Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.10.2022
Share:

By Village Missionary Movement

Wednesday, 12-Oct-2022

ಧೈನಂದಿನ ಧ್ಯಾನ(Kannada) – 13.10.2022

 

ಉಜ್ಜೀವನ

 

“ನಾನು ಭೂಮಿಯ ಮೇಲೆ ಬೆಂಕಿಯನ್ನು ಹಾಕುವದಕ್ಕಾಗಿ ಬಂದೆನು; ಅದು ಈಗಾಗಲೇ ಹೊತ್ತಿಕೊಂಡಿದ್ದರೆ ಮತ್ತೇನು ನನಗೆ ಬೇಕು?" - ಲೂಕ 12:49

 

ಪಂಡಿತ್ ರಮಾಬಾಯಿ ಒಬ್ಬ ಬ್ರಾಹ್ಮಣ ಮಹಿಳೆ. ಅವರು 1891 ರಲ್ಲಿ ಕ್ರಿಸ್ತನನ್ನು ಸ್ವೀಕರಿಸಿದರು. ಇವರು ಸಮಾಜ ಸೇವೆಯಲ್ಲಿ ನಿಪುಣರು. 1886 ರ ಬರಗಾಲದಲ್ಲಿ ಅವರು ತನ್ನ ತಾಯಿ ಮತ್ತು ತಂದೆಯನ್ನು ಕಳೆದುಕೊಂಡರು. 22 ನೇ ವಯಸ್ಸಿನಲ್ಲಿ, ಅವರು ಬಂಗಾಳದ ವಕೀಲರನ್ನು ವಿವಾಹವಾದರು. ಆದರೆ ಆಕೆಯ ಪತಿ 19 ತಿಂಗಳಲ್ಲಿ ನಿಧನರಾದರು. ಆಗ ಅವಳ ಒಬ್ಬನೇ ಅಣ್ಣನೂ ತೀರಿಕೊಂಡ. ರಮಾಬಾಯಿ ಯುವ ವಿಧವೆಯಾದರು. ಗಂಡ ಸತ್ತರೆ ಅವನ ಶವದೊಂದಿಗೆ ಅದೇ ಬೆಂಕಿಯಲ್ಲಿ ಹೆಂಡತಿಯನ್ನೂ ಸುಡುತ್ತಿದ್ದ ಕಾಲವದು. ವಿಧವಾ ಜೀವಿತವನ್ನು ಒಪ್ಪಿಕೊಳ್ಳದ ಸಮಾಜದ ನಡುವೆ ಪಂಡಿತ್ ರಮಾಬಾಯಿ ಕ್ರಿಸ್ತನಿಗಾಗಿ ಜೀವಿಸಿದರು. 1899 ರಲ್ಲಿ, ಅವರು ಭಾರತ ದೇಶದ ಉಜ್ಜೀವನಕ್ಕಾಗಿ ಪ್ರಾರ್ಥನೆ ಮತ್ತು ಉಪವಾಸದಲ್ಲಿ ಹೆಚ್ಚು ಸಮಯವನ್ನು ಕಳೆದರು. ಅವರ ಉದ್ರೇಕದ ದಾಹ ಇನ್ನಷ್ಟು ಹೆಚ್ಚಾಯಿತು. ನಂತರ ಹತ್ತು ಜನರ ಅನೇಕ ಪ್ರಾರ್ಥನಾ ಗುಂಪುಗಳನ್ನು ರಚಿಸಲಾಯಿತು ಮತ್ತು ಈ ಪ್ರಾರ್ಥನಾ ಗುಂಪುಗಳು ಭಾರತದಲ್ಲಿನ ಎಲ್ಲಾ ಕ್ರೈಸ್ತರು ರಕ್ಷಣೆ ಹೊಂದಲು ಮತ್ತು ಪವಿತ್ರಾತ್ಮವು ಭಾರತದಾದ್ಯಂತ ಸುರಿಸಲ್ಪಡಬೇಕೆಂದು ಈ ಪ್ರಾರ್ಥನಾ ಗುಂಪುಗಳು ವೈರಾಗ್ಯವಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. ಅವರ ಮೂಲಕ ಮಹಿಳೆಯರಲ್ಲೂ ದೊಡ್ಡ ಉಜ್ಜೀವನ ಉಂಟಾಯಿತು.

 

ಲೂಕನು ಬರೆದ ಸುವಾರ್ತೆಯಲ್ಲಿ ಎರಡನೇ ಅಧ್ಯಾಯದಲ್ಲಿ ಸಹ, ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು. ತನ್ನ ಗಂಡನೊಂದಿಗೆ ಏಳು ವರುಷಗಳು ಮಾತ್ರವೇ ಜೀವಿಸಿ ವಿಧವೆಯಾದಳು. ನಂತರ ಅವಳು ತನ್ನ ಸ್ವಂತ ಜೀವನದ ಬಗ್ಗೆ ಯೋಚಿಸದೆ ತನ್ನ ಸ್ವಂತ ಜನರ ಉಜ್ಜೀವನಕ್ಕಾಗಿ ತನ್ನನ್ನು ಅರ್ಪಿಸಿಕೊಂಡಳು, ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು. 84ರ ಹರೆಯದಲ್ಲೂ ಪೌಳಿಯ ಒಡಕಿನಲ್ಲಿ ನಿಂತಿದ್ದರು, ಅದ್ಭುತ ಅನ್ನ.

 

ಇದನ್ನು ಓದುವ ದೇವಮಕ್ಕಳೇ! ನೀವು ಕರ್ತನಿಗಾಗಿ ಏನು ಮಾಡುತ್ತಿದ್ದೀರಿ! ಹಿಂದೂ ಹಿನ್ನೆಲೆಯಲ್ಲಿ ಹುಟ್ಟಿ ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ, ಪತಿಯನ್ನು ಕಳೆದುಕೊಂಡ ಯುವ ವಿಧವೆ ಪಂಡಿತ ರಮಾಬಾಯಿ ಕರ್ತನಿಗಾಗಿ ಇಷ್ಟು ವೈರಾಗ್ಯದಿಂದ ನಿಂತು ಭಾರತದಲ್ಲಿ ಉಜ್ಜೀವನವನ್ನು ತಂದಿರುವಾಗ, ನಿಮ್ಮ ಮೂಲಕ ದೇವರು ದೊಡ್ಡ ಉಜ್ಜೀವನವನ್ನು ತರುತ್ತಾರೆ ಎಂಬುದು ಹೆಚ್ಚು ಖಚಿತವಲ್ಲವೇ! ನಿಮ್ಮ ಹೃದಯದಲ್ಲಿ ಉಜ್ಜೀವನದ ಬಗ್ಗೆ ಬಾಯಾರಿಕೆ ಇದ್ದರೆ, ದೇವರ ಬೆಂಕಿ ಇಂದು ನಿಮ್ಮನ್ನು ಸ್ಪರ್ಶಿಸುವುದರಲ್ಲಿ ಸಂದೇಹವೇ ಇಲ್ಲ. ನಾನು ಕೇವಲ ಸಾಮಾನ್ಯ ವ್ಯಕ್ತಿ ನನ್ನಿಂದ ಏನು ಮಾಡಲು ಸಾಧ್ಯ ಎಂದು ಒಂದು ಮೂಲೆಯಲ್ಲಿ ಮುದುರಿ ಕುಳಿತುಕೊಂಡಿದ್ದದ್ದು ಸಾಕು! ಉಜ್ಜೀವನದ ಬೆಂಕಿಯಾಗಿ ಎದ್ದೇಳಿರಿ! ನಿನ್ನನ್ನೂ ದೇವರು ಹೊತ್ತಿ ಉರಿಯುವಂತೆ ಮಾಡುತ್ತಾರೆ!!

- Mrs. ರೂಬಿ ಅರುಳ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯಲ್ಲಿ ಒಟ್ಟು 790 ಮಿಷನರಿಗಳು ಪೂರ್ಣಾವಧಿ ಸೇವೆ ಮಾಡುತ್ತಿದ್ದಾರೆ. ದೇವರು ಪ್ರತಿಯೊಬ್ಬರನ್ನು ಅಂತ್ಯ ಕಾಲದ ಉಜ್ಜೀವನದ ಸಾಧನಗಳಾಗಿ ಬಳಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al