By Village Missionary Movement
Tuesday, 04-Oct-2022ಧೈನಂದಿನ ಧ್ಯಾನ(Kannada) – 04.10.2022
ಯಾರೊಂದಿಗೆ ನಮಗೆ ಹೋರಾಟ?
"ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ" - ಎಫೆ.6:12
ಇತ್ತೀಚಿನ ದಿನಗಳಲ್ಲಿ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡುತ್ತಿರುವ ಮತ್ತು ಕೇಳುತ್ತಿರುವ ಮಾತುಗಳು:- ಗಲಭೆ, ಹಿಂಸೆ, ಹೋರಾಟ, ಅನ್ಯಾಯ. ಸಮಾಜದಲ್ಲಿ ಅನ್ಯಾಯವಾದಾಗ ಅದರ ವಿರುದ್ಧ ಜನರ ಗುಂಪು ಎದ್ದು ಹೋರಾಟ ನಡೆಸುತ್ತಿದ್ದಾರೆ. ಕ್ರಿಸ್ತನನ್ನು ತಿಳಿದಿರುವ ಆತನ ಮಕ್ಕಳಾದ ನಾವು ಸಹ ಆಧ್ಯಾತ್ಮಿಕ ಹೋರಾಟಗಳನ್ನು ಹೊಂದಿದ್ದೇವೆ. ಆದರೆ ನಾವು ಯುದ್ಧಭೂಮಿಯಲ್ಲಿ ಭೇಟಿಮಾಡ ಬೇಕಾಗಿರುವುದು ನಮ್ಮೊಂದಿಗಿರುವ ಮನುಷ್ಯರನ್ನಾ? ಇಲ್ಲ, ನಮಗೆ ವಿರೋಧವಾಗಿ ಹೋರಾಡುತ್ತಿರುವ ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. ಈ ಆತ್ಮಗಳಿಗೆ ವಿರೋಧವಾದ ಹೋರಾಟಗಳನ್ನು ನಾವು ಹೇಗೆ ಎದುರಿಸಬಹುದು? ಎಂದು ನೀವು ಕೇಳಬಹುದು. ದೇವರು ನಮಗಾಗಿ ಒಂದು ಮಾರ್ಗವನ್ನು ಸಿದ್ಧಮಾಡಿದ್ದಾರೆ. ಇದನ್ನು ಎಫೆಸ 6:11 ರಲ್ಲಿ ಕಾಣಬಹುದು. ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ನಾವು ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು.
ಸರ್ವಾಯುಧವರ್ಗ (armor of god) ಯಾವುದೆಂದರೆ "ಸತ್ಯ" ಎಂಬ ನಡುಕಟ್ಟು "ನೀತಿ" ಎಂಬ ವಜ್ರಕವಚ, ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ "ಸಿದ್ಧ" ಮನಸ್ಸೆಂಬ ಕೆರಗಳು, "ರಕ್ಷಣೆ" ಎಂಬ ಶಿರಸ್ತ್ರಾಣ, "ದೇವರ ವಾಕ್ಯ" ಎಂಬ ಕತ್ತಿಯಾಗಿರುವ ಇವುಗಳೇ. ಈ ಆಯುಧಗಳನ್ನು ಧರಿಸಿ ನಾವು ಆಧ್ಯಾತ್ಮಿಕ ಯುದ್ಧಗಳಲ್ಲಿ ಹೋರಾಡಿ ಗೆಲ್ಲಬೇಕೆಂದು ದೇವರು ನಿರೀಕ್ಷಿಸುತ್ತಾರೆ. ಅದಕ್ಕಾಗಿಯೇ ನಮ್ಮನ್ನು ಕರೆದಿದ್ದಾರೆ. ನಾವು ಅನೇಕ ರೀತಿಯ ಆತ್ಮಗಳೊಂದಿಗೆ ಹೋರಾಟವನ್ನು ಹೊಂದಿದ್ದೇವೆ. ಯೇಸುಕ್ರಿಸ್ತನು, ಸೈತಾನನನ್ನು ದೇವರ ವಾಕ್ಯಗಳ ಮೂಲಕ ಸೋಲಿಸಿದಂತೆಯೇ, ನಾವು ಸಹ ದೇವರ ವಾಕ್ಯವಾಗಿರುವ ಆತ್ಮದ ಕತ್ತಿಯನ್ನು ಕೈಯಲ್ಲಿ ತೆಗೆದುಕೊಂಡು, ಸೈತಾನನನ್ನು ಅಟ್ಟಾಡಿಸಿ ಓಡಿಸಬೇಕು.
ಪೋಟೀಫರನ ಹೆಂಡತಿಯನ್ನು ಹಿಡಿದಿದ್ದ ವ್ಯಭಿಚಾರದ ದುರಾತ್ಮವು, ಯೋಸೇಫನನ್ನು ಸ್ವಾಧೀನಪಡಿಸಿಕೊಳ್ಳಲು ಯೋಚಿಸಿ ಹೋರಾಡಿದಾಗ, "ದೇವರಿಗೆ ವಿರುದ್ಧವಾಗಿ ಪಾಪ ಮಾಡುವುದು ಹೇಗೆ" ಎಂದು ಓಡಿಹೋಗಲಿಲ್ಲವೇ? ಭೌತಿಕವಾದ ಆಸೆಯ ದುರಾತ್ಮದ ಪ್ರೇರಣೆಯಿಂದ, ಅನನಿಯಾ ಮತ್ತು ಸಫೈರಳು ಇಬ್ಬರೂ ಸುಳ್ಳು ಹೇಳಿ, ಆತ್ಮದ ಹೋರಾಟದಲ್ಲಿ ಸೋಲನ್ನನುಭವಿಸಿ ಸತ್ತುಹೋದರೇ. ಇವೆಲ್ಲಾ ನಮಗೆ ಎಚ್ಚರಿಕೆಯ ಸಂದೇಶವಾಗಿ ನೀಡಲಾಗಿದೆ.
ನಮ್ಮ ಹೋರಾಟ ಎಂಥಾ ಆತ್ಮಗಳೊಂದಿಗಿದೆ? ಅನ್ವೇಷಿಸಿ, ಯುದ್ಧಕ್ಕೆ ಸಿದ್ಧರಾಗೋಣ. ನಾವು ಹೋರಾಟವನ್ನು ಗೆದ್ದು ಪರಲೋಕದ ಭಾಗ್ಯವನ್ನು ಕಂಡುಕೊಳ್ಳೋಣ.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಪ್ರತಿದಿನ ಬೆಳಿಗ್ಗೆ 5:00 ಗಂಟೆಗೆ ಯು ಟ್ಯೂಬ್‌ನಲ್ಲಿ ಪ್ರಸಾರ ಮಾಡುವ ಒಡಂಬಡಿಕೆ ಆರಾಧನೆಯ ಮೂಲಕ ಅನೇಕರು ಆಶೀರ್ವದಿಸಲ್ಪಡಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482