Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.10.2022 (Kids Special)
Share:

By Village Missionary Movement

Sunday, 09-Oct-2022

ಧೈನಂದಿನ ಧ್ಯಾನ(Kannada) – 10.10.2022 (Kids Special)

 

ಮನಸ್ಸು ಹೊಸದಾದರೆ...

 

"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ" - 2 ತಿಮೊಥೆ. 1:7

 

ಯಾವುದೇ ಮನುಷ್ಯನ ಮನಸ್ಸನ್ನು ವಿವಿಧ ಆಲೋಚನೆಗಳು ಆಕ್ರಮಿಸಿಕೊಂಡಿರುತ್ತವೆ ಮತ್ತು ಆ ಆಲೋಚನೆಗಳು ರೂಪವನ್ನು ಪಡೆಯುತ್ತವೆ. ಆದ್ದರಿಂದ, ಜನರ ಮಾನಸಿಕ ಆರೋಗ್ಯವನ್ನು ರಕ್ಷಿಸಿದರೆ ಮಾತ್ರವೇ, ಮಾನವ ಜನಾಂಗದ ಎಲ್ಲಾ ಕಾರ್ಯಗಳು ಸೂಕ್ತವಾಗುತ್ತವೆ. ಸೈತಾನನು ಮನಸ್ಥಿತಿ ಸರಿಯಿಲ್ಲದವರನ್ನು ಆಕ್ರಮಿಸಿ ಸುಲಭವಾಗಿ ತನ್ನ ಉದ್ದೇಶಗಳನ್ನು ಪೂರೈಸುವ ಸಾಧನಗಳಾಗಿ ಪರಿವರ್ತಿಸುತ್ತಾನೆ. ಆದ್ದರಿಂದ ನಾವು ಸ್ಪಷ್ಟ ಮನಸ್ಸು ಮತ್ತು ನಂಬಿಕೆಯಿಂದ ಜಯಿಸುವವರಂತೆ ಕಾಣಬೇಕು. "ಮಾನಸಿಕ ಆರೋಗ್ಯ ದಿನ" ವಾದ ಇಂದು ಇದರ ಬಗ್ಗೆ ಚಿಂತಿಸುವುದು ಸೂಕ್ತವಾಗಿರುತ್ತದೆ.

 

ದೇವರು ಇಸ್ರಾಯೇಲ್ ಅನ್ನು ಆಶೀರ್ವದಿಸಲು ಇಷ್ಟಪಡುತ್ತಾರೆ. ಆದರೆ ಸೈತಾನನು ಕೊಲ್ಲಲು ಮತ್ತು ನಾಶಮಾಡಲು ಬರುವವನಾದ್ದರಿಂದ, ಅವನು ವ್ಯಕ್ತಿಯ ಮನಶಾಂತಿಯನ್ನು, ಸಮಾಧಾನವನ್ನು ಮತ್ತು ಸಂತೋಷವನ್ನು ಕದಡುತ್ತಾನೆ. ಅದುವೇ ಒಬ್ಬರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಾರೀರಿಕ ಕ್ರಿಯೆಗಳು ಹೇರಳವಾಗಿದ್ದಾಗ, ಸೈತಾನನು ಮಾನವನ ಮನಸ್ಸನ್ನು ನಿಯಂತ್ರಿಸಬಹುದು ಮತ್ತು ಜನರನ್ನು ತನಗೆ ಬೇಕಾದುದನ್ನು ಮಾಡುವ ಕೈಗೊಂಬೆಗಳಾಗಿ ಪರಿವರ್ತಿಸಬಹುದು. ಹೆಚ್ಚಾಗಿ ಮಾನಸಿಕ ಅಸ್ವಸ್ಥರು 1. ತಪ್ಪಿತಸ್ಥ ಮನಸ್ಸಾಕ್ಷಿ, 2. ಇತರರಿಂದ ಅವಮಾನಿಸಲ್ಪಡುವುದು, 3. ಸಮಸ್ಯೆಗಳನ್ನು ಎದುರಿಸಲು ಅಸಮರ್ಥತೆ ಮತ್ತು 4. ದುಷ್ಟ, ವಾಮಾಚಾರ ಮತ್ತು ಮಾಂತ್ರಿಕ ಶಕ್ತಿಗಳಿಂದ ಆ ಸ್ಥಿತಿಗೆ ತಳ್ಳಲ್ಪಡುತ್ತಾರೆ. ನನ್ನನ್ನು ಪ್ರೀತಿಸಲು, ಸ್ವೀಕರಿಸಲು, ತಂದೆಯಾದ ಯೇಸುಕ್ರಿಸ್ತನಿದ್ದಾರೆ ಎಂಬ ಒಂದೇ ಒಂದು ಆಲೋಚನೆಯು ಮಾನವನ ಮನಸ್ಸನ್ನು ನವೀಕರಿಸಬಲ್ಲದು. ಕ್ರಿಸ್ತನ ಮೂಲಕ ಶಾರೀರಿಕ ಚಿಂತೆಯು ಸಾಯುವಾಗ ಮನುಷ್ಯರು ಉತ್ತಮ ಮಾನಸಿಕ ಆರೋಗ್ಯವನ್ನು (ರೋಮಾ 8:10) ಪಡೆದು ಕೆಟ್ಟದ್ದನ್ನು ಒಳ್ಳೆಯದರಿಂದ ಜಯಿಸುತ್ತಾರೆ.

 

ಪ್ರಿಯರೇ, ಇಬ್ರಿಯರಿಗೆ ಬರೆದ ಪತ್ರಿಕೆಯು ಹೊಸದು ಮತ್ತು ಜೀವಂತ ಮಾರ್ಗ ಎಂದು ವಿವರಿಸುತ್ತಿದೆ. ಯೇಸುಕ್ರಿಸ್ತನ ರಕ್ತದಿಂದ ಮಾತ್ರವೇ ಇದರಲ್ಲಿ ಪ್ರವೇಶಿಸಲು ಸಾಧ್ಯ. ಕುರಿಮರಿಯಾದಾತನ ರಕ್ತ ಮತ್ತು ಸಾಕ್ಷಿಯ ಮಾತುಗಳಿಂದ ಪ್ರಪಂಚದ ಅನೇಕ ಮನೋವೈದ್ಯರಿಂದ ಗುಣಪಡಿಸಲಾಗದ ಮಾನಸಿಕ ಅಸ್ವಸ್ಥತೆಗಳನ್ನು ಗುಣಪಡಿಸಬಹುದು. ನಾವು ಪುನಃ ನಮ್ಮ ಹಳೆಯ ಸ್ವಭಾವದಂತೆ ನಡೆಯಲು ದಾಸತ್ವದ ಆತ್ಮವನ್ನು ಪಡೆಯದೆ, "ಅಪ್ಪಾ ತಂದೆಯೇ" ಎಂದು ಕರೆಯುವಂತಹ ಪುತ್ರಸ್ವೀಕಾರದ ಆತ್ಮವನ್ನು ಪಡೆದಿದ್ದೇವೆ. ಈ ಆತ್ಮನ ನಡೆಸುವಿಕೆಯು ನಮ್ಮನ್ನು ಮನಸ್ಸಿನ ಎಲ್ಲಾ ಸಂಕೋಲೆಗಳಿಂದ ಮುಕ್ತಗೊಳಿಸುತ್ತದೆ ಮತ್ತು ಹೆಚ್ಚಿನ ಮಾನಸಿಕ ಶಕ್ತಿಯೊಂದಿಗೆ ನಮ್ಮ ಗುರಿಯತ್ತ ಓಡುವಂತೆ ಮಾಡುತ್ತದೆ. ಆದ್ದರಿಂದ ನಾವು ನಮ್ಮ ಜೀವನ ಪಯಣದಲ್ಲಿ ಏನನ್ನೂ ಎದುರಿಸಲು ಮತ್ತು ಆತನ ಶಕ್ತಿಯೊಂದಿಗೆ ಓಡಲು ಧೈರ್ಯವನ್ನು ನೀಡುವ ದೇವರ ಆತ್ಮವನ್ನು ಸ್ವೀಕರಿಸೋಣ.

- Sis. ಮೆರ್ಸಿ ಅಲೆಕ್ಸಾಂಡರ್

 

ಪ್ರಾರ್ಥನಾ ಅಂಶ:

ಆಂಧ್ರ ಮತ್ತು ಒಡಿಶಾ ರಾಜ್ಯಗಳಲ್ಲಿ ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ 86 ಮಿಷನರಿಗಳ ಕುಟುಂಬಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al