By Village Missionary Movement
Wednesday, 28-Sep-2022ಧೈನಂದಿನ ಧ್ಯಾನ(Kannada) – 28.09.2022
ಕರೆಯುವಿಕೆಯ ಧ್ವನಿಯನ್ನು ಕೇಳು, ಓ ಯೆರೂಸಲೇಮ್!
"ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು" - ಕೀರ್ತನೆ 91:1
ಜಾನ್ ಬನ್ಯಾನ್ ಅವರ ಮೋಕ್ಷ ಪ್ರಯಾಣ ಪುಸ್ತಕದಲ್ಲಿ, ನಿರೂಪಕರು ಕ್ರಿಸ್ಟಿಯಾನೋ ಎಂಬವರನ್ನು ಮತ್ತು ಅವನ ಮಕ್ಕಳನ್ನು ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸಲು ಹೇಳುತ್ತಾರೆ. ಅಲ್ಲಿ ಕೋಳಿ ತನ್ನ ಮರಿಗಳೊಂದಿಗೆ ಆಹಾರ ಮೇಯುತ್ತಿರುವುದನ್ನು ಕಂಡರು. ಅವುಗಳಲ್ಲಿ ಒಂದು ಮರಿ ನೀರು ಕುಡಿಯಲು ನೀರಿನ ಬಟ್ಟಲ ಹತ್ತಿರ ಹೋಗಿ ಪ್ರತಿ ಬಾರಿ ನೀರು ಕುಡಿಯುವಾಗ ಅದು ತಲೆಯೆತ್ತಿ ಆಕಾಶದತ್ತ ನೇರವಾಗಿ ನೋಡುತ್ತಿತ್ತು. ನಿರೂಪಕ ಹೇಳುತ್ತಾರೆ, “ಈ ಕೋಳಿಮರಿ ಏನು ಮಾಡುತ್ತಿದೆ ಎಂದು ನೀವು ನೋಡುದ್ರಾ? ತಾನು ಕುಡಿಯುವ ನೀರಿಗಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ಪರಲೋಕದ ತಂದೆಗೆ ಕೃತಜ್ಞತೆಯನ್ನು ಹೇಳುವುದನ್ನು ನೀವು ಗಮನಿಸುದ್ರಾ? ” ಎಂದು ಹೇಳಿದರು. ಎಲ್ಲರೂ ಆಶ್ಚರ್ಯಪಟ್ಟು ಕರ್ತನು ಸೃಷ್ಟಿಸಿದ ಎಲ್ಲಾ ಜೀವಿಗಳೂ ಕರ್ತನನ್ನು ಸ್ತುತಿಸುವುದನ್ನು ನೋಡಿ, ಅವರೂ ಕರ್ತನನ್ನು
ಸ್ತುತಿಸಿದರು. ಅಲ್ಲದೆ, ಅವರು ಕೋಳಿಯಿಂದ ನಾಲ್ಕು ವಿಧವಾದ ಕರೆಯುವಿಕೆಯ ಶಬ್ದವನ್ನು ತಿಳಿದುಕೊಂಡರು.
1. ಬೆಳಕು ಕಡಿಮೆಯಾಗಿರುವ ಸಮಯದಲ್ಲೂ ಮತ್ತು ದಾರಿ ಕಾಣದಿರುವ ಸಮಯದಲ್ಲೂ ಅದರ ಮರಿಗಳಿಗೆ ನೀಡುವ ಸಾಮಾನ್ಯ ಕರೆ.
2. ಬೇಟೆಯ ಸ್ಥಳವನ್ನು ತೋರಿಸಲು ಮತ್ತು ಆಹಾರ ಕೊಡಲು ಮಾಡುವಂತಹ ವಿಶೇಷ ಕರೆ.
3. ಶತ್ರು ಸಮೀಪಿಸಿದಾಗ ಮತ್ತು ಅಪಾಯ ಹತ್ತಿರವಾದಾಗ ಕರೆಯುವಂತಹ ಎಚ್ಚರಿಕೆಯ ಕರೆ.
4. ಅಪ್ಪುಗೆಗೆ ಕರೆಯುವ ಪ್ರೀತಿಯ ಮೃದುವಾದ ಕರೆ.
ಈ ನಾಲ್ಕು ವಿಧವಾದ ಆವಾಹನೆಗಳ ಬುದ್ಧಿವಂತಿಕೆಯ ಅರ್ಥವನ್ನು ವ್ಯಾಖ್ಯಾನಕಾರರು ವಿವರಿಸಿದರು. ಕರ್ತನು ಕತ್ತಲೆಯಲ್ಲಿದ್ದ ಜನರಿಗೆ, “ನಾನೇ ನಿನ್ನೊಂದಿಗಿದ್ದೇನೆ" (ಯೆಶಾಯ 41:10) ಎಂದು ಹೇಳಿ ನಮಗೆ ವಾಗ್ದಾನ ಕೊಟ್ಟಿದ್ದಾರೆ. ಜೀವನೋಪಾಯದಿಂದ ಪ್ರಾರಂಭವಾಗಿ ಪರಲೋಕ ಆಶೀರ್ವಾದದವರೆಗೆ ಎಲ್ಲವನ್ನೂ ಹುಡುಕುವವರಿಗೆ, "ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು" (ಮತ್ತಾಯ 7:7) ಎನ್ನುತ್ತಾರೆ. ಶತ್ರುವು ಪ್ರವಾಹದಂತೆ ಬರುತ್ತಿರುವಾಗಲೂ, "ಸೈತಾನನನ್ನು ಎದುರಿಸಿರಿ" (ಯಾಕೋಬ 4:7) ಎಂದು ಎಚ್ಚರಿಕೆ ನೀಡಿ ಸಹಾಯಮಾಡಿ ಆಶ್ರಯವನ್ನು ನೀಡುತ್ತಾರೆ. ಅವರ ರೆಕ್ಕೆಗಳ ಕೆಳಗೆ ಸುರಕ್ಷಿತವಾಗಿರುತ್ತೀಯ ಎಂದು ಹೇಳಿ ಅಪ್ಪಿಕೊಳ್ಳುತ್ತಾರೆ (ಕೀರ್ತನೆ 91:4).
ಹೌದು, ಪ್ರಿಯರೇ, ಕೋಳಿ ತನ್ನ ಮರಿಗಳನ್ನು ಸೇರಿಸಿಕೊಳ್ಳುವಂತೆ ನಮ್ಮ ಪರಲೋಕದ ತಂದೆಯು ನಮ್ಮನ್ನು ಸೇರಿಸಿಕೊಳ್ಳಲು ಕರೆಯುವಿಕೆಯನ್ನು ಕೊಡುತ್ತಿದ್ದಾರೆ. ಕರೆಯನ್ನು ನಿರ್ಲಕ್ಷಿಸದೆ, ಯಾವುದೇ ಕಾರಣಗಳನ್ನು ಹೇಳದೇ, ತ್ವರಿತವಾಗಿ ಓಡಿಬಂದು ಕಾಯುವ ರೆಕ್ಕೆಗಳ ಕೆಳಗೆ ರಕ್ಷಣೆಯನ್ನು ಕಂಡುಕೊಳ್ಳೋಣ.
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಅನೇಕರು ಪೋಷಿಸಲ್ಪಡಲು; ದೇವರನ್ನು ತಿಳಿದುಕೊಳ್ಳಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482