Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.09.2022
Share:

By Village Missionary Movement

Thursday, 29-Sep-2022

ಧೈನಂದಿನ ಧ್ಯಾನ(Kannada) – 30.09.2022

 

ಬಲಾತ್ಕಾರ

 

“...ಪರಲೋಕರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ; ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನ ಮಾಡಿಕೊಳ್ಳುತ್ತಾರೆ” - ಮತ್ತಾಯ 11:12

 

ನಮ್ಮ ದೇಶ ದಾಸತ್ವದ ಬಂಧನದಲ್ಲಿ ಇದ್ದಾಗ, ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರಾದ ಗಾಂಧೀಜಿ, ನೆಹರೂ, ರಾಜಾಜಿ ಮುಂತಾದವರು ಪ್ರತಿಭಟನೆಗಳು, ಉಪವಾಸಗಳು ಮತ್ತು ಅಹಿಂಸಾತ್ಮಕ ವಿಧಾನಗಳನ್ನು ಉಪಯೋಗಿಸಿ ಬಲವಂತವಾಗಿ ಬಿಡುಗಡೆ ಹೊಂದಿದರು.

 

ಕರ್ತನಾದ ಯೇಸು ಕ್ರಿಸ್ತನು ಯೆರಿಕೋವಿನಿಂದ ಬರುತ್ತಿರುವುದನ್ನು ಕುರುಡ ಬಾರ್ತಿಮಾಯನು ತಿಳಿದುಕೊಂಡು, "ದಾವೀದನ ಕುಮಾರನೇ, ನನ್ನನ್ನು ಕರುಣಿಸು" ಎಂದು ಕೂಗಿದನು ಮತ್ತು ಶಿಷ್ಯರು ಅವನನ್ನು ಗದರಿಸಿದರು. ಆದರೆ ಅವನು ಇನ್ನೂ ಶಬ್ದವಾಗಿ "ದಾವೀದನ ಕುಮಾರನೇ ನನ್ನನ್ನು ಕರುಣಿಸು" ಎಂದು ಮೊದಲಿಗಿಂತ ಹೆಚ್ಚಾಗಿ ಬಲವಂತ ಮಾಡಿ ದೃಷ್ಟಿ ಹೊಂದಿದನು.

 

ಥಾಮಸ್ ಆಲ್ವಾ ಎಡಿಸನ್ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಅವರು ವಿದ್ಯುತ್ ಕಂಡುಹಿಡಿಯಲು 999 ಬಾರಿ ಪ್ರಯತ್ನಿಸಿ ವಿಫಲರಾದರು. ಆದರೆ 1,000ನೇ ಬಾರಿಗೆ ಬಲವಂತದಿಂದ ವಿದ್ಯುತ್ ಕಂಡುಹಿಡಿದು ಯಶಸ್ವಿಯಾದರು. ಅವರು ಪ್ರಾರ್ಥನಾಶೀಲ ವ್ಯಕ್ತಿಯಾಗಿದ್ದರು ಎಂಬುದು ಗಮನಾರ್ಹ.

 

ಒಬ್ಬ ವಿಧವೆ ತನಗೆ ನ್ಯಾಯ ಕೊಡಿಸುವಂತೆ ಆ ಊರಿನ ನ್ಯಾಯಾಧೀಶರಲ್ಲಿ ಪದೇ ಪದೇ ವಿಜ್ಞಾಪನೆ ಮಾಡುತ್ತಲೇ ಇದ್ದಳು. ಆಕೆ ನನಗೆ ಆಗಾಗ ತೊಂದರೆ ಕೊಡದಿರಲಿ ಎಂದುಕೊಂಡು ಆ ನ್ಯಾಯಾಧೀಶರು ನ್ಯಾಯ ಮಾಡಿದರು. ವಿಧವೆ ಅನ್ಯಾಯದ ನ್ಯಾಯಾಧೀಶರನ್ನು ನ್ಯಾಯಕ್ಕಾಗಿ ಒತ್ತಾಯಿಸಿ ನ್ಯಾಯ ಮಾಡುವಂತೆ ಮಾಡಿದಳು. (ಲೂಕ 18: 4-8) ಹೀಗಿರುವಾಗ, ನೀತಿವಂತ ನ್ಯಾಯಾಧೀಶನಾದ ಕರ್ತನಾದ ಯೇಸು ಕ್ರಿಸ್ತನು ನಮ್ಮ ವಿನಂತಿಗಳಿಗೆ ಕಿವಿಗೊಡದಿರುವುದು ಹೇಗೆ?

 

ಈ ಜಗತ್ತಿನಲ್ಲಿ ನಮಗೆ ನಿಯೋಜಿಸಲಾದ ಹಾದಿಯಲ್ಲಿ ತಾಳ್ಮೆ ಮತ್ತು ನಂಬಿಕೆಯಿಂದ ನಡೆಯೋಣ ಮತ್ತು ದೇವರಿಗೆ ಮೆಚ್ಚಿಕೆಯಾಗಿ ನಡೆದು ಪರಲೋಕ ರಾಜ್ಯವನ್ನು ಬಲದಿಂದ ಹಿಡಿಯೋಣ. ಸತ್ಯವೇದದಲ್ಲಿ ಬಲಾತ್ಕಾರದ ಇಂತಹ ಅನೇಕ ಉದಾಹರಣೆಗಳಿವೆ. ಇದನ್ನು ಓದುತ್ತಿರುವ ನಾವು ಅನೇಕ ವಿಷಯಗಳಿಗಾಗಿ ಶ್ರಮಿಸುತ್ತಿದ್ದೇವೆ. ಅವುಗಳಲ್ಲಿ ಹೆಚ್ಚಿನವು ಲೌಕಿಕ ವಸ್ತುಗಳು ಅಥವಾ ಲೌಕಿಕ ಮನುಷ್ಯರು ಮಾಡುವಂತಹ ಬಲವಂತಗಳಾಗಿವೆ. ಆದರೆ ಸತ್ಯವೇದದಲ್ಲಿ, ಕರ್ತನಾದ ಯೇಸು ಕ್ರಿಸ್ತನು ನಮಗೆ ಒಂದು ವಿಷಯದ ಬಗ್ಗೆ ಬಲವಾಗಿರಲು ಹೇಳುತ್ತಾರೆ. ಅದು ಪರಲೋಕದ ರಾಜ್ಯವಾಗಿದೆ. ಆದ್ದರಿಂದ ನಾವು ಬಲದಿಂದ ಪರಲೋಕ ರಾಜ್ಯವನ್ನು ಸ್ವಂತಂತ್ರಿಸಿಕೊಳ್ಳೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

"ಕಣ್ಮಣಿಯೇ ಕೇಳ್" ಎಂಬ ಪುಸ್ತಕ ಮತ್ತು ನಂಬಿಕೈ ಟಿವಿಯಲ್ಲಿ ಪ್ರತಿ ಭಾನುವಾರ ಸಂಜೆ 6:00 ರಿಂದ 6:30 ರವರೆಗೆ ಪ್ರಸಾರವಾಗುವ ವಿಶೇಷ ಕಾರ್ಯಕ್ರಮಗಳ ಮೂಲಕ, ಯೌವನಸ್ಥ ಹುಡುಗಿಯರಲ್ಲಿ ಕರ್ತನು ಉಜ್ಜೀವನವನ್ನು ಅನುಗ್ರಹಿಸುವಂತೆ ದೇವರನ್ನು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al