By Village Missionary Movement
Sunday, 25-Sep-2022ಧೈನಂದಿನ ಧ್ಯಾನ(Kannada) – 25.09.2022 (Kids Special)
ಎಚ್ಚರಿಕೆಯಿಂದ ಮಾತನಾಡು
“ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!” - ಜ್ಞಾನೋಕ್ತಿ 15:23
ಒಂದು ಸುಂದರವಾದ ನದಿಯ ದಂಡೆ, ನೋಡಲು ನೈಸರ್ಗಿಕ ಸೌಂದರ್ಯದಿಂದ ತುಂಬಿ ಹರಿಯುವ ಹಚ್ಚ ಹಸಿರಿನ ದೃಶ್ಯಾವಳಿ. ಅಲ್ಲಿ ಅನೇಕ ಮರಗಳು ಅರಳಿ ಸಂತೋಷವಾಗಿದ್ದವು. ಪುಟಾಣಿಗಳೇ, ನೀವೂ ನದಿಯಲ್ಲಿ ಸ್ನಾನ ಮಾಡಿ ಜಾಲಿಯಾಗಿ Enjoy ಮಾಡಿದ್ದೀರಾ? ನೀರಿಂದ ಹೊರಬರೋದಕ್ಕೇ ಮನಸ್ಸೇ ಬರಲ್ಲ ಅಲ್ವಾ? ಆ ನದಿಯ ದಡದಲ್ಲಿ ಒಂದು ಬೇವಿನ ಮರ ಮತ್ತು ಹುಣಸೆ ಮರ ಮಾತನಾಡುತ್ತಿತ್ತು. ಹುಣಸೆ ಮರ ಹೇಳ್ತು, “ನನಗೆ ತುಂಬಾ ವಯಸ್ಸಾಗಿದೆ. ನನ್ನ ಬೇರುಗಳು ಸತ್ತು ಹೋಗಿ, ಒಣಗಿ ಬಿದ್ದು ಹೋದವು. ನನ್ನ ದೇಹವೂ ತುಂಬಾ ದುರ್ಬಲವಾಗಿದೆ. ಹಾಗಾಗಿ ನಾನು ಯಾವಾಗ ಗಾಳಿ ಮತ್ತು ಮಳೆಯಿಂದ ಕೊಚ್ಚಿಹೋಗುತ್ತೇನೊ ನನಗೇ ಗೊತ್ತಿಲ್ಲ?" ಎಂದು ಹೇಳಿತು. ತಕ್ಷಣ ಬೇವಿನ ಮರವು "ನಿನ್ನಂತಹ ಗೆಳೆಯ ಸಿಗುವುದು ತುಂಬಾ ಕಷ್ಟ" ಎಂದು ಬೇಸರವಾಯಿತು.
ಆಗ ಒಂದು ಗುಬ್ಬಚ್ಚಿ ಹುಣಸೆ ಮರದ ಬಳಿ ಮನೆ ಕಟ್ಟಲು ಅನುಮತಿ ಕೇಳಿತು. ಹುಣಸೆ ಮರ ನಿರಾಕರಿಸಿದ್ದರಿಂದ ಬೇವಿನ ಮರದಲ್ಲಿ ಹೋಗಿ ಗೂಡು ಕಟ್ಟಿಕೊಂಡು ನೆಮ್ಮದಿಯಿಂದ ಬದುಕುತ್ತಿದ್ದರೂ, ಈ ಹುಣಸೆ ಮರ ತನಗೆ ಸ್ಥಾನ ನೀಡಲಿಲ್ಲ ಎಂದು ಗುಬ್ಬಚ್ಚಿ ಪಶ್ಚಾತ್ತಾಪ ಪಡುತ್ತಿತ್ತು. ಏಕಾಏಕಿ ಬೀಸಿದ ಗಾಳಿ ಮಳೆಗೆ ಹುಣಸೆ ಮರ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಯಿತು. “ನಿನಗೆ ಹೀಗೆ ಆಗಬೇಕು, ನನಗೆ ಸಹಾಯ ಮಾಡಲಿಲ್ಲ, ಅಲ್ವಾ? ಅದಕ್ಕೆ ನಿನಗೆ ಈ ಶಿಕ್ಷೆ’’ ಎಂದು ಗುಬ್ಬಚ್ಚಿ ಹೇಳಲು, ಅದಕ್ಕೆ ಬೇವಿನ ಮರ, ‘‘ನಿನ್ನ ಮಾತು ನಿಲ್ಲಿಸು, ಸತ್ಯ ತಿಳಿಯದೆ ಮಾತನಾಡಬೇಡ. ವಯಸ್ಸಾದಂತೆ, ಅದು ಶೀಘ್ರದಲ್ಲೇ ಈ ರೀತಿ ಆಗುತ್ತದೆ. ಜಾಗ ಕೊಟ್ಟರೆ ನೀನೂ ನೀರಿನಲ್ಲಿ ಕೊಚ್ಚಿ ಹೋಗುತ್ತೀಯ ಎಂಬ ಸದ್ಭಾವನೆಯಿಂದ ಗೂಡು ಕಟ್ಟಲು ಬಿಡಲಿಲ್ಲ" ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡು ಗುಬ್ಬಚ್ಚಿಯ ಕಣ್ಣಲ್ಲೂ ನೀರು ಬಂತು. ಗುಬ್ಬಚ್ಚಿ ಹಾರಿಹೋಗಿ ಹುಣಸೆ ಮರ ನೀರಿನಲ್ಲಿ ಕೊಚ್ಚಿಕೊಂಡು ಹೋಗುವುದನ್ನು ನೋಡಿ, "ನಾನು ತಪ್ಪಾಗಿ ಅರ್ಥಮಾಡಿಕೊಂಡೆ, ನನ್ನನ್ನು ಕ್ಷಮಿಸು, ಹುಣಸೆ ಮರ" ಎಂದು ಹೇಳಿತು. ಮರದ ವ್ಯಾಪಾರಿಯೊಬ್ಬರು ದಡದಲ್ಲಿ ಬಿದ್ದಿದ್ದ ಮರವನ್ನು ತೆಗೆದುಕೊಂಡು ಮರದ ಸಾಮಾನುಗಳನ್ನು ತಯಾರಿಸಲು ತೆಗೆದುಕೊಂಡರು. ಸಾಯುವಾಗಲೂ ಉಪಯುಕ್ತವಾಗಿರುವ ಹುಣಸೆ ಮರದ ಗುಣದ ಬಗ್ಗೆ ಗುಬ್ಬಚ್ಚಿ ಆಶ್ಚರ್ಯ ಪಟ್ಟಿತು.
ಪ್ರೀತಿಯ ತಮ್ಮ-ತಂಗಿ, ಮಾತನಾಡುವ ವಿಷಯದಲ್ಲಿ ಜಾಗರೂಕರಾಗಿರಿ. ಇತರರು ನಮಗೆ ಒಳ್ಳೆಯದನ್ನು ಮಾಡದ ಕಾರಣ ನಾವು ಕೆಟ್ಟದಾಗಿ ಅಥವಾ ಅಪಹಾಸ್ಯವಾಗಿ ಅವರ ಬಗ್ಗೆ ಮಾತಾಡಬಾರದು. ಮತ್ತೊಬ್ಬರನ್ನು ಸಂತೋಷಪಡಿಸುವ ಮಾತುಗಳನ್ನು ಮಾತನಾಡುವುದರಲ್ಲಿ ಜಾಗರೂಕರಾಗಿರೋಣ.
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482