Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.10.2022 (Youth Special)
Share:

By Village Missionary Movement

Monday, 17-Oct-2022

ಧೈನಂದಿನ ಧ್ಯಾನ(Kannada) – 17.10.2022 (Youth Special)

 

ಕಣ್ಮಣಿಯೇ ಕೇಳ್

 

"ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವದರಲ್ಲಿ ಪ್ರಾಣಾಪಾಯದ ತನಕ ಇನ್ನೂ ಅದನ್ನು ಎದುರಿಸಲಿಲ್ಲ" - ಇಬ್ರಿಯ 12:4

 

ನಮ್ಮ ಜೀವನದಲ್ಲಿ ಪರಿಶುದ್ಧವಾಗಿ ಜೀವಿಸದೆ, ನಾವು ಪಾಪ ಮಾಡುವುದರಿಂದ ದೇವರಿಂದ ನಾವು ಕಳೆದುಕೊಳ್ಳಬಹುದಾದ ನಾಲ್ಕು ವಿಷಯಗಳನ್ನು ಧ್ಯಾನಿಸೋಣ.

 

ದೇವರ ಪ್ರಸನ್ನತೆ: ಕ್ರಿಸ್ತನನ್ನು ಹೊಂದಿರುವವರ ಜೀವನದಲ್ಲಿ ಒಂದು ಪ್ರಮುಖ ವಿಷಯವೆಂದರೆ ದೇವರ ಪ್ರಸನ್ನತೆ. ಆದರೆ ನಾವು ಧೈರ್ಯದಿಂದ ಪಾಪ ಮಾಡಿದಾಗ, ನಾವು ದೇವರ ಪ್ರಸನ್ನತೆಯನ್ನು ಕಳೆದುಕೊಳ್ಳುತ್ತೇವೆ. ನಾವು ಕ್ರಮವಾಗಿ ಸತ್ಯವೇದವನ್ನು ಧ್ಯಾನಿಸಲು ಮತ್ತು ಪ್ರಾರ್ಥಿಸಲು ಸಾಧ್ಯವಾಗದ ಕಾರಣ, ನಾವು ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಹಿಂಜಾರಿ ಹೋಗಿ, ಅವಿಶ್ವಾಸಿಯಾಗಿ ಮಾರ್ಪಡುವ ಅಪಾಯವೂ ಇದೆ.

 

ನಂಬಿಕೆ: ಯಾಕೋಬ 1:14 ರಲ್ಲಿ, ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ ಎಂದು ಓದುತ್ತೇವೆ. ನಾವು ಪಾಪ ಮಾಡುವುದರಿಂದ ಸೈತಾನನ ಸುಳಿಯಲ್ಲಿ ಸಿಲುಕಿ ಶೋಧನೆಗಳನ್ನು ಬರಮಾಡಿಕೊಳ್ಳುತ್ತೇವೆ. ಈ ಶೋಧನೆಯ ಸಮಯದಲ್ಲಿ, ದೇವರ ಮೇಲೆ ಇಟ್ಟಿರುವ ನಂಬಿಕೆ ಕಡಿಮೆಯಾಗುತ್ತದೆ.

 

ಸಮಾಧಾನ: ದೇವರು ಕೊಡುವ ಸಮಾಧಾನ ನಮ್ಮಲ್ಲಿದ್ದರೆ ಮಾತ್ರ ನಾವು ಮತ್ತು ನಮ್ಮ ಸುತ್ತಮುತ್ತಲಿನವರು ನೆಮ್ಮದಿಯಿಂದ ಇರಲು ಸಾಧ್ಯ. ನಾವು ಪಾಪವನ್ನು ಮಾಡಿ ದೇವ ಸಮಾಧಾನವನ್ನು ಕಳೆದುಕೊಂಡಾಗ, ನಾವು ಜೀವನದಲ್ಲಿ ತೊಂದರೆಗೊಳಗಾಗುತ್ತೇವೆ ಮತ್ತು ಹರ್ಷವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ.

 

ಆಶೀರ್ವಾದಗಳು: ನಾವು ಪಾಪದ ಜೀವನವನ್ನು ನಡೆಸುವಾಗ ಮತ್ತು ದೇವರನ್ನು ದುಃಖಿಸಿದಾಗ, ಅವರು ನಮಗಾಗಿ ಕಾಯ್ದಿರಿಸಿರುವ ಆಶೀರ್ವಾದಗಳನ್ನು ಪಡೆದುಕೊಳ್ಳಲು ನಮಗೆ ಅಡಚಣೆಯಾಗುತ್ತದೆ. ನಮಗೆ ದೇವರ ಯೋಜನೆಗಳು ವಿಳಂಬವಾಗುತ್ತವೆ.

 

ಪ್ರೀತಿಯ ಕಣ್ಮಣಿಗಳೇ! ಪರಿಶುದ್ಧ ಗ್ರಂಥದಲ್ಲಿ ಸಂಸೋನ ಮತ್ತು ಯೋಸೇಫನೆಂಬ ಇಬ್ಬರು ಯುವಕರ ಜೀವನವನ್ನು ನಾವು ಧ್ಯಾನಿಸಿದರೆ, ಇಬ್ಬರೂ ದೇವರಿಗಾಗಿ ಕೆಲಸ ಮಾಡಿದ ಪೂರ್ವನಿರ್ಧರಿತ ಮತ್ತು ಆಯ್ಕೆ ಮಾಡಿದ ಪಾತ್ರಗಳು. ಯೋಸೇಫನೆಂಬ ಯುವಕನು ಪಾಪದ ವಿರುದ್ಧ ಹೋರಾಡಿ ದೇವರು ತನಗಾಗಿ ನೇಮಿಸಿದ್ದ ಆಶೀರ್ವಾದಕರವಾದ ಜೀವನವನ್ನು ಪಡೆದುಕೊಂಡನು. ಆದರೆ ಯೌವನಸ್ಥನಾದ ಸಂಸೋನನು ಪಾಪದಲ್ಲಿ ಬಿದ್ದು ಅವಿವೇಕಿಯಾಗಿ ಮರಣಹೊಂದಿದನು, ಹೋರಾಡಲು ಇಚ್ಛಿಸಲಿಲ್ಲ ಮತ್ತು ದೇವರ ಪ್ರಸನ್ನತೆಯನ್ನು ಕಳೆದುಕೊಂಡನು ಮತ್ತು ಅನೇಕರಿಗೆ ಹಾಸ್ಯಪ್ರದನಾಗಿ ದೇವರು ತನಗಾಗಿ ಇಟ್ಟಿದ್ದ ಆಶೀರ್ವಾದವನ್ನು ಕಳೆದುಕೊಂಡು ಸತ್ತುಹೋದನು.

 

ನಾವು ನಮ್ಮ ಸ್ವಂತ ಶಕ್ತಿಯಿಂದ ಮಾತ್ರ ಪಾಪವನ್ನು ಜಯಿಸಲು ಸಾಧ್ಯವಿಲ್ಲ. ನಾವು ಮಾಂಸದ ಪ್ರಕಾರ ಪ್ರಯತ್ನಿಸಿದಾಗ, ಮತ್ತೆ ಮತ್ತೆ ಅದೇ ಪಾಪದಲ್ಲಿ ಬೀಳುವ ಸಾಧ್ಯತೆಗಳಿವೆ. ಯೇಸುಕ್ರಿಸ್ತನ ರಕ್ತವು ಮಾತ್ರ ಎಲ್ಲಾ ಪಾಪಗಳನ್ನು ತೆಗೆದುಹಾಕುತ್ತದೆ ಮತ್ತು ನಮ್ಮನ್ನು ಶುದ್ಧೀಕರಿಸುತ್ತದೆ. ದೇವರು ನಮಗೆ ಪಾಪವನ್ನು ಜಯಿಸಲು ಶಕ್ತಿಯನ್ನು ನೀಡುತ್ತಾರೆ ಮತ್ತು ಸಂಪೂರ್ಣವಾಗಿ ಪವಿತ್ರಾತ್ಮನಿಂದ ತುಂಬಿಸುತ್ತಾರೆ. ಪವಿತ್ರಾತ್ಮನ ಸಹಾಯದಿಂದ ನಾವು ಪಾಪದ ವಿರುದ್ಧ ಹೋರಾಡಿ ಪರಿಶುದ್ಧವಾಗಿ ಜೀವಿಸಿ ಜಯವನ್ನು ಹೊಂದೋಣ! ಹಲ್ಲೇಲೂಯಾ!

- Mrs. ಜೆಬಕಣಿ ಶೇಖರ್

 

ಪ್ರಾರ್ಥನಾ ಅಂಶ:

ಪ್ರತಿ ತಿಂಗಳು ನಾವು 47,000 ಕ್ಕೂ ಹೆಚ್ಚು ಮಕ್ಕಳಿಗೆ ಯೇಸುವಿನ ಪ್ರೀತಿಯನ್ನು ತಿಳಿಸುತ್ತಿದ್ದೇವೆ. ವಾಕ್ಯವನ್ನು ಕೇಳುವ ಪುಟ್ಟ ಮಕ್ಕಳೆಲ್ಲರೂ ದೇವರ ಪ್ರೀತಿಯನ್ನು ಅನುಭವಿಸುವಂತೆ ಮತ್ತು ಅದರಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al