Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.10.2022 (Kids Special)
Share:

By Village Missionary Movement

Sunday, 02-Oct-2022

ಧೈನಂದಿನ ಧ್ಯಾನ(Kannada) – 02.10.2022 (Kids Special)

 

ಎಲ್ಲಾ ಒಳ್ಳೇದಕ್ಕೆ

 

 "...ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತದೆ..." - ರೋಮಾ 8:28

 

Hello ಪುಟಾಣಿಗಳೇ ಹೇಗಿದ್ದೀರ? ಚೆನ್ನಾಗಿದ್ದೀರ ಪುಟಾಣಿಗಳೇ, ನೀವೆಲ್ಲರೂ ಕೃಷಿ ಕೆಲಸ, ಕಟ್ಟಡ ಕೆಲಸ, ಪೈಂಟಿಂಗ್ ಕೆಲಸ ಮತ್ತು ಕೂಲಿ ಕೆಲಸ ಮಾಡುವವರನ್ನು ಸಾಕಷ್ಟು ನೋಡಿರುತ್ತೀರ, ಆದರೆ ಸೌದೆಯನ್ನು ಕತ್ತರಿಸಿ ವ್ಯಾಪಾರ ಮಾಡುವವರನ್ನು ನೋಡಿದ್ದೀರಾ! ಈಗ ನಾವು ಅವರ ಬಗ್ಗೆಯೇ ನೋಡಲಿದ್ದೇವೆ.

 

ದಿನೇಶ್ ಮತ್ತು ಗೋಪಿ ಎಂಬ ಇಬ್ಬರು ಅಣ್ಣಂದಿರು ಇದ್ದರು. ಇವರಿಬ್ಬರೂ ಮರ ಕಡಿಯುವ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದರು. ಇಬ್ಬರಿಗೂ ಯೇಸುವಿನ ಪರಿಚಯವಿತ್ತು. ಆದರೆ ಸಣ್ಣಪುಟ್ಟ ಲಾಭಗಳಿಗೆ ದಿನೇಶ್ ಅಣ್ಣ ಯೇಸಪ್ಪನಿಗೆ ಧನ್ಯವಾದ ಹೇಳುತ್ತಲೇ ಇದ್ದರು. ಆದರೆ ಗೋಪಿ ಅಣ್ಣ ಯೇಸಪ್ಪ ಎಷ್ಟೇ ಒಳ್ಳೇದನ್ನು ಮಾಡಿದರೂ ಕೊರತೆ ಹೇಳುತ್ತಾ, ಗೊಣಗುತ್ತಲೇ ಇರುತ್ತಿದ್ದರು. ಇಬ್ಬರೂ ಬೆಳಿಗ್ಗೆ ಕಾಡಿಗೆ ಹೋದರೆ ರಾತ್ರಿ ಮನೆಗೆ ಬರುತ್ತಿದ್ದರು.

 

ಒಂದು ದಿನ ಬೆಳಗ್ಗೆ ಎಂದಿನಂತೆ ಮರ ಕಡಿಯಲು ಕಾಡಿಗೆ ಹೋದರು. ಅಲ್ಲಿ ಅವರಿಗೆ ದೊಡ್ಡ ಆಘಾತ ಕಾದಿತ್ತು. ಇಡೀ ಕಾಡಿಗೆ ಬೆಂಕಿ ಬಿದ್ದಿತ್ತು. ಇದನ್ನು ನೋಡಿದ ಗೋಪಿ ಅಣ್ಣ ಸಿಟ್ಟಿನಿಂದ ಎದ್ದ. "ಈ ದೇವರು ನಮ್ಮನ್ನು ಎಂದಿಗೂ ಶಾಂತಿಯಿಂದ ಬದುಕಲು ಬಿಡುವುದಿಲ್ಲ. ಈ ಕಾಡನ್ನು ಮತ್ತು ಮರಗಳನ್ನು ನಂಬಿದರೆ ನಾವು ಮತ್ತು ನಮ್ಮ ಕುಟುಂಬ ಬೀದಿಯಲ್ಲಿ ನಿಲ್ಲಬೇಕಾಗುತ್ತದೆ" ಎಂದು ಹೇಳಿಬಿಟ್ಟು ಬೇರೆ ಊರಿಗೆ ಹೊರಟು ಹೋದರು. ದಿನೇಶ್ ಹತಾಶನಾಗಿ ಮನೆಗೆ ಬಂದು ಮಂಡಿಯೂರಿ ಕುಳಿತು ಕಣ್ಣೀರು ಹಾಕುತ್ತಾ ಯೇಸುವನ್ನು ನೋಡಿದರು. “ಯೇಸಪ್ಪಾ, ನೀವು ನನ್ನ ಜೀವನದಲ್ಲಿ ಏನೇ ಮಾಡಿದರೂ ಒಳ್ಳೆಯದಕ್ಕಾಗಿ ಮಾಡುತ್ತೀರ. ಈಗ ಕಾಡಿನಲ್ಲಿ ಎಲ್ಲ ಮರಗಳಿಗೂ ಬೆಂಕಿ ಬಿದ್ದಿದೆ, ನಾನೇನು ಮಾಡಲಿ?” ಎಂದು ಕೇಳಿದರು. ಕೂಡಲೇ ದೇವರು “ನೀನು ಹೋಗಿ ಆ ಕಾಡಿನಲ್ಲಿ ಉರಿಯುತ್ತಿರುವ ಇದ್ದಿಲನ್ನು ತೆಗೆದುಕೊಂಡು ಹೋಗಿ ವ್ಯಾಪಾರ ಮಾಡು” ಎಂದು ಆತನ ಹೃದಯದಲ್ಲಿ ಮಾತನಾಡಿದರು. ಅವರೂ ಸಹ ಸಂತೋಷದಿಂದ ದೇವರು ಹೇಳಿದಂತೆಯೇ ಮಾಡಿದರು. ಇದ್ದಿಲು ಸೌದೆಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಯಿತು. ದೇವರು ದಿನೇಶ್ ಅಣ್ಣನನ್ನು ಆಶೀರ್ವಾದ ಮಾಡಲು ಪ್ರಾರಂಭಿಸಿದರು. ಸ್ವಂತ ಅಂಗಡಿ ಆರಂಭಿಸಿ ಮಾಲೀಕನಾದರು. ಅವರ ಜೀವನವೇ ಬದಲಾಯಿತು.

 

ಪುಟ್ಟ ತಮ್ಮ, ತಂಗಿ ನೋಡುದ್ರಾ, ಆತುರದಿಂದ ನಿರ್ಧಾರ ಮಾಡಿದ್ರೆ ಈ ಅಣ್ಣನ ಜೀವನ ಹೇಗೋ ಹೋಗುತ್ತಿತ್ತು. ಕಷ್ಟಪಟ್ಟು ಮರ ಕುಡಿಯುತ್ತಿದ್ದ ಅಣ್ಣನಿಗೆ, ಕಷ್ಟವಿಲ್ಲದ ಸುಲಭವಾದ ಕೆಲಸವನ್ನು ಯೇಸಪ್ಪ ಕೊಟ್ಟಿದ್ದನ್ನು ನೋಡುದ್ರಾ? "ಯೇಸಪ್ಪ ಯಾವಾಗಲೂ ಒಳ್ಳೆಯದಕ್ಕಾಗಿ ಏನನ್ನಾದರೂ ಮಾಡುತ್ತಾರೆ, ನಾವು ಆತುರಪಟ್ಟು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು ಮತ್ತು ಯೇಸಪ್ಪನ ಆಶೀರ್ವಾದವನ್ನು ಕಳೆದುಕೊಳ್ಳಬಾರದು". Ok ನಾ? 

- Mrs. ಸಾರಾ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al