Village Missionary Movement         கிராம மிஷனரி இயக்கம்

ಬಿಟ್ಟುಕೊಡೋಣ
Share:

By Village Missionary Movement

Thursday, 20-Oct-2022

ಧೈನಂದಿನ ಧ್ಯಾನ(Kannada) – 20.10.2022

 

ಬಿಟ್ಟುಕೊಡೋಣ

 

“...ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು ಎಂದು ಹೇಳಿದನು." - ಆದಿಕಾಂಡ 13:9

 

ದಿನಪತ್ರಿಕೆಯಲ್ಲಿ ಓದಿದ ಒಂದು ಘಟನೆ: ಒಬ್ಬ ವ್ಯಕ್ತಿ ತನ್ನ ಜಮೀನನ್ನು ಸ್ವಚ್ಚಗೊಳಿಸಿ ಮನೆ ಕಟ್ಟಲು ಅಳತೆ ಮಾಡಿ ಎಲ್ಲಾ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಆಗ ಅನಿರೀಕ್ಷಿತವಾಗಿ ಅವರು ತನ್ನ ಹತ್ತಿರವಿರುವ ಇನ್ನೊಬ್ಬನ ಜಮೀನಿನಲ್ಲಿ ಅರ್ಧ ಅಡಿ (6 ಇಂಚು) ಹೆಚ್ಚುವರಿ ಅಳತೆ ಮಾಡಿ ಬಿಟ್ಟರು. ಪಕ್ಕದ ಜಮೀನುದಾರನು ಇದರಿಂದಾಗಿ ಕೋಪಗೊಂಡು ಜಗಳವಾಡಿ ಅದು ದೊಡ್ಡ ದ್ವೇಷಕ್ಕೆ ತಿರುಗಿತು. ಇಬ್ಬರೂ ಸಮಾಧಾನವಾಗಲಿಲ್ಲ. ಒಂದು ದಿನ, ಮನೆ ಕಟ್ಟುತ್ತಿದ್ದ ಈ ವ್ಯಕ್ತಿಯನ್ನು ಪಕ್ಕದ ಜಮೀನಿನ ಮಾಲೀಕರು ಕೊಲೆ ಮಾಡಿಬಿಟ್ಟರು. ಎಷ್ಟು ಶೋಚನೀಯ! ಆ ವ್ಯಕ್ತಿ ಈಗ ಜೈಲಿನಲ್ಲಿದ್ದಾರೆ. ಮಾತನಾಡಿ ಸರಿಮಾಡಿಕೊಳ್ಳಬೇಕಿದ್ದ ಕಾರ್ಯ ಕೊಲೆಯಲ್ಲಿ ಅಂತ್ಯವಾಯಿತು.

 

ಪರಿಶುದ್ಧ ಗ್ರಂಥದಲ್ಲಿ ಅಬ್ರಹಾಮನು ಉತ್ತಮ ಉದಾಹರಣೆಯಾಗಿದ್ದನು. ಅಬ್ರಹಾಮನ ಸಹೋದರನ ಮಗನಾದ ಲೋಟನಿಗೂ ಅನೇಕ ಆಸ್ತಿಗಳು ಇದ್ದುದನ್ನು ನಾವು ನೋಡುತ್ತೇವೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಅಬ್ರಹಾಮನ ಕುರುಬರಿಗೂ ಮತ್ತು ಲೋಟನ ಕುರುಬರಿಗೂ ಎಲ್ಲಿ ಉಳಿಯಬೇಕೆಂಬುದರ ಬಗ್ಗೆ ವಾದವಾಯಿತು. ಆದಿಕಾಂಡ 13ನೇ ಅಧ್ಯಾಯದಲ್ಲಿ ಅಬ್ರಹಾಮನು ಹೇಳುವ ಒಂದು ಅದ್ಭುತವಾದ ವಿಷಯವನ್ನು ನಾವು ನೋಡಬಹುದು. ಅಬ್ರಹಾಮನು ಲೋಟನಿಗೆ ಬಿಟ್ಟುಕೊಟ್ಟರು. "ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು" ಎಂದು ಬಿಟ್ಟು ಕೊಟ್ಟರು. ಹಾಗೆ ಬಿಟ್ಟುಕೊಡುವುದರಿಂದ ಅಬ್ರಹಾಮನಿಗೆ ಯಾವುದಕ್ಕೂ ಕೊರತೆಯಾಗಲಿಲ್ಲ. ದೇವರು ಅಬ್ರಹಾಮನನ್ನು ಇನ್ನಷ್ಟು ಆಶೀರ್ವದಿಸಿದರು.

 

ಇದನ್ನು ಓದುತ್ತಿರುವ ಸ್ನೇಹಿತರೇ! ಇಂದಿನ ಜಗತ್ತಿನ ಪ್ರವರ್ತನೆಯೇ ತುಂಬಾ ಮೋಸವಾಗಿದೆ. ಈ ಕ್ಷಮಿಸುವ ಗುಣ ಅನೇಕರಲ್ಲಿ ಇಲ್ಲ. ಆದ್ದರಿಂದ, ಕ್ರಿಸ್ತನನ್ನು ತಿಳಿದಿರುವ ನಾವು ನಮ್ಮ ಕುಟುಂಬದಲ್ಲಿ, ಕುಟುಂಬ ಸಂಬಂಧಗಳಲ್ಲಿ, ಕೆಲಸದ ಸ್ಥಳ ಮತ್ತು ಸೇವೆಯಲ್ಲಿ ನಾವೇ ಬಿಟ್ಟುಕೊಡಬೇಕು. ನಮ್ಮಲ್ಲಿ ಈ ಗುಣವಿದ್ದರೆ ನಾವು ಅನೇಕರಿಗೆ ಆಶೀರ್ವಾದವಾಗಿ ಮಾರ್ಪಡಬಹುದು. ಕೇವಲ ಸ್ವಾರ್ಥವನ್ನೇ ಮನಸ್ಸಿನಲ್ಲಿಟ್ಟುಕೊಂಡು ಓಡುವ ಅನೇಕರು ಈ ಜಗತ್ತಿನಲ್ಲಿದ್ದಾರೆ. ಆದರೆ ನಾವು ಇತರರಿಗಾಗಿ ಬಿಟ್ಟುಕೊಡುವವರಾಗಿ ಬದುಕಿದರೆ, ಅನೇಕ ಜನರು ನಮ್ಮ ಮೂಲಕ ದೇವರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಎರಡು ತಿಂಗಳಿಗೊಮ್ಮೆ ಸೇವಕರಿಗಾಗಿ ಹೊರಬಿಡುವ ಕತ್ತೆಗಳ ಮಾರ್ಗದರ್ಶಿ ಪತ್ರಿಕೆಯ ಮೂಲಕ ಅವರ ದರ್ಶನ ನವೀಕರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al