Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.02.2021
Share:

By Village Missionary Movement

Friday, 12-Feb-2021

ಧೈನಂದಿನ ಧ್ಯಾನ(Kannada) – 12.02.2021

ನಮ್ಮನ್ನು ನಿರ್ವಹಿಸುವುದು ಯಾವುದು

"ದೇವರ ವಾಕ್ಯವು ಪ್ರಬಲವಾಯಿತು;..." - ಅಪೊಸ್ತಲ 6:7

ಒಂದು ಗ್ರಾಮದಲ್ಲಿ ವಯಸ್ಸಾದ ದಂಪತಿಗಳಿಗೆ 9 ಎಕರೆ ಸ್ಥಳವಿತ್ತು. ಆ ಸ್ಥಳದಲ್ಲಿ ಹಲವು ವಿಧವಾದ ಬೆಳೆಗಳನ್ನು ನೆಟ್ಟಿದ್ದರು. ಅದಕ್ಕೆ ಬೇಕಾದಷ್ಟು ಮಳೆ ಇಲ್ಲದ್ದರಿಂದ ಬಾವಿಯಲ್ಲಿ ಇದ್ದ ನೀರೆಲ್ಲಾ ಬತ್ತಿಹೋಗಿ ಬರಿ ಬಂಡೆಗಳು ಮಾತ್ರ ಕಾಣುತ್ತಿದ್ದವು. ಬೆಳೆಗಳೆಲ್ಲಾ ಬಾಡಿ ಹೋಗಲು ಪ್ರಾರಂಭಿಸಿತು. ಆ ಸಮಯದಲ್ಲಿ ಕರ್ತನನ್ನು ನೋಡಿ ಅವರು ಪ್ರಾರ್ಥಿಸಲು ಪ್ರಾರಂಭಿಸಿದರು. ಒಂದು ದಿನ ಸತ್ಯವೇದದ ವಾಕ್ಯಗಳನ್ನು ಓದುತ್ತಿದ್ದಾಗ  "ಆತನು ಬಂಡೆಯನ್ನು ಕೆರೆಯನ್ನಾಗಿಯೂ ಶಿಲೆಯನ್ನು ಬುಗ್ಗೆಯನ್ನಾಗಿಯೂ ಮಾರ್ಪಡಿಸುತ್ತಾನೆ.(ಕೀರ್ತನೆ 114:8) ಎಂಬ ಒಂದು ಸತ್ಯವೇದದ ವಾಕ್ಯವು ಅವರೊಂದಿಗೆ ಮಾತಾಡಿತು. ಆ ಸತ್ಯವೇದದ ವಾಕ್ಯವನ್ನು, ಹಾಗೆಯೇ ನಂಬಿ ಅಂದು ರಾತ್ರಿಯೇ ಆ ವಾಕ್ಯವನ್ನು ಹೇಳಿ ಪ್ರಾರ್ಥಿಸಲು ಪ್ರಾರಂಭಿಸಿದರು. ದೇವರೇ, ಬರೀ ಬಂಡೆಯಾಗಿರುವ ನಮ್ಮ ಬಾವಿಯನ್ನು ನೀವು ವಾಗ್ಧಾನ ಕೊಟ್ಟಿರುವ ಪ್ರಕಾರ ಶಿಲೆಯಾಗಿ ಮಾರ್ಪಡಿಸು ಎಂದು ನಂಬಿಕೆಯಿಂದ  ಪ್ರಾರ್ಥಿಸಿದರು. ತಮ್ಮ ಪ್ರಾರ್ಥನೆಗೆ ಕರ್ತನು ಉತ್ತರವನ್ನು ಕೊಟ್ಟುಬಿಟ್ಟರು ಎಂಬ ನಂಬಿಕೆಯು ಅವರ ಹೃದಯದಲ್ಲಿ ಬರುವವರೆಗೂ ಪ್ರಾರ್ಥಿಸಿದರು. ಬೆಳಿಗ್ಗೆ ಎದ್ದು ತಮ್ಮ ಹೊಲಕ್ಕೆ ಹೋಗಿ ಆ ಬಾವಿಯನ್ನು ನೋಡಿದಾಗ ಬರೀ ಬಂಡೆಯಾಗಿದ್ದ ಆ ಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿತ್ತು, ಆ ಬಾವಿ ನೀರಿನಿಂದ ತುಂಬಿರುವುದನ್ನು ನೋಡಿ ಕರ್ತನನ್ನು ಸ್ತುತಿಸಿದರು. ಆ ಭಾಗದಲ್ಲಿರುವ ಎಲ್ಲ ಬಾವಿಗಳು ಬತ್ತಿ ಹೋಗಿದ್ದರೂ ಅವರ ಬಾವಿಯಲ್ಲಿ ಮಾತ್ರ 9 ಎಕರೆ ಜಾಗದಲ್ಲಿ ನೆಟ್ಟಿದ್ದ ಬೆಳೆಗಳಿಗೆ ಬೇಕಾದಷ್ಟು ನೀರನ್ನು ಕರ್ತನು ಕೊಟ್ಟರು!

ಅಬ್ರಹಾಮನು ಅವರ ಹೆಂಡತಿ ಸಾರಳು ವಯಸ್ಸು ಮೀರಿ ಮುದುಕರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಆದರೂ ಅಬ್ರಹಾಮನು "ನಿನ್ನ ಸಂತತಿಯನ್ನು ಭೂಮಿಯ ಧೂಳಿನ ಹಾಗೆ ಹೆಚ್ಚಿಸುತ್ತೇನೆ,"ಎಂದು ತನ್ನೊಂದಿಗೆ ಮಾತನಾಡಿದ ಕರ್ತನ ಮಾತುಗಳ ಮೇಲೆ ನಂಬಿಕೆ ಇಟ್ಟರು. ತನ್ನ 100 ನೇ ವಯಸ್ಸಿನಲ್ಲಿ ಇಸಾಕನನ್ನು ಹೆತ್ತಳು.

ಪ್ರಿಯರೇ! ನಮ್ಮ ಜೀವನದಲ್ಲಿಯೂ ಕೂಡ ಅನೇಕ ಸತ್ಯವೇದ ವಾಕ್ಯಗಳ ಮೂಲಕ ಕರ್ತನು ಮಾತನಾಡುತ್ತಾರೆ. ನಾವು ವಾಕ್ಯವನ್ನು ಹಿಡಿದುಕೊಂಡು ಪ್ರಾರ್ಥಿಸುತ್ತೇವಾ? ನಮ್ಮನ್ನು ಅಧಿಕವಾಗಿ ಕದಲಿಸುವುದು ಕಠಿಣವಾದ ಪರಿಸ್ಥಿತಿಯಾ, ಅಥವಾ ಕರ್ತನ ಮಾತುಗಳಾ? ವಾಕ್ಯವನ್ನು ನಂಬಿದರೆ ಜಯವೇ! ಒಂದು ಬೀಜ ಬಿತ್ತಿದರೇನೆ ಅದು ಬೆಳೆದು ಫಲ ಕೊಡಲು ಸಾಧ್ಯ. ಅದರಂತೆಯೇ ನಮ್ಮ ಜೀವನದಲ್ಲಿಯೂ ವಾಕ್ಯವನ್ನು ಕೇಳಿಬಿಟ್ಟು ಹೋಗುವವರಾಗಲ್ಲ,ಸತ್ಯವೇದ ವಾಕ್ಯಗಳು ನಮ್ಮೊಳಗೆ ಬಿತ್ತಲ್ಪಟ್ಟು ಅದು ಬೇರೂರಿ, ಅಭಿವೃದ್ಧಿಯಾಗುವಾಗ ನಾವು ಪರಿಸ್ಥಿತಿಗಳನ್ನು ಎದುರಿಸಿ ಜಯ ಹೊಂದುವವರಾಗಿ ಕಾಣಲ್ಪಡುತ್ತೇವೆ.
-    Mrs. ವಸಂತಿ ರಾಜಮೋಹನ್

ಪ್ರಾರ್ಥನಾ ಅಂಶ:-
ನಂಬಿಕೆ ಟಿ.ವಿ.ಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಒಂದು program ಗೆ ರೂ.4500 ನ್ನು ಕೊಟ್ಟು ಪ್ರೋತ್ಸಾಹಿಸುವ ಕುಟುಂಬಗಳು ಎದ್ದೇಳುವಂತೆ  ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş