Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.10.2022
Share:

By Village Missionary Movement

Saturday, 15-Oct-2022

ಧೈನಂದಿನ ಧ್ಯಾನ(Kannada) – 15.10.2022

 

ಹರಕೆ ಮಾಡುವುದು

 

“ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು." - ಜ್ಞಾನೋಕ್ತಿ. 28:13

 

John ಮತ್ತು Mary ಇಬ್ಬರೂ ಒಡಹುಟ್ಟಿದವರು. ರಜಾದಿನಗಳಲ್ಲಿ ಅವರ ಅಜ್ಜಿ ಇರುವ ಹಳ್ಳಿಗೆ ಹೋಗುತ್ತಿದ್ದರು. ಅಜ್ಜಿಯ ಮನೆಯಲ್ಲಿ ಕೋಳಿ, ಮೇಕೆ, ಬಾತುಕೋಳಿ ಮುಂತಾದ ಹಲವು ಪ್ರಾಣಿಗಳಿದ್ದವು. ಇವರು ರಜೆಗೆ ಹೋಗುವಾಗ ಅಜ್ಜಿ ಇಬ್ಬರಿಗೂ ಬಗೆಬಗೆಯ ರುಚಿಕರವಾದ ತಿನಿಸುಗಳನ್ನು ಮಾಡಿ ಕೊಡುತ್ತಿದ್ದರು. ಒಂದು ದಿನ ಇಬ್ಬರೂ ಆಟವಾಡುತ್ತಿದ್ದರು. ಆಗ ಜಾನ್ ಬಾತುಕೋಳಿಯ ಕುತ್ತಿಗೆ ಹಿಡಿದು ಆಟವಾಡುತ್ತಿದ್ದ. ಆಗ ಅನಿರೀಕ್ಷಿತವಾಗಿ ಬಾತುಕೋಳಿ ಸಾವನ್ನಪ್ಪಿತು. ತಕ್ಷಣ ಜಾನ್ ಭಯದಿಂದ ಸುತ್ತಲೂ ನೋಡಿದನು. ಯಾರೂ ಕಾಣಲಿಲ್ಲ. ಅವನು ಒಂದು ಗುಂಡಿಯನ್ನು ಅಗೆದು ಅದರಲ್ಲಿ ಸತ್ತ ಬಾತುಕೋಳಿಯನ್ನು ಹೂಳಿದನು. "ಅಪ್ಪಾ, ಯಾರೂ ನೋಡಲಿಲ್ಲ" ಅಂದುಕೊಂಡು ಹಿಂತಿರುಗಿದವನಿಗೆ ಒಂದು ಶಾಕ್, ಹಿಂದೆ Mary ನಿಂತಿದ್ದಳು. ತಕ್ಷಣ ಅವಳು “ನಾನು ಅಜ್ಜಿಗೆ ಹೇಳುತ್ತೇನೆ” ಎಂದಳು. John ಅವಳ ಬಳಿ ಅತ್ತಾಗ ಅದನ್ನು ಅಜ್ಜಿಗೆ ಹೇಳಲಿಲ್ಲ.

 

ಅಂದು ರಾತ್ರಿ ಅಜ್ಜಿ ರುಚಿಕರವಾದ ಮೊಟ್ಟೆಯ ತಿನಿಸನ್ನು ಮಾಡಿ ಇಬ್ಬರಿಗೂ ಕೊಟ್ಟರು. Mary ಅದನ್ನು ತಿಂದು ನೋಡಿದಾಗ, ಅದು ತುಂಬಾ ರುಚಿಯಾಗಿತ್ತು. ತಕ್ಷಣ ಅವಳು John ನ ತಟ್ಟೆಯಿಂದ ಎಲ್ಲಾ ಮೊಟ್ಟೆಯನ್ನು ತೆಗೆದುಕೊಂಡಳು. John ಕೋಪಗೊಂಡು "ನಾನು ಅಜ್ಜಿಗೆ ಹೇಳುತ್ತೇನೆ" ಎಂದು ಹೇಳಿದನು. "ನಾನು ಬಾತುಕೋಳಿಯ ಬಗ್ಗೆ ಹೇಳುತ್ತೇನೆ" ಎಂದು ಮೇರಿ ಬೆದರಿಕೆ ಹಾಕಿದಳು. ಈ ರೀತಿಯಾಗಿ, ಮೇರಿ ಪ್ರತಿದಿನ ಜಾನ್‌ಗೆ ಬಾತುಕೋಳಿಯ ಬಗ್ಗೆ ಹೇಳುವ ಮೂಲಕ ಬೆದರಿಕೆ ಹಾಕುತ್ತಿದ್ದಳು. ಆ ರಾತ್ರಿ ಜಾನ್ ತನ್ನ ಅಜ್ಜಿಗೆ ನಡೆದ ಎಲ್ಲದರ ಬಗ್ಗೆ ಹೇಳಿದನು ಮತ್ತು ಕ್ಷಮೆಯಾಚಿಸಿದನು. ಅಜ್ಜಿ ಕೂಡ ಕ್ಷಮಿಸಿದಳು. ಆಗ ಜಾನ್ ಮೇರಿಗೆ ಹೆದರಲೇ ಇಲ್ಲ.

 

ಸತ್ಯವೇದದಲ್ಲಿ 2 ಸಮುವೇಲ 11 ನೇ ಅಧ್ಯಾಯದಲ್ಲಿ ದಾವೀದನು ಒಂದು ದೊಡ್ಡ ಪಾಪವನ್ನು ಮಾಡಿದ್ದನ್ನು ನೋಡುತ್ತೇವೆ. ಅವನು ಊರೀಯನನ್ನು ಕೊಂದು ಅವನ ಹೆಂಡತಿ ಬತ್ಷೆಬೆಳನ್ನು ತನ್ನ ಹೆಂಡತಿಯಾಗಿ ತೆಗೆದುಕೊಂಡನು. ಇದು ದೇವರ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು. ಪ್ರವಾದಿಯಾದ ನಾತಾನನ ಮೂಲಕ ಕರ್ತನು ಆ ಪಾಪವನ್ನು ಬಹಿರಂಗಪಡಿಸಿದಾಗ, ದಾವೀದನು ಕ್ಷಮೆಯನ್ನು ಕೇಳಿದನು. ಅದರೊಂದಿಗೆ ಇಲ್ಲಿಯವರೆಗೆ ನಾವೆಲ್ಲರೂ ಓದಿ ತಿಳಿದುಕೊಳ್ಳುವಂತೆ ಕೀರ್ತನೆಯಾಗಿ ಹಾಡಿ ತನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡರು.

 

ಹೌದು ಪ್ರಿಯರೇ! ನಾವು ಸಹ ಹಾಗೆ ಪಾಪದೊಂದಿಗೆ ಬದುಕುತ್ತಿದ್ದರೆ ಭಯ, ಅಳು, ನಷ್ಟ ಉಂಟಾಗುತ್ತದೆ. ಪಾಪಗಳನ್ನು ಒಪ್ಪಿಕೊಂಡರೆ, ಕ್ರಿಸ್ತನು ಕ್ಷಮಿಸುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ ನಾವು ಅದನ್ನು ಮಾಡದೆ ನಮ್ಮ ಪಾಪಗಳ ಭಾರವನ್ನು ಮರೆಮಾಚಿಕೊಂಡು ನಮ್ಮ ಭಾರವನ್ನು ಹೊತ್ತುಕೊಂಡರೆ ಅದು ನಮ್ಮ ಹೃದಯವನ್ನು ಚುಚ್ಚುತ್ತಲೇ ಇರುತ್ತದೆ. ಸೈತಾನನು ಅದನ್ನು ಉಪಯೋಗಿಸಿ ನಮ್ಮನ್ನು ದೂಷಿಸಿ, ದೇವರಿಂದ ನಮ್ಮನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾನೆ. ಆದುದರಿಂದ, ನಮಗಾಗಿ ತನ್ನ ರಕ್ತವನ್ನು ಸುರಿಸಿ ಮರಣ ಹೊಂದಿದ ಯೇಸುವಿನ ಪಾದಗಳಲ್ಲಿ ನಮ್ಮ ಪಾಪ ಭಾರಗಳನ್ನು ಇಳಿಸೋಣ. ದೇವರ ಶಾಂತಿಯನ್ನು ಪಡೆದು ನೆಮ್ಮದಿಯಿಂದ ಬಾಳೋಣ. ನಮ್ಮ ಸುತ್ತಲಿರುವವರಿಗೆ ಈ ರಕ್ಷಣೆಯ ಸಂತೋಷವನ್ನು ತಿಳಿಸಿ, ಅವರೂ ಸಹ ಪರಮ ಕಾನಾನ್‌ಗೆ ಪ್ರವೇಶಿಸುವಂತೆ ಅವಕಾಶ ಮಾಡಿಕೊಡೋಣ. ಹಲ್ಲೇಲೂಯಾ!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಇಂದು ಅರಿಯಲೂರು ಕಾರ್ಯಕ್ಷೇತ್ರದಲ್ಲಿ ನಡೆಯಲಿರುವ "ಉಜ್ಜೀವನವನ್ನು ಬಯಸುವವರ ಶಿಬಿರ" ದಲ್ಲಿ ದೇವರು ಮುಂತಿಳಿಸಿದ್ದ ವ್ಯಕ್ತಿಗಳನ್ನು ಯಾವುದೇ ತಡೆಯಿಲ್ಲದೆ ಕರೆತರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin