Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.10.2022
Share:

By Village Missionary Movement

Monday, 17-Oct-2022

ಧೈನಂದಿನ ಧ್ಯಾನ(Kannada) – 18.10.2022

 

ಇದು ಸಂಭವಿಸುವುದೇ?

 

“...ಯೆಹೋವನು ಆಕಾಶದಲ್ಲಿ ದ್ವಾರಗಳನ್ನು ಮಾಡಿದರೂ ಇದು ಸಂಭವಿಸಲಾರದು..." - 2 ಅರಸುಗಳು 7:2

 

ಸರ್ಕಾರಿ ನೌಕರಿಯಲ್ಲಿದ್ದ ಸಭೆಯ ವಿಶ್ವಾಸಿಯೊಬ್ಬರು, ಅವರ ಮೇಲಧಿಕಾರಿ ತನಗೆ ಅನ್ಯಾಯ ಮಾಡಿದ್ದರಿಂದ, ಮೇಲಧಿಕಾರಿಗಳ ಬಳಿ ವಿರೋಧವನ್ನು ವ್ಯಕ್ತಪಡಿಸಿದರು. ಇದರಿಂದ ಕೆಲಸ ಹೋಗುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅವರು ಭಯಪಟ್ಟು ಬೋಧಕರ ಬಳಿ ಹೋಗಿ ಪ್ರಾರ್ಥಿಸಲು ಕೇಳಿದರು. ಇದಕ್ಕಾಗಿ, ಬೋಧಕರು ಮತ್ತು ಸಭೆಯ ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ಪ್ರಾರ್ಥಿಸುತ್ತಿದ್ದರು. Head office ನಿಂದ ಇಬ್ಬರು ತನಿಖೆಗೆ ಬಂದರು. ದೇವರು ಅವರ ಮನಸಿನಲ್ಲಿ ಮಾತನಾಡಿದರಿಂದ, ವಿಶ್ವಾಸಿಯನ್ನು ಬಹಳ ಕ್ರೂರವಾಗಿ ನಡೆಸಿದ ಮೇಲಧಿಕಾರಿಯ ಮೇಲೆಯೇ ತಪ್ಪು ಎಂದು ಬರೆದು ಕಳುಹಿಸಿದರು. ಮೇಲಧಿಕಾರಿಗೆ ವರ್ಗಾವಣೆಯೂ ಬಂತು. ಅಷ್ಟೇ ಅಲ್ಲ, ವಿಶ್ವಾಸಿಗೆ ಉನ್ನತ ಸ್ಥಾನವನ್ನೂ ಕೊಟ್ಟರು. ಹೌದು, ಇದು ಸಂಭವಿಸಬಹುದೇ? ಇದು ಸಾಧ್ಯವೇ? ಎಂದು ಮಾನವನ ಮಿದುಳಿನ ಪ್ರಕಾರ ನಾವು ಯೋಚಿಸುವ ಕಾರ್ಯದಲ್ಲಿ, ದೇವರು ನಮಗಾಗಿ ಯುದ್ಧಮಾಡಿ ಜಯವನ್ನು ಕೊಡುವವರಾಗಿದ್ದಾರೆ.

 

ಸತ್ಯವೇದದಲ್ಲಿ, ಸಿರಿಯಾದ ರಾಜನು, ಇಸ್ರಾಯೇಲ್ ನ ರಾಜಧಾನಿಯಾದ ಸಮಾರ್ಯಕ್ಕೆ ಮುತ್ತಿಗೆ ಹಾಕಿದ್ದದರಿಂದ ಸಮಾರ್ಯದಲ್ಲಿ, ತೀವ್ರವಾಗಿ ಆಹಾರದ ಕ್ಷಾಮ ಉಂಟಾಯಿತು. ಇಸ್ರಾಯೇಲಿನ ರಾಜನು ವಿಚಲಿತನಾಗಿ ಪ್ರವಾದಿಯಾದ ಎಲೀಷನ ಬಳಿಗೆ ತನ್ನ ಬಳಿಯಿಂದ ಒಬ್ಬ ಮನುಷ್ಯನನ್ನು ಕಳುಹಿಸಿದನು. ಅವನ ಬಳಿ ಎಲೀಷನು "ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಮಾರಲ್ಪಡುವವು" ಅಂದನು. ಅದನ್ನು ಕೇಳಿದ ಅರಸನಿಗೆ ಹಸ್ತಕನಾದ ಅಧಿಕಾರಿಯು "ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೂ ಇದು ಸಂಭವಿಸಲಾರದು" ಎಂದು ಸಂದೇಹವಾಗಿ ಮಾತನಾಡಿ ಇಸ್ರಾಯೇಲ್ ದೇವರನ್ನು ಕೀಳಾಗಿ ನೆನೆಸಿದನು. ಆದರೆ ಸಂಭವಿಸಿದ್ದೇನು ಗೊತ್ತಾ? ಕರ್ತನು ಸಿರಿಯಾದವರ ಕಿವಿಗಳಲ್ಲಿ ಮಹಾಸೈನ್ಯದ ಶಬ್ದವು ಕೇಳಲ್ಪಡುವಂತೆ ಮಾಡಿದರು. ಇಸ್ರಾಯೇಲಿನ ಅರಸನು ನಮ್ಮ ಮೇಲೆ ಬೀಳಲು ಹಿತ್ತಿಯರ ಅರಸುಗಳನ್ನೂ ಐಗುಪ್ತದ ಅರಸುಗಳನ್ನೂ ಕೂಲಿಗೆ ಕರೆದಿದ್ದಾನೆ ಅಂದುಕೊಂಡು ಓಡಿಹೋದರು. ಕರ್ತನು ಎಲೀಷ ಪ್ರವಾದಿಯ ಮೂಲಕ ಹೇಳಿದಂತೆ, ಕಾರ್ಯಗಳು ಉತ್ತಮವಾಗಿ ಸಮಾಪ್ತವಾದವು.

 

ಪ್ರಿಯರೇ! ನಿಮ್ಮ ಜೀವನದಲ್ಲಿ "ಇದು ಸಂಭವಿಸಬಹುದೇ" ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ? ದೇವರು ನಿಮಗೆ ಏನನ್ನಾದರೂ ಭರವಸೆ ನೀಡಿದಾಗ, ಆ ನಾಯಕನಂತೆ ನೀವು ನಂಬಲು ಸಾಧ್ಯವಾಗುತ್ತಿಲ್ಲವೇ? ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆತನು ಕಂಡುಹಿಡಿಯಲಾರದಂಥ ಮಹತ್ಕಾರ್ಯ ಗಳನ್ನೂ ಲೆಕ್ಕವಿಲ್ಲದಷ್ಟು ಅದ್ಭುತಗಳನ್ನೂ ಮಾಡುವ ದೇವರು ಮೇಲ್ಕಂಡ ವಿಶ್ವಾಸಿಯ ಜೀವನದಲ್ಲಿ ಮಾಡಿದಂತೆಯೇ ಮಹತ್ಕಾರ್ಯಗಳನ್ನು ಮಾಡುತ್ತಾರೆ. ನಂಬಿರಿ ಆಮೆನ್.

- A. ಬ್ಯೂಲ

 

ಪ್ರಾರ್ಥನಾ ಅಂಶ:

ನಮ್ಮ ಗೆತ್ಸೆಮನೆ ಕ್ಯಾಂಪಸ್‌ಗೆ

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಗುಣಪಡಿಸುವ ಆರಾಧನೆಗೆ ಬರುವ ರೋಗಿಗಳೆಲ್ಲರೂ ಸ್ವಸ್ಥತೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet