By Village Missionary Movement
Tuesday, 18-Oct-2022ಧೈನಂದಿನ ಧ್ಯಾನ(Kannada) – 19.10.2022
ಇದು... ಅದು... ಇದ್ದಿದ್ದರೆ
"ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ" - ಯಾಕೋಬ 2:22
ಒಬ್ಬ ಬಟ್ಟೆ ಒಗೆಯುವ ಕೆಲಸ ಮಾಡುವ ಬಡ ವ್ಯಕ್ತಿಯ ಬಳಿ ವಯಸ್ಸಾದ ಒಂದು ಕತ್ತೆ ಇತ್ತು. ಅವರಿಗೆ ಬಹಳಷ್ಟು ಕೆಲಸವಿತ್ತು ಆ ಎಲ್ಲಾ ಕೆಲಸಗಳಲ್ಲಿ ಕತ್ತೆಯು ಅವರಿಗೆ ತುಂಬಾ ಸಹಾಯ ಮಾಡುತ್ತಿತ್ತು. ಒಂದು ದಿನ ಅವರು ನೀರಿಗಾಗಿ ತೋಡಿದ್ದ ಬಾವಿಯೊಳಗೆ ಕತ್ತೆ ಬಿದ್ದು ಹೋಯಿತು. ಬಟ್ಟೆ ಒಗೆಯುವವರು ಹಲವೆಡೆ ಹುಡುಕಿದರೂ ಕತ್ತೆ ಸಿಗದೇ, ಬಾವಿಯಲ್ಲಿ ಸಿಕ್ಕಾಗ ಚಿಂತಾಕ್ರಾಂತರಾದರು. ಏನು ಮಾಡಬೇಕೆಂದು ತೋಚದೆ ಮಣ್ಣು ಹಾಕಿ ಮುಚ್ಚಿ ಕೊಂದು ಹಾಕಿ, ತಾನು ಬೇರೆ ಯಾವುದರೂ ಕೆಲಸ ಮಾಡಿಕೊಂಡು ಬದುಕೋಣ ಅಂದುಕೊಂಡರು. ಆದರೆ ಕತ್ತೆಗೆ "ತನ್ನ ಯಜಮಾನ ಬಂದಿದ್ದಾನೆ, ಹೇಗಾದರೂ ನನ್ನನ್ನು ಉಳಿಸುತ್ತಾನೆ" ಎಂಬ ಆಲೋಚನೆ ಉತ್ತೇಜನ ನೀಡಿತು. ಕತ್ತೆಯ ಯೋಚನೆಗೆ ಕೆಸರು ಬಿತ್ತು. ಹೌದು ಬಟ್ಟೆ ಒಗೆಯುವವನು ತಳ್ಳಿದ ಕೆಸರನ್ನು ಒದರಿ ತಳ್ಳಿಬಿಟ್ಟು ಮೇಲೆ ಹತ್ತಿ ಅಲ್ಲಲ್ಲಿ ಇದ್ದ ಕಲ್ಲುಗಳ ಮೇಲೆ ಕಾಲಿಟ್ಟು ಹಾರಿ ಹಾರಿ ಬಟ್ಟೆ ಒಗೆಯುವವನ ಮನೆಗೆ ಹೋಯಿತು. ಈ ಬಟ್ಟೆ ಒಗೆಯುವವನಿಗೆ ಕತ್ತೆ ಕಲಿಸಿದ ಪಾಠವನ್ನು ನೋಡುದ್ರಾ? "ಇರುವುದರಲ್ಲಿ ಪ್ರಯತ್ನಿಸಿ ಮುಂದೆ ಸಾಗಬೇಕು ಅಷ್ಟೇ" ಅಂದುಕೊಳ್ಳುತ್ತಾ ಮನೆಗೆ ಹೋದರು.
ನಮಗೆ ದೇವರಲ್ಲಿ ನಂಬಿಕೆ ಇದೆ, ಆದರೆ ನಾವು ಸೋಮಾರಿಗಳಾಗಿ ನಮ್ಮ ಮನಸ್ಸಿನಲ್ಲಿ, "ಅಬ್ರಹಾಮನಿಗೆ ಯಜ್ಞಕ್ಕಾಗಿ ಕುರಿಮರಿಯನ್ನು ಕೊಟ್ಟವರು ನನಗೂ ಕೊಡುತ್ತಾರೆ" ಎಂದು ಯೋಚಿಸುತ್ತೇವೆ. ಎಲೀಯನನ್ನು ನೋಡಿರಿ, ಕಾಗೆ ಅವರಿಗೆ ಆಹಾರವನ್ನು ಕೊಟ್ಟು ಪೋಷಿಸಿತಲ್ಲಾ! ಎಂದು ಹೇಳಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ. ಮೋರಿಯಾ ದೇಶದ ಒಂದು ಪರ್ವತದ ಮೇಲೆ ತನ್ನ ಮಗನನ್ನು ದಹನಬಲಿಯಾಗಿ ಅರ್ಪಿಸಲು ಕರ್ತನು ಹೇಳಿದಾಗ, ಅಬ್ರಹಾಮನು ತನ್ನ ಹೆಂಡತಿಗೆ ಸಹ ಹೇಳದೆ ಕಾರ್ಯಪ್ರವೃತ್ತನಾದನು. ಅವನು ಬೇಗನೆ ಎದ್ದು ತನ್ನ ಮಗನನ್ನು ಯಜ್ಞಕ್ಕೆ ಕರೆದೊಯ್ದನು, ಏಕೆಂದರೆ ದೇವರ ಯೋಜನೆಗೆ ಯಾರಿಂದಲೂ ಅಡ್ಡಿಯಾಗಬಾರದು ಎಂಬುದು ಅವನ ಉದ್ದೇಶವಾಗಿತ್ತು.
ನನಗೆ ಪ್ರಿಯವಾದವರೇ! ನಂಬಿಕೆಯಲ್ಲಿ ಧೈರ್ಯದಿಂದ ವರ್ತಿಸಿದ ಮತ್ತು ತನ್ನ ವೃದ್ಧಾಪ್ಯದಲ್ಲಿ ತನ್ನ ಸ್ವಂತ ಮಗನನ್ನು ಕರ್ತನಿಗಾಗಿ ಕಳೆದುಕೊಳ್ಳಲು ಸಿದ್ಧನಾಗಿದ್ದ ಅಬ್ರಹಾಮನಿಗಿಂತ ಹೆಚ್ಚಿನ ವಿಧೇಯತೆ ಯಾವುದಾದರೂ ಇದೆಯೇ? ಮಗನನ್ನು ಕರೆದೊಯ್ದು, ಹಗ್ಗಗಳಿಂದ ಕಟ್ಟಿ, ಯಜ್ಞವೇದಿಯ ಮೇಲೆ ಮರದ ದಿಮ್ಮಿಗಳನ್ನು ಇಟ್ಟು, ಆ ಮರಗಳ ಮೇಲೆ ಮಲಗಿಸಿ ಕತ್ತರಿಸಲು ಕೈ ಎತ್ತುವವರೆಗೂ, ಅವನ ಏಕೈಕ ಆಲೋಚನೆಯು ತನ್ನ ಮಗನು ಮಾತ್ರವೇ ಬಲಿಪಶುವಾಗಿದ್ದಾನೆ ಎಂಬುದು. ಮನುಷ್ಯನಾಗಿ ಹುಟ್ಟಿದ ಅಬ್ರಹಾಮನು ತನ್ನ ಸ್ವಂತ ಮಗನನ್ನು ಕಳೆದುಕೊಳ್ಳಲು ಸಹ ಸಿದ್ಧನಾಗಿರುವಾಗ, ನಮ್ಮ ಪರಲೋಕದ ತಂದೆಯು ನಮಗಾಗಿ ಸಾಯಲು ತನ್ನ ಸ್ವಂತ ಮಗನನ್ನು ಕೊಟ್ಟದ್ದು ಇನ್ನೆಷ್ಟು ಸತ್ಯ. ನಾವು ನಮ್ಮ ಕ್ರಿಯೆಗಳಿಂದ ನಂಬಿಕೆಯನ್ನು ಉಳಿಸಿಕೊಳ್ಳಲು ಏನನ್ನು ಕಳೆದುಕೊಳ್ಳಲು ಸಿದ್ಧರಿದ್ದೇವೆ ಎಂಬುದನ್ನು ಯೋಚಿಸೋಣವಾ? ನಮ್ಮಲ್ಲಿರುವದರೊಂದಿಗೆ ಪ್ರಯತ್ನಿಸೋಣ ಮತ್ತು ದೇವರು ನಮಗಾಗಿ ನಿಗದಿಪಡಿಸಿದ್ದನ್ನು ಪಡೆಯಲು ಶ್ರಮಿಸೋಣ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಚೈನ್ ಪ್ರೇಯರ್ ಸೇವೆಯಲ್ಲಿ ಸೇರಿ ಪ್ರಾರ್ಥಿಸುತ್ತಿರುವ ಪ್ರಾರ್ಥನಾ ವೀರರು ಮತ್ತು ವೀರಾಂಗಣಿಯರನ್ನು ದೇವರು ಎಲೀಯನ ಆತ್ಮದಿಂದ ತುಂಬುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482