Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.02.2021 (Kids Special)
Share:

By Village Missionary Movement

Sunday, 14-Feb-2021

ಧೈನಂದಿನ ಧ್ಯಾನ(Kannada) – 14.02.2021 (Kids Special)

ಬದಲಾಗದ ಪ್ರೀತಿ

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” - ಯೋಹಾನ 3:16

"ಲೋ ಫ್ರೆಂಡ್! ವೈಟ್ ಮಾಡು, ತಗೋ ಈ ಚಾಕಲೇಟ್ ಎಲ್ಲಾ ನಿನಗೇನೆ" ಎಂದನು ಮಹೇಶ್.  "ಎಲ್ಲಿತ್ತೊ ಇಷ್ಟು ಬೆಲೆಯುಳ್ಳ ಚಾಕ್ಲೇಟ್ ನಿನಗೆ" ಎಂದು ಕೇಳಿದನು ಪ್ರಭು. "ನಿನ್ನೆತಾನೆ ನಮ್ಮಪ್ಪ ಹೊರದೇಶದಿಂದ ಬಂದರು. ನಿನಗೆ ಕೊಡದೇ ನನಗೆ ತಿನ್ನೋದಕ್ಕೆ ಮನಸೇ ಬಂದಿಲ್ಲ ಕಣೋ, ಅದಕ್ಕೆ ಮೊದಲು ನಿನಗೆ ತಗೊಂಡು ಬಂದೆ" ಎಂದು ಹೇಳಿದನು ಮಹೇಶ್. ನನ್ನ ಮೇಲೆ ಮಹೇಶ್ ಗೆ ಎಷ್ಟೊಂದು ಪ್ರೀತಿ ಎಂದು ಮನಸ್ಸಿನೊಳಗೆ ನೆನೆಸಿಕೊಂಡನು ಪ್ರಭು. ಇವರಿಬ್ಬರು ಪ್ರಾಣ ಸ್ನೇಹಿತರು. ಚಿಕ್ಕವಯಸ್ಸಿನಿಂದಲೇ ಒಂದಾಗಿ ಓದುತ್ತಾ, ಒಂದೇ ಬೀದಿಯಲ್ಲಿ ಜೀವಿಸುತ್ತಿರುವುದರಿಂದ, ಇವರಿಬ್ಬರು ಒಳ್ಳೆಯ ಸ್ನೇಹಿತರೆಂದು ಎಲ್ಲರಿಗೂ ಗೊತ್ತು. ಬೀದಿಯಲ್ಲಿ ಇರುವವರು ಕೂಡ ಸ್ನೇಹಿತರಾಗಿದ್ದ ಮಹೇಶ್, ಪ್ರಭುವಿನ ಹಾಗೆ ಇರಬೇಕು. ಜಗಳವಾಡದೇ ಎಷ್ಟೊಂದು ಒಗ್ಗಟ್ಟಾಗಿದ್ದಾರೆ ಎಂದು ಮೆಚ್ಚಿಕೊಳ್ಳುತ್ತಿದ್ದರು. ಇದರಿಂದ ಇವರ ಸ್ನೇಹವು ಇನ್ನೂ ಅಧಿಕವಾಗಿ ಬೆಳೆಯಿತು.

ಒಂದು ದಿನ ಅವರ ಗ್ರಾಮಕ್ಕೆ ಪಕ್ಕದಲ್ಲಿರುವ ದಟ್ಟವಾದ ಕಾಡಿನೊಳಗೆ ವಾಕಿಂಗ್ ಹೋಗಲು ನೆನೆಸಿದರು. ಇಬ್ಬರು ಸೇರಿ ಮಾತಾಡಿಕೊಳ್ಳುತ್ತಾ ನಡೆದುಕೊಂಡು ಹೋದರು. ದಿಢೀರ್ ಎಂದು ಒಂದು ಶಬ್ಧ ಕೇಳಿಸಿತು. ಕರಡಿ ಆಗಿರಬಹುದಾ? ಎಂದು ನೆನೆಸಿದ ಕೂಡಲೇ ಕರಡಿಯೇ ಬಂದುಬಿಟ್ಟಿತು. ಮಹೇಶ್ ಗೆ ಮರಹತ್ತಲು ಗೊತ್ತು, ಆದರೆ ಪ್ರಭುಗೆ ಮರಹತ್ತಲು ಗೊತ್ತಿಲ್ಲದ್ದರಿಂದ ಭಯಪಟ್ಟನು. "ಲೋ ಫ್ರೆಂಡ್ ನನ್ನನ್ನು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತೇನೆಂದು ಆಗಾಗ ಹೇಳುತ್ತೀಯಲ್ಲ ನನ್ನನ್ನು ಕೂಡ ಮರಕ್ಕೆ ಹತ್ತಿಸು, please" ಎಂದು ಪ್ರಭು ಕೂಗಿಕೊಂಡನು. "ಅಯ್ಯಯ್ಯೋ ನನ್ನಿಂದ ಸಾಧ್ಯವೇ ಇಲ್ಲಪ್ಪ" ಎಂದು ಓಡಿಹೋಗಿ ಮರದಲ್ಲಿ ಹತ್ತಿ ಕುಳಿತನು ಮಹೇಶ್. ಯಾವುದೋ ಒಂದು ಜ್ಞಾಪಕ ಬಂದಕೂಡಲೇ ತಕ್ಷಣ ಪ್ರಭು ಸತ್ತವನ ಹಾಗೆ ಉಸಿರಾಡದೆ ನೆಲದ ಮೇಲೆ ಮಲಗಿಕೊಂಡನು. ಕರಡಿ ಬಂದು ಅವನನ್ನು ವಾಸನೆ ನೋಡಿ ಬಿಟ್ಟು, ಸತ್ತುಹೋದದ್ದನ್ನು ತಿನ್ನದಿರುವುದರಿಂದ ಹಾಗೆ ಹೊರಟುಹೋಯಿತು. ಪ್ರಾಣಕ್ಕೆ ಅಪಾಯ ಎಂದ ಕೂಡಲೇ ಮಹೇಶ್ ನನ್ನನ್ನು ಮರೆತುಬಿಟ್ಟನೇ! ಸ್ನೇಹಿತನ ಪ್ರೀತಿಗೆ ಒಂದು ಸರಿಹದ್ದು (border) ಇದೆ  ಎಂಬುದನ್ನು ಪ್ರಭು ಆ ದಿನ ತಿಳಿದುಕೊಂಡನು. ಕೆಳಗಿಳಿದ ಮಹೇಶ್,  "ಲೋ ಪ್ರಭು ಕರಡಿ ನಿನ್ನ ಕಿವಿಯ ಬಳಿ ಏನೋ ಹೇಳಿತೇ, ಏನೊ ಅದು" ಎಂದನು. "ನಿನ್ನ ಸ್ನೇಹಿತನನ್ನು ನಂಬಬೇಡ. ಅವನ ಪ್ರೀತಿ ಬದಲಾಗುತ್ತದೆ ಎಂದು ಹೇಳಿತು" ಎಂದನು. ಹೌದು, ಮಿತಿಯಿಲ್ಲದ ಪ್ರೀತಿ ಯೇಸುವಿನ ಪ್ರೀತಿ ಮಾತ್ರವೇ.

ಹೌದು! ತಮ್ಮ, ತಂಗಿ ನಿನ್ನನ್ನು ಪ್ರಾಣಕ್ಕೆ ಪ್ರಾಣವಾಗಿ ಪ್ರೀತಿಸುತ್ತೇನೆಂದು ಹೇಳುವವರನ್ನೆಲ್ಲಾ ನಂಬಿ ಮೋಸ ಹೋಗಬೇಡ! ನಿನಗಾಗಿ ಜೀವವನ್ನೇ ಕೊಟ್ಟ ಯೇಸುವಿನ ಪ್ರೀತಿಯನ್ನು ನೆನೆಸಿ ನೋಡು. ಅವರ ಪ್ರೀತಿ ಮಾತ್ರವೇ ಬದಲಾಗದೆ ಇರುವಂತದ್ದು. ಎಲ್ಲಾ ಪರಿಸ್ಥಿತಿಯಲ್ಲಿಯೂ ನಿನ್ನನ್ನು ಪ್ರೀತಿಸಿ, ನಿನಗೆ ಸಹಾಯ ಮಾಡಲು ಆಸೆಯಿಂದ ಕಾದಿದ್ದಾರೆ. ಆ ಯೇಸುವಿನ ಪ್ರೀತಿಯನ್ನು ನೀನು ಧಾರಾಳವಾಗಿ ನಂಬಬಹುದು. Ok, ನಾ!
-    Mrs.ಜೀವಾ ವಿಜಯ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin