By Village Missionary Movement
Monday, 26-Sep-2022ಧೈನಂದಿನ ಧ್ಯಾನ(Kannada) – 27.09.2022
ಕಹಿ ಬೇರು
"ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು" - ಯಾಕೋಬ 3:16
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮಡಿದ ಉಕ್ರೇನ್ ಯೋಧನ ಅಂತ್ಯಕ್ರಿಯೆಯ ವೇಳೆ ಎರಡೂ ದೇಶಗಳ ಸಭಾಪಾಲಕರು ಹೊಡೆದಾಡಿಕೊಂಡ ಘಟನೆ ಹಲವರನ್ನು ವ್ಯಥೆ ಪಡುವಂತೆ ಮಾಡಿತು. ಯುದ್ಧದಲ್ಲಿ ಮಡಿದ ಉಕ್ರೇನಿಯನ್ ಯೋಧ ಒಲೆಕ್ಸಾಂಡರ್ ಜಿನಿವ್ ಅವರ ಅಂತ್ಯಕ್ರಿಯೆಯು Tomashpil ಎಂಬ ಸ್ಥಳದಲ್ಲಿ ನಡೆಯಿತು. ಈ ಬಗ್ಗೆ ಮಾತನಾಡಿರುವ ಉಕ್ರೇನಿಯನ್ ಸಭಾಪಾಲಕರು, "ನಾವೆಲ್ಲರೂ ರಷ್ಯಾದ ಜನರನ್ನು ಮತ್ತು ಚರ್ಚ್‌ಗಳನ್ನು ತೊಲಗಿಸಬೇಕು" ಎಂದು ಮಾತನಾಡಿದರು . ಈ ಸಭೆಯಲ್ಲಿ ಕುಳಿತಿದ್ದ ರಷ್ಯಾದ ಮತ್ತೊಬ್ಬ ಸಭಾಪಾಲಕರು "ನೀವು ಹೀಗೆಲ್ಲಾ ಮಾತನಾಡಬಾರದು" ಎಂದು ಖಂಡಿಸಿದರು. ಒಂದು ಹಂತದಲ್ಲಿ ಅವರು ಅಲ್ಲಿದ್ದ ಶಿಲುಬೆಯನ್ನು ಎತ್ತಿಕೊಂಡು ಉಕ್ರೇನ್ ಬೋಧಕರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಇಬ್ಬರು ಬೋಧಕರ ನಡುವೆ ನಡೆದ ಗಲಾಟೆಯಲ್ಲಿ ಅಲ್ಲಿದ್ದ ಸೈನಿಕರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ಶಾಂತಿ ಬೋಧಿಸಬೇಕಾದ ಬೋಧಕರೇ ಜಗಳವಾಡುತ್ತಿರುವುದು ಅತ್ಯಂತ ನೋವಿನ ಸಂಗತಿ.
ಇಂದಿನ ವಾಕ್ಯಭಾಗದಲ್ಲಿ ಯಾಕೋಬನು ತನ್ನ ಪತ್ರಿಕೆಯಲ್ಲಿ ಕಹಿಯಾದ ಮತ್ಸರದ ಬಗ್ಗೆ ಬರೆಯುತ್ತಾರೆ. ಸಹ ಮನುಷ್ಯನ ಮೇಲೆ ದ್ವೇಷ! ಅದು ಕಹಿಯಾಗಿ ಮಾರ್ಪಟ್ಟು ಹೃದಯದಲ್ಲಿ ಅಡಗಿಕೊಳ್ಳುತ್ತದೆ. ಸಮಯ ಬಂದಾಗಲೆಲ್ಲಾ, ಆ ಕಹಿ ನಮ್ಮ ಕ್ರಿಯೆಗಳಲ್ಲಿ ಪ್ರಕಟವಾಗುತ್ತದೆ. ಇದು ಗಲಿಬಿಲಿಯೂ ಎಲ್ಲಾ ನೀಚ ಕೃತ್ಯಗಳಿಗೆ ಬೇರು ಎಂದು ಪವಿತ್ರಾತ್ಮನು ನಮಗೆ ಬರೆಯುತ್ತಿದ್ದಾರೆ.
ಕೆಲವರ ಮೇಲಿನ ಕಹಿ ನಮಗೆ ದೊಡ್ಡ ಪಾಪದಂತೆ ಕಾಣುವುದಿಲ್ಲ. ಅದೇ ಸಮಯದಲ್ಲಿ ಈ ಕಹಿ ಅನೇಕ ಜನರಿಗೆ ಮಾನಸಿಕ ಅಸ್ವಸ್ಥತೆಯನ್ನು ಮತ್ತು ಕೆಲವೊಮ್ಮೆ ದೈಹಿಕ ಅಸ್ವಸ್ಥತೆಯನ್ನು ತರುತ್ತದೆ. ಹೆಚ್ಚೆಂದರೆ "ಕೊಲೆಗಾರ"ನೆಂಬ ಪರಿಸ್ಥಿತಿಗೂ ಈ ಕಹಿ ಎಂಬ ಸ್ವಭಾವವು ಪ್ರತಿಯೊಬ್ಬ ಮನುಷ್ಯನನ್ನು ತಳ್ಳಿಬಿಡುತ್ತದೆ. ದಾವೀದನ ಮೇಲೆ ಎದ್ದ ಕಹಿಯು ಸೌಲನ ಜೀವನವನ್ನು ನಾಶಮಾಡಿತು. ಅಮ್ನೋನನ ದ್ವೇಷವು ಅಬ್ಷಾಲೋಮನ ಜೀವನವನ್ನು ಹಾಳುಮಾಡಿತು. ನಿಮಗೆ ಯಾರ ಮೇಲಾದರೂ ದ್ವೇಷವಿದ್ದರೆ ನೀವು ಎಚ್ಚರಿಕೆಯಿಂದ ಇರಬೇಕು. ಕಹಿಯ ಮೂಲ ಎಲ್ಲಿದೆ ಎಂದು ನಾವು ಯೋಚಿಸಿದರೆ, ಅದು ಮತ್ತೊಬ್ಬರನ್ನು ಕ್ಷಮಿಸಲು ಸಾಧ್ಯವಾಗದ ಕಾರ್ಯದಿಂದಲೇ ಪ್ರಾರಂಭವಾಗುತ್ತದೆ ಎಂದು ನಾವು ತಿಳಿದುಕೊಳ್ಳಬಹುದು. ಆದ್ದರಿಂದಲೇ ಅವರನ್ನು ಮನಸಾರೆ ಕ್ಷಮಿಸುವ ಹೃದಯವನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ. ದೇವರ ಮುಂದೆ ನಿಮ್ಮನ್ನು ತಗ್ಗಿಸಿಕೊಂಡು, ಪ್ರಾರ್ಥಿಸಿ ಮತ್ತು ಕಹಿ ತುಂಬಿದ ಭಾಗದಿಂದ ಹೊರಬಂದು ಸತ್ಯವೇದವು ಹೇಳುವ ದೈವಿಕ ಸ್ವಭಾವದಲ್ಲಿ ಜೀವಿಸಲು ಪ್ರಯಾಸಪಡೋಣ. ದೇವರು ನಮ್ಮನ್ನು ಮುನ್ನಡೆಸಲಿ.
- P.ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ದೇವರ ನಾಮದ ಮಹಿಮೆಗಾಗಿ ಉತ್ತರದ ರಾಜ್ಯಗಳಲ್ಲಿ ನಮ್ಮ ಸೇವೆಯ ಎಲ್ಲೆಗಳು ವಿಸ್ತರಿಸಲ್ಪಡಲು, ಹೊಸ ಕಾರ್ಯಕ್ಷೇತ್ರಗಳು ಪ್ರಾರಂಭಿಸಲು ಕರ್ತನು ದ್ವಾರಗಳನ್ನು ತೆರೆದು ಕೊಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482