Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.10.2022
Share:

By Village Missionary Movement

Saturday, 08-Oct-2022

ಧೈನಂದಿನ ಧ್ಯಾನ(Kannada) – 09.10.2022

 

ಹೊರೆಯನ್ನು ಹಗುರಗೊಳಿಸು

 

“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು." - ಮತ್ತಾಯ 11:28

 

ಹಾಯ್ ಫ್ರೆಂಡ್ಸ್ ಹೇಗಿದ್ದೀರ? Daily ಶಾಲೆಗೆ ಹೋಗೋದು, Home work ಬರೆಯೋದು ತುಂಬಾ Busyಯಾಗಿದ್ದೀರಾ? Ok...Ok ಇಂದು ತುಂಬಾ ಸುಂದರವಾಗಿ Bright - ಆಗಿ ಚುರು ಚುರುಕಾಗಿ ಇದ್ದೀರಲ್ಲಾ. Super, ನಿಮ್ಮನ್ನು ನೋಡಿದ ತಕ್ಷಣ ಒಂದು ಕಥೆ ಹೇಳಬೇಕು ಅನ್ನಿಸುತ್ತಿದೆ. ನೀವು ರೆಡಿಯಾಗಿದ್ದೀರಾ? ಸರಿ. ನಾವು ಕಥೆಯೊಳಗೆ ಹೋಗೋಣ್ವಾ?

 

ಒಬ್ಬ ಯಜಮಾನನಿಗೆ ಅನೇಕ ಸೇವಕರಿದ್ದರು. ಯಜಮಾನ ಅಂದರೆ ಅವರು ಹೇಳಿದ್ದನ್ನು ಕೇಳಲೇ ಬೇಕಲ್ವಾ? ಕೇಳದೆ ಹೋದರೆ ಕೆಲಸದಿಂದ ತೆಗೆದು ಬಿಡುತ್ತಾರೆ ಅಥವಾ ಶಿಕ್ಷೆ ಕೊಡುತ್ತಾರೆ. ಹೌದಲ್ವಾ! ಆದರೆ ಈ ಯಜಮಾನನು ತುಂಬಾ ಕರುಣಾಮಯಿ. ಎಲ್ಲರನ್ನೂ ಪ್ರೀತಿಸುತ್ತಿದ್ದರು ಮತ್ತು ಸಹಾಯ ಮಾಡುತ್ತಿದ್ದರು. ಅವರು ಏನು ಹೇಳಿದರೂ ಸೇವಕರು ಪ್ರಶ್ನಿಸದೆ ಆ ಕೆಲಸವನ್ನು ಮಾಡುತ್ತಿದ್ದರು. ಒಂದು ದಿನ ಇಬ್ಬರು ಸೇವಕರನ್ನು ಕರೆದು ಭಾರವಾದ ಚೀಲವನ್ನು ಒಬ್ಬರಿಗೆ ಮತ್ತು ಹಗುರವಾದ ಚೀಲವನ್ನು ಇನ್ನೊಬ್ಬರಿಗೆ ಕೊಟ್ಟು, "10 ಕಿಮೀ ದೂರದಲ್ಲಿರುವ ಆ ಊರಿಗೆ ಹೋಗಿ ಸೇರಬೇಕು ಎಂದು ಹೇಳಿದರು. ಮತ್ತು "ಕೈ ಚೀಲದಲ್ಲಿರುವ ವಸ್ತುಗಳನ್ನು ಸೇರಿಸುವುದು ಅಥವಾ ಕಳೆಯುವುದು ನಿಮ್ಮ ಇಷ್ಟ" ಎಂದರು. ಭಾರವಿಲ್ಲದ ಕೈ ಚೀಲವನ್ನು ಹಿಡಿದವನು ತುಂಬಾ ಖುಷಿ ಖುಷಿಯಾಗಿ ನಾನೇ ಮೊದಲು ಹೋಗುತ್ತೇನೆ ಎಂದು ಜಾಲಿಯಾಗಿ ನಡೆಯತೊಡಗಿದ.

 

ಆದರೆ ಭಾರವಾದ ಚೀಲವನ್ನು ಹೊಂದಿರುವ ವ್ಯಕ್ತಿಯು ವೇಗವಾಗಿ ನಡೆಯಲು ಸಾಧ್ಯವಿಲ್ಲವಲ್ಲಾ? ಅವನು ನಿಧಾನವಾಗಿ ನಡೆಯಲು ಪ್ರಾರಂಭಿಸಿದನು, “ದೇವರೇ, ನನಗೆ ಸಹಾಯ ಮಾಡು” ಎಂದು ಪ್ರಾರ್ಥಿಸಿದನು. ದಾರಿಯಲ್ಲಿ ಅನೇಕ ಪುಟ್ಟ ಮಕ್ಕಳು ಆಟವಾಡುತ್ತಿದ್ದರು. ವಿಶ್ರಾಂತಿಗಾಗಿ ಚೀಲವನ್ನು ಕೆಳಗೆ ಇಟ್ಟರು. ಅವರಿಗೆ ಏನಾದರೂ ಕೊಡಬಹುದೆಂದು ಯೋಚಿಸಿ ಅದರಲ್ಲಿ ಏನಿದೆ ಎಂದು ನೋಡಿದರು. ಸಾಕಷ್ಟು ತಿಂಡಿಗಳು ಮತ್ತು ಬಾಳೆಹಣ್ಣುಗಳು ಇದ್ದವು. ಆಟವಾಡುತ್ತಿದ್ದ ಮಕ್ಕಳಿಗೆ ತಿಂಡಿ ನೀಡಿದರು. ಯಜಮಾನನು ಕೊಟ್ಟ ಕೈ ಚೀಲದಲ್ಲಿ ಯಾವುದಾದರೂ ಮಹತ್ವದ ವಸ್ತು ಇದೆಯೇ ಎಂದು ಪರಿಶೀಲಿಸುತ್ತಿದ್ದರು. ದುಡಿದು ದಣಿದಿದ್ದ ಹಿರಿಯರಿಗೆ ಬಾಳೆಹಣ್ಣು ನೀಡಿದರು. ಈಗ ಚೀಲ ಹಗುರವಾಗಿದೆ. ವೇಗವಾಗಿ ನಡೆಯಬೇಕಾಗಿದ್ದ ಜಾಗ ತಲುಪಿದರು. ಹಗುರವಾದ ಚೀಲವನ್ನು ತೆಗೆದುಕೊಂಡವರು ಚೀಲದಲ್ಲಿ ಸ್ಥಳವಿದೆಯಲ್ಲಾ ಅಂದುಕೊಂಡು ದಾರಿಯಲ್ಲಿ "1 ಕೆಜಿ ಮಾವಿನಹಣ್ಣು ಖರೀದಿಸಿದರೆ, 1 ಕೆಜಿ ಉಚಿತ" ಎಂದು ಹೇಳಿದ ಕೂಡಲೇ ತೆಗೆದುಕೊಂಡು ಬಿಟ್ಟರು. ಕಡಿಮೆ ಬೆಲೆಗೆ ಎಳನೀರು ಸಿಗುತ್ತಿದ್ದರಿಂದ ಅದನ್ನೂ ಖರೀದಿಸಿದರು. ಭಾರ ಹೊರಲಾರದೆ ನಿಧಾನವಾಗಿ ನಡೆದರು. ಇಷ್ಟು ಭಾರ ಹೊತ್ತುಕೊಂಡು ಹೋಗಬೇಕಾದ ಜಾಗಕ್ಕೆ ಹೋಗುವುದು ಹೇಗೆ? ಎಂದು ಪ್ರಲಾಪಿಸುತ್ತಾ ಹೋದರು. ಇವರು ಯಾರನ್ನೂ ವಿಚಾರಿಸಲಿಲ್ಲ ಮತ್ತು ಯಾರಿಗೂ ಸಹಾಯ ಮಾಡಲಿಲ್ಲ. ತನಗೆ ಏನು ಪ್ರಯೋಜನವಾಗುತ್ತದೆ ಎಂದು ಮಾತ್ರ ಯೋಚಿಸಿದರು. 

 

ಪ್ರೀತಿಯ ತಮ್ಮ-ತಂಗಿ, ಸ್ವಾರ್ಥ ಜೀವನ, ಲೌಕಿಕ ಹೊರೆಯ ಜೀವನ! ಪಾಪ ಮತ್ತು ಚಿಂತೆಯಂತಹ ಈ ಪ್ರಾಪಂಚಿಕ ಹೊರೆಗಳನ್ನು ಹೊತ್ತುಕೊಂಡು ನೀವು ಪರಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಯೇಸುವಿನ ಮೇಲೆ ನಿಮ್ಮ ಎಲ್ಲಾ ಹೊರೆಗಳನ್ನು ಹಾಕಿಬಿಟ್ಟು ಮತ್ತೊಬ್ಬರನ್ನು ಪ್ರೀತಿಸಿ, ಸಹಾಯ ಮಾಡಿ ಯೇಸಪ್ಪನ ಮಕ್ಕಳಂತೆ ಬದುಕಿದರೆ, ನೀವು ಪರಲೋಕ ದೇಶಕ್ಕೆ ಹೋಗಿ ಸೇರಬಹುದು. Ok!

 - Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel