Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.10.2022
Share:

By Village Missionary Movement

Wednesday, 12-Oct-2022

ಧೈನಂದಿನ ಧ್ಯಾನ(Kannada) – 12.10.2022

 

ಅಂತರಾಳದಿಂದ ಪ್ರಾರ್ಥನೆ

 

“...ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು..." - ಜ್ಞಾನೋಕ್ತಿ 1: 28

 

ಬಹಳ ದಿನಗಳ ದುಡಿಮೆಯ ನಂತರ, ಕಲಾ ಮನೆಯನ್ನು ನಿರ್ಮಿಸಿ, ಹತ್ತಿರದ ಜನರನ್ನು ಪ್ರತಿಷ್ಟೆ ಆರಾಧನೆಗೆ ಆಹ್ವಾನಿಸಿದಳು. ಆದರೆ ಎದುರು ಮನೆಯ ರಾಣಿಯನ್ನು ಮಾತ್ರ ಅವಳಿಂದ ನೋಡಲಾಗಲಿಲ್ಲ. ಭಾನುವಾರದ ಆರಾಧನೆಯಲ್ಲಿ ರಾಣಿಯನ್ನು ನೋಡಿ ಆರಾಧನೆ ಮುಗಿದ ಕೂಡಲೇ ಹತ್ತಿರ ಹೋಗಿ ಮನೆ ಪ್ರತಿಷ್ಟೆ ಆರಾಧನೆಗೆ ಆಹ್ವಾನಿಸಿದಳು. ಹಾಗೇ ಮಾತನಾಡುತ್ತಿರುವಾಗ "ರಾಣಿ, ನಿನ್ನನ್ನು ನೋಡೋಕೆ ಆಗ್ತಾ ಇಲ್ಲ" ಎಂದಳು. "ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದರಿಂದ ತುಂಬಾ ಬ್ಯುಸಿಯಾಗಿದ್ದೇನೆ ಎಂದಳು ರಾಣಿ. “ಅರ್ಧ ಗಂಟೆಯಾದರೂ ಪ್ರಾರ್ಥನೆ ಮಾಡಲು ಸಮಯವಿಲ್ಲ ನೋಡು" ಎಂದಳು. ಅದಕ್ಕೆ ಕಲಾ ಅರ್ಧ ಗಂಟೆ ಪ್ರಾರ್ಥಿಸಲಾಗದಿದ್ದರೂ ಕೆಲವು ನಿಮಿಷಗಳು ಮನದಾಳದಿಂದ ಪ್ರಾರ್ಥಿಸಿದರೂ ಅದು ಸಹ ಪ್ರಾರ್ಥನೆಯೇ ತಾನೇ! "ಪ್ರಾರ್ಥನೆ ಎಂದರೆ ತಂದೆಯೊಂದಿಗೆ ಮಾತನಾಡುವುದು, ನೀನು ಕೆಲಸ ಮಾಡುವಾಗಲೂ ಪ್ರಾರ್ಥಿಸಬಹುದು" ಎಂದಳು. ರಾಣಿ ಚಿಂತನಶೀಲವಾಗಿ ತಲೆ ಅಲ್ಲಾಡಿಸಿದಳು.

 

ನಾವು ಬ್ಯುಜಿಯಾದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಪ್ರಾರ್ಥನೆ ಮಾಡಲು ಕೂಡ ಸಮಯವಿಲ್ಲ ಎಂದು ಕೊರಗುತ್ತಲೇ ಇರುತ್ತೇವೆ. ಆದರೆ ಸಿಗುವ ನಿಮಿಷಗಳನ್ನು ವ್ಯರ್ಥ ಮಾಡದೇ ಅಂತರಾಳದಿಂದ ಪ್ರಾರ್ಥಿಸಬಹುದು. ಇಬ್ಬರು ಪ್ರಾರ್ಥನೆ ಮಾಡಲು ಆಲಯದೊಳಗೆ ಹೋದರು. ಒಬ್ಬನು ಆಲಯವನ್ನು ಸಹ ಪ್ರವೇಶಿಸದೆ ದೂರದಲ್ಲಿ ನಿಂತು "ದೇವರೇ, ಪಾಪಿಯಾದ ನನ್ನನ್ನು ಕರುಣಿಸು" ಎಂದು ಸಂಕ್ಷಿಪ್ತವಾಗಿ ಪ್ರಾರ್ಥಿಸಿದನು. ಇವರೇ ನೀತಿವಂತನೆಂದೆಣಿಸಲ್ಪಟ್ಟು ಹೋದರು. ಪ್ರಾರ್ಥಿಸುವ ಸಮಯ, ಸ್ಥಳ ಇವುಗಳಿಗಿಂತ ಹೆಚ್ಚಾಗಿ ಅಂತರಾಳದಿಂದ ಪ್ರಾರ್ಥಿಸುತ್ತಿದ್ದೇವಾ? ಅದೇ ಮುಖ್ಯ. ಅಂತರಾಳದಿಂದ ಪ್ರಾರ್ಥಿಸು. ಮನುಷ್ಯನು ಮುಖವನ್ನು ನೋಡುತ್ತಾನೆ. ಆದರೆ ದೇವರು ಹೃದಯವನ್ನು ನೋಡುತ್ತಾರೆ. (1 ಸಮು.16:7) ಎಂಬುದನ್ನು ಮರೆಯಬಾರದು. ಒಬ್ಬ ಕುಷ್ಠರೋಗಿಯು ಕರ್ತನಾದ ಯೇಸುವಿನ ಬಳಿಗೆ ಓಡಿಬಂದು "ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ" (ಮತ್ತಾಯ 8:2) ಎಂದು ಸಂಕ್ಷಿಪ್ತವಾಗಿ ಪ್ರಾರ್ಥಿಸಿ ಸ್ವಸ್ಥತೆಯನ್ನು ಹೊಂದಿಕೊಂಡು ಹೋದನು. ಶಿಲುಬೆಯಲ್ಲಿ ನೇತಾಡುತ್ತಿದ್ದಾಗ, ಕಳ್ಳನು, "ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ" (ಲೂಕ 23:42) ಎಂದು ಪ್ರಾರ್ಥಿಸಿ ಪರದೈಸಿನ ಜೀವನವನ್ನು ಪಡೆದನು.

 

ಇದನ್ನು ಓದುವ ಪ್ರಿಯರೇ! ಅಗತ್ಯವಿದ್ದಾಗ ಮಾತ್ರ ನಾವು ದೇವರನ್ನು ಹುಡುಕುತ್ತೇವೆ ಮತ್ತು ಅದು ಪೂರ್ಣಗೊಂಡಾಗ ನಾವು ದೇವರಿಗೆ ಧನ್ಯವಾದ ಹೇಳುವುದನ್ನು ಮರೆತುಬಿಡುತ್ತೇವೆ. ಮತ್ತು ನಾವು ಆತನ ಧ್ವನಿಯನ್ನು ಕೇಳದೆ ಅಗತ್ಯವಿರುವಲ್ಲಿ ಮಾತ್ರ ಆತನನ್ನು ಹುಡುಕಿದಾಗ, ಅವರು ಆ ಪ್ರಾರ್ಥನೆಗೆ ಉತ್ತರಿಸುವುದಿಲ್ಲ ಎಂದು ಸತ್ಯವೇದವು ಸ್ಪಷ್ಟಪಡಿಸುತ್ತಿದೆ. ಆದುದರಿಂದ ನಮಗಿರುವ ಎಲ್ಲಾ ಸಮಯದಲ್ಲೂ ದೇವರನ್ನು ಹುಡುಕೋಣ ಮತ್ತು ಆತನನ್ನು ಮೊದಲು ಮಾಡೋಣ. ನಾವು ಅಂತರಾಳದಿಂದ ಪ್ರಾಮಾಣಿಕವಾಗಿ ಪ್ರಾರ್ಥಿಸೋಣ. ದೇವರು ನಿಮ್ಮನ್ನು ಆಶೀರ್ವದಿಸಲಿ. ಆಮೆನ್.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶ ಮತ್ತು ಒಡಿಶಾದ 63 ಸ್ಥಳಗಳಲ್ಲಿ ಜನರು ಆರಾಧಿಸಲು ಆಲಯಗಳ ತುರ್ತು ಅವಶ್ಯಕತೆಯಿದೆ. ಆಲಯಯವನ್ನು ನಿರ್ಮಿಸಲು ಸಹಾಯ ಮಾಡುವ ಜನರನ್ನು ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin