Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.09.2022 (Youth Special)
Share:

By Village Missionary Movement

Sunday, 25-Sep-2022

ಧೈನಂದಿನ ಧ್ಯಾನ(Kannada) – 26.09.2022 (Youth Special)

 

ಶಬ್ಧವಿಲ್ಲದ ಸುವಾರ್ತೆ

 

"...ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" - ಫಿಲಿಪ್ಪಿ 4:19

 

ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರೀತಿಯ ಶುಭಾಶಯಗಳು! ಈ ವಿಶ್ವ ಕಿವುಡರ ದಿನದಂದು ನಿಮ್ಮೊಂದಿಗೆ ನನ್ನ ಸಾಕ್ಷ್ಯವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ, ಯೇಸುವಿಗೆ ಧನ್ಯವಾದಗಳು. ನಾನು ಹುಟ್ಟಿನಿಂದಲೇ ಕಿವುಡ ಮತ್ತು ಮೂಕನಾಗಿದ್ದೆ. ನನ್ನ ಕುಟುಂಬ ತುಂಬಾ ಬಡ ಕುಟುಂಬವಾಗಿತ್ತು ಮತ್ತು ನನ್ನ ತಂದೆ ತಾಯಿ ನನ್ನನ್ನು ಬೆಳೆಸಲು ತುಂಬಾ ಶ್ರಮಿಸಿದರು. ಇತರ ಮಕ್ಕಳಂತೆ ಓದಲು ಸಾಧ್ಯವಿಲ್ಲದ ಕಾರಣ ಕಿವುಡರ ಶಾಲೆಗೆ ಸೇರಿಸಿದರು. ಯೇಸು ಕೂಡ ಒಂದು ದೇವರೇ ಎಂದು ನಾನು ಅಂದುಕೊಂಡಿದ್ದೆ. ನಾನು ನನ್ನ ಅಧ್ಯಯನವನ್ನು ಮುಗಿಸಿ ಬಹಳ ಕಷ್ಟಗಳ ನಡುವೆ ಕೆಲಸಕ್ಕೆ ಹೋದೆ. ನಾನು ಕಿವುಡನಾಗಿರುವುದರಿಂದ, ನನ್ನ ಕೆಲಸದ ಸ್ಥಳದಲ್ಲಿ ನನ್ನನ್ನು ತುಂಬಾ ಮೋಸವಾಗಿ ಬೈಯ್ಯುತ್ತಿದ್ದರು. ನಾನೊಬ್ಬನೇ ಯಾಕೆ ಹೀಗೆ ಹುಟ್ಟಿದ್ದೇನೆ ಎಂದುಕೊಂಡು ಅಳುತ್ತಿದ್ದೆ. ನನಗೂ ಮದುವೆಯಾಯಿತು. ನನ್ನ ಹೆಂಡತಿ ಕೂಡ ನನ್ನಂತೆ ಜನ್ಮಜಾತ ಕಿವುಡಳು. ಆದರೆ ನಮ್ಮಿಬ್ಬರ ಮಕ್ಕಳು ಸಂಪೂರ್ಣವಾಗಿ ಆರೋಗ್ಯವಂತರಾಗಿ ಜನಿಸಿದರು.

 

ನಾನು ದೇಹದ ದೌರ್ಬಲ್ಯದಿಂದ ಒಂದು ಕಡೆ ಬಳಲುತ್ತಿದ್ದರೂ, ನನ್ನ ಆತ್ಮವು ಪಾಪದಲ್ಲಿ ಸಿಕ್ಕಿ ವೇದನೆ ಪಡುತ್ತಿತ್ತು. ಆಗ ನನ್ನಂತೆಯೇ ಮಾತನಾಡಲು, ಕೇಳಲು ಬಾರದ ಗೆಳೆಯನನ್ನು ಭೇಟಿಯಾದೆ. ಅವರು ಹೇಳಿದರು, “ನಮ್ಮಂತವರಿಗಾಗಿ ಒಂದು ಪ್ರಾರ್ಥನಾ ಕೂಟವಿದೆ. ನೀವು ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾ?" ಎಂದು ಕೇಳಿದರು. ಸರಿ ಅಂಥಾ ಹೇಳಿ ನಾನು ಕೂಡ ಹೋಗಿ ಭಾಗವಹಿಸಿದೆ. ಆ ಕೂಟದಲ್ಲಿ ನಾನು ಎಷ್ಟು ಪಾಪಿಯಾಗಿದ್ದೇನೆ ಎಂದು ಮತ್ತು ಯೇಸು ನನ್ನ ಪಾಪಗಳನ್ನು ಕ್ಷಮಿಸಲು ಸಮರ್ಥನಾಗಿದ್ದಾನೆ ಎಂದು ನಾನು ತಿಳಿದುಕೊಂಡೆ. ರೊಟ್ಟಿ ಮುರಿಯುವ ಸಮಯದಲ್ಲಿ "ಅವರು ನನ್ನ ಪಾಪಕ್ಕಾಗಿ ಜಜ್ಜಲ್ಪಟ್ಟರು" ಎಂದು, ದ್ರಾಕ್ಷಾರಸವನ್ನು ಕೊಡುವಾಗ "ಅವರು ನನಗಾಗಿ ರಕ್ತ ಸುರಿಸಿದರು" ಎಂದು ಹೇಳುವಾಗ ನಾನು ತುಂಬಾ ಅಳುತ್ತಿದ್ದೆ. ನಾನು ನನ್ನ ಇಡೀ ಜೀವನವನ್ನು ಕರ್ತನಾದ ಯೇಸುವಿಗೆ ಅರ್ಪಿಸಿದೆ. ಎಂತಹ ಸಂತೋಷ! ನಾನು ರಕ್ಷಣೆ ಹೊಂದಿದೆ. ನನಗೆ ಹೇಳಲಾಗದಷ್ಟು ಆನಂದವಾಯಿತು! ಆಗ ದೇವರು ನನ್ನನ್ನು ಸೇವೆ ಮಾಡಲು ಕರೆದರು. ನಾನು ಸಂತೋಷದಿಂದ ವಿಧೇಯನಾಗಿ 16 ವರ್ಷಗಳಿಂದ ಕುಟುಂಬವಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಇದುವರೆಗೆ ನನ್ನಂತಹ 350 ಕ್ಕೂ ಹೆಚ್ಚಾದ ಕಿವುಡ ಮತ್ತು ಮೂಕರನ್ನು ದೇವರ ಕಡೆಗೆ ನಡೆಸಿ ಮತ್ತು ಅವರೆಲ್ಲಾ ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಕ್ರಿಸ್ತನ ಮಂದೆಯಲ್ಲಿ ಸೇರಿಸುವಂತೆ ದೇವರು ಸಹಾಯ ಮಾಡಿದರು. ನನ್ನ ಮಗನೂ ಸಹ ದೇವರ ಸೇವೆ ಮಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ನಾನು ಸಾಯುವವರೆಗೂ ಅಥವಾ ಕರ್ತನ ಬರೋಣದ ತನಕ ಅವರಿಗೆ ಸಾಕ್ಷಿಯಾಗಿ ಜೀವಿಸಲು ಕರ್ತನು ಸಹಾಯ ಮಾಡುತ್ತಾರೆ.

 

ನನ್ನ ಪ್ರಿಯರೇ! ಕಿವುಡ ಮತ್ತು ಮಾತು ಬರದ ನನ್ನನ್ನೂ ಸಹ ಅವರು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಜೀವನವನ್ನೂ ದೇವರಿಗೆ ಅರ್ಪಿಸಿರಿ. ಕರ್ತನಾದ ಯೇಸುವಿಗಾಗಿ ಏನಾದರೂ ಮಾಡಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.

- D. ಧನರಾಜ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ಚರ್ಚ್‌ಗಳಿಲ್ಲದ ಹಳ್ಳಿಗಳಲ್ಲಿ 1,000 ಚರ್ಚ್‌ಗಳು ನಿರ್ಮಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al