿ ಮಾರ್ಪಟ್ಟಿತು. "ವೈದ್ಯರು ಅವರು ಕೇವಲ ಒಂದು ವರ್ಷ, ಅಂದರೆ 54 ವರ್ಷದವರೆಗೆ ಮಾತ್ರ ಬದುಕುತ್ತಾರೆ" ಎಂದು ಹೇಳಿದ್ದರು. ಆದರೆ ಅದರ ನಂತರ ಅವರು 98 ನೇ ವಯಸ್ಸಿನವರೆಗೆ ಸಂತೋಷದಿಂದ ಬದುಕಿ ನಂತರ ಕ್ರಿಸ್ತನಲ್ಲಿ ನಿಧನರಾದರು.

 

ಮೇಲಿನ ಘಟನೆಯಂತೆ, ಸತ್ಯವೇದದಲ್ಲಿ ಅರಸನಾದ ಹಿಜ್ಕೀಯನು ಮರಣಕರ ರೋಗದಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿಯಾದ ಯೆಶಾಯನ ಮೂಲಕ "ನೀನು ಬದುಕದೆ ಸಾಯುವಿ" ಎಂದು ಕರ್ತನು ಹೇಳುತ್ತಾನೆ ಎಂದು ಎಚ್ಚರಿಸಿದರು. ಆಗ ಕರ್ತನ ಸಮ್ಮುಖದಲ್ಲಿ ವಿಜ್ಞಾಪನೆ ಮಾಡಿ ಅತ್ತರು. ಮತ್ತೆ ಕರ್ತನ ವಾಕ್ಯವು ಯೆಶಾಯನಿಗೆ ಉಂಟಾಗಿ, ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ- "ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ, ನಿನ್ನ ಆಯುಷ್ಯಕ್ಕೆ ಹದಿನೈದು ವರುಷ ಹೆಚ್ಚಾಗಿ ಕೂಡಿ ಸುತ್ತೇನೆ" ಎಂದು ಹೇಳಿದ್ದರಿಂದ ಹಿಜ್ಕೀಯನ ಮರಣದ ದಿನಗಳು ಮಾರ್ಪಟ್ಟವು.

 

ಇದನ್ನು ಓದುತ್ತಿರುವ ಪ್ರಿಯರೇ! ನೀವು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಹೋರಾಡುತ್ತಿದ್ದೀರಾ? ನಿಮ್ಮ ಸಾವಿನ ದಿನಾಂಕವನ್ನು ವೈದ್ಯರಿಂದ ಮೊದಲೇ ನಿಗದಿಪಡಿಸಲಾಗಿದೆಯೇ? ಅಥವಾ ಇಷ್ಟು ದಿನ ಮಾತ್ರ ಬದುಕಬಹುದು ಎಂದು ಬರೆದುಬಿಟ್ಟರಾ? ವೈದ್ಯರು ಬರೆದದ್ದನ್ನು ಶಿಲುಬೆಯ ಮೇಲೆ ನಮಗಾಗಿ ಬಲಿಯಾದ ಯೇಸುವಿನ ರಕ್ತದಿಂದ ಪುನಃ ಬರೆಯಬಹುದು. ಮತ್ತು ಯಾರಾದರೂ ನಿಮ್ಮ ಮೇಲೆ ಇಟ್ಟಿರುವ ಕೆಟ್ಟ ಹೆಸರನ್ನು ನೀವು ಬದಲಾಯಿಸಲು ಸಾಧ್ಯವಿಲ್ಲವಾದರೂ, ನೀವು ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದಾಗ, ಇತರರು ನಿಮ್ಮ ಬಗ್ಗೆ ಬರೆದದ್ದನ್ನು ಯೇಸು ಖಂಡಿತವಾಗಿಯೂ ಒಳ್ಳೆಯದಾಗಿ ಬದಲಾಯಿಸುತ್ತಾರೆ. ಹಲ್ಲೇಲೂಯಾ!

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

"ಕಣ್ಮಣಿಯೆ ಕೇಳು" ಎಂಬ ಪತ್ರಿಕೆಯನ್ನು ಓದುತ್ತಿರುವ ಎಲ್ಲಾ ಯೌವನಸ್ಥ ಹುಡುಗಿಯರು ದೇವರಿಗಾಗಿ ವೈರಾಗ್ಯದಿಂದ ಜೀವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al