Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.10.2022
Share:

By Village Missionary Movement

Friday, 21-Oct-2022

ಧೈನಂದಿನ ಧ್ಯಾನ(Kannada) – 21.10.2022

 

ಗೌರವಾನ್ವಿತ ಕಾವಲುಗಾರರು

 

“ಸಿದ್ಧವಾಗಿರು, ನಿನ್ನಲ್ಲಿ ಕೂಡಿಬಂದಿರುವ ಎಲ್ಲಾ ತಂಡಗಳೊಡನೆ ನಿನ್ನನ್ನು ಸಿದ್ಧಮಾಡಿಕೋ; ನೀನು ಅವುಗಳಿಗೆ ಪಾಲಕನಾಗಿರು" - ಯೆಹೆಜ್ಕೇಲ 38:7

 

1959 ರಲ್ಲಿ, ಭಾರತದ ಲಡಾಖ್‌ನಲ್ಲಿರುವ "ಹಾಟ್‌ಸ್ಪ್ರಿಂಗ್" ನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಹೊಂಚುದಾಳಿಯಿಂದ 10 ಕೆಚ್ಚೆದೆಯ ಪೋಲೀಸರು ಕೊಲ್ಲಲ್ಪಟ್ಟರು. ಈ ಹತ್ತು ಮಂದಿ ಪೊಲೀಸರ ಸ್ಮರಣಾರ್ಥ ಅಕ್ಟೋಬರ್ 21ರಂದು ಪೊಲೀಸರ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. 2017 ರ ಜನಗಣತಿಯ ಪ್ರಕಾರ, ಸ್ವಾತಂತ್ರ್ಯ ನಂತರ ಸುಮಾರು 34,844 ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರ ಸ್ಮರಣಾರ್ಥವಾಗಿ, 30 ಅಡಿಗಳ ಗ್ರಾನೈಟ್ ಶಿಲ್ಪದ ಸ್ಮಾರಕ ಫಲಕವನ್ನು "ವಾಲ್ ಆಫ್ ಶೌರ್ಯ" ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲ, ತಮ್ಮ ಜೀವಿತಾವಧಿಯಲ್ಲಿ ಹಿಮದಲ್ಲಿ ಹಸಿವು, ಬಾಯಾರಿಕೆ, ನಿದ್ದೆಯನ್ನು ಮರೆತು ಜನರ ಸುರಕ್ಷತೆಗಾಗಿ ಅದೆಷ್ಟೋ ಹೆಸರು ಹೇಳಲ್ಪಡದ ಪೊಲೀಸರು, ಸೈನಿಕರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇಂದು ಎಲ್ಲಾ ವೀರರನ್ನೂ ನೆನಪಿಸಿಕೊಳ್ಳೋಣ! ದೇವರಿಗೆ ಕೃತಜ್ಞತೆ ಸಲ್ಲಿಸೋಣ!

 

ಸತ್ಯವೇದದಲ್ಲಿಯೂ ಸಹ, ದ್ವಾರಪಾಲಕನಾದ ಮೊರ್ದೆಕೈ ರಾಜನ ಜೀವವನ್ನು ಉಳಿಸಿದನು ಮತ್ತು ಯೆಹೂದಿ ಜನರನ್ನು ವಿನಾಶದಿಂದ ರಕ್ಷಿಸಲು ಹೋರಾಡಿ ಗೆದ್ದನು ಎಂಬುದು ನಮಗೆ ತಿಳಿದಿರುವ ವಿಷಯವೇ! (ಎಸ್ತೇರ್ 6: 1-11). ನೆಹೆಮಿಯ ಯೆರೂಸಲೇಮಿನ ಪೌಳಿಗೋಡೆಯನ್ನು ಕಟ್ಟುವಾಗ, "ರಾತ್ರಿ ಹಗಲು ಕಾವಲಿದ್ದೋ ಸ್ನಾನಸಮಯದಲ್ಲಿ ಹೊರತು ಬೇರೆ ಸಮಯದಲ್ಲಿ ನಮ್ಮ ವಸ್ತ್ರಗಳನ್ನು ತೆಗೆದುಹಾಕಲಿಲ್ಲ. (ನೆಹೆಮಿಯ. 4:23), ನಾವು ನಕ್ಷತ್ರವನ್ನು ನೋಡುವವರೆಗೆ ಪೂರ್ವದ ಮುಂಜಾನೆ ತನಕ ನಮ್ಮ ಈಟಿಗಳನ್ನು ಹಿಡಿದಿದ್ದೆವು" ಒಂದು ಕೈಯಲ್ಲಿ ದುಡಿದು ಇನ್ನೊಂದು ಕೈಯಲ್ಲಿ ಈಟಿಯಿಂದ ಕಾವಲು ಕಾಯುತ್ತಾ ಸ್ವಂತ ದೇಶಕ್ಕಾಗಿ ಸಮರ್ಪಣೆಯೊಂದಿಗೆ ದುಡಿದರೆಂದು ಓದುತ್ತೇವೆ. ಇವೆಲ್ಲವೂ ನಮ್ಮೊಳಗೆ ದೇಶದ ಬಗ್ಗೆ ವೈರಾಗ್ಯದಿಂದಿರುವಂತೆ ಮಾಡುತ್ತಿದೆ.

 

ಪ್ರಿಯರೇ, ದೇಶಕ್ಕಾಗಿ ಈ ರೀತಿ ತ್ಯಾಗ ಮಾಡಿದವರ ಪಟ್ಟಿ ಇತಿಹಾಸದಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಯೇಸುಕ್ರಿಸ್ತನು ಇಡೀ ಜಗತ್ತಿಗಾಗಿ ಶಿಲುಬೆಯಲ್ಲಿ ತ್ಯಾಗವಾಗಿ ಬಲಿಯಾದರು. ಇನ್ನೂ ಅನೇಕ ಪರಿಶುದ್ಧರು ಸುವಾರ್ತೆಯ ಸಲುವಾಗಿ ರಕ್ತ ಸಾಕ್ಷಿಗಳಾಗಿ ಮರಣಹೊಂದಿದ್ದಾರೆ. ನಮ್ಮೆಲ್ಲರಿಗೂ ಹೀಗೆ ರಕ್ತ ಸಾಕ್ಷಿಯಾಗಿ ಸಾಯಲು ಕರೆಯುವಿಕೆ ಇಲ್ಲವಾದರೂ, ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ದೇಶದ ಕಾವಲುಗಾರರಾಗಿರುವಂತೆ ಕರೆಯುತ್ತಿದ್ದಾರೆ. ನಾವು ಸಿದ್ಧರಾಗಿ ನಮ್ಮೊಂದಿಗೆ ಗುಂಪೊಂದನ್ನೂ ಸಿದ್ಧಪಡಿಸಬೇಕು ನೀವು ಅದಕ್ಕೆ ಸಿದ್ಧರಿದ್ದೀರಾ?

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

"ಪ್ರಾರ್ಥನಾ ತಂಡದ ನಾಯಕನ ಕೈಪಿಡಿ" - ಮುದ್ರಣಕ್ಕೆ ಬೇಕಾದ ಹಣದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al