Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.09.2022
Share:

By Village Missionary Movement

Friday, 23-Sep-2022

ಧೈನಂದಿನ ಧ್ಯಾನ(Kannada) – 24.09.2022

 

ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು

 

 "...ನಾಲಿಗೆಯೂ ಕಿಚ್ಚೇ... ಪ್ರಪಂಚವೆಂಬ ಚಕ್ರಕ್ಕೆ ಬೆಂಕಿಹಚ್ಚುತ್ತದೆ." - ಯಾಕೋಬ 3:6

 

ನಾಲಿಗೆ ನಮ್ಮ ಅಂಗಗಳಲ್ಲಿ ಬಹಳ ಪ್ರಮುಖವಾದದ್ದು. ಅದೊಂದು ಚಿಕ್ಕ ಅಂಗ. ಆದರೆ ಇದು ಅನೇಕ ಉಪಯೋಗಗಳನ್ನು ಹೊಂದಿದೆ. ಆಹಾರವನ್ನು ತಿನ್ನಲು ಮತ್ತು ಸವಿಯಲು ಇದರ ಮೂಲಕ ನಮ್ಮ ದೇಹ ಮತ್ತು ಆತ್ಮವು ಸಂತೋಷಪಡುತ್ತದೆ. ಮುಖ್ಯವಾಗಿ ಇತರರೊಂದಿಗೆ ಮಾತನಾಡಲು ಮತ್ತು ಹಾಡಲು ಉಪಯೋಗವಾಗುತ್ತದೆ. ಆದರೆ ಕೆಲವೊಮ್ಮೆ ಅದು ಬೆಂಕಿಯಂತೆ ತಿರುಗುತ್ತದೆ. ಅಂದರೆ, ನಾವು ಮಾತನಾಡುವಾಗ, ಇತರರನ್ನು ನೋಯಿಸುವ ಮತ್ತು ಸಂಬಂಧಗಳನ್ನು ಮುರಿಯುವ ಅನಗತ್ಯ ಪದಗಳನ್ನು ಬಳಸುತ್ತೇವೆ. ನಾವು ಈ ನಾಲಿಗೆಯಿಂದ ದೇವರನ್ನು ಸ್ತುತಿಸುತ್ತೇವೆ. ಅದೇ ನಾಲಿಗೆಯಿಂದ ಇತರರನ್ನು ಶಪಿಸುತ್ತೇವೆ. ಒಂದೇ ನಾಲಿಗೆಯಿಂದ ದೇವರನ್ನು ಹೊಗಳುವುದು ಮತ್ತು ಜನರನ್ನು ಶಪಿಸುವುದು ಇದನ್ನು ಅಂಗೀಕರಿಸಲು ಸಾಧ್ಯವಾ? ಖಂಡಿತವಾಗಿಯೂ ಇಲ್ಲ. ಬದಲಾಗಿ, ಅದು ದೇವರನ್ನು ದುಃಖಪಡಿಸುತ್ತದೆ. ನಮ್ಮ ಆತ್ಮಕ್ಕೂ ಕಳಂಕ ತರುತ್ತದೆ. ಆಗ ನಾಲಿಗೆಯ ತಪ್ಪು ಮಾತುಗಳಿಂದ ನಮ್ಮ ಇಡೀ ದೇಹವೇ ಅಪವಿತ್ರವಾಗುತ್ತದೆ. ಇದು ಕತ್ತಿಯಂತೆ ಇತರರನ್ನು ಗಾಯಗೊಳಿಸುತ್ತದೆ.

 

ನಾವು ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸೋಣ. ನಮ್ಮ ಬಾಯಿಂದ ಹೊರಬರುವ ಮಾತುಗಳು ಎಂಥದ್ದಾಗಿವೆ? ನಿಮ್ಮ ಬಾಯಿಂದ ಯಾವುದೇ ಕೆಟ್ಟ ಮಾತು ಬರಬಾರದು ಎಂದು ಸತ್ಯವೇದವು ಎಚ್ಚರಿಸುತ್ತಿದೆ. ಆದ್ದರಿಂದ ಮಾತನಾಡುವಾಗ ಯೋಚಿಸೋಣ ಮತ್ತು ತಾಳ್ಮೆಯಿಂದ ಮಾತನಾಡಲು ಕಲಿಯೋಣ. ಬೆಂಕಿಯಂತೆ ನಮ್ಮ ಮಾತುಗಳು ನಮ್ಮನ್ನೂ ಇತರರನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ. ಅಂದರೆ ನಮ್ಮ ಜೀವನ ಚಕ್ರವು ನಾಲಿಗೆಯಿಂದಲೇ ಹೊತ್ತಿ ಉರಿಯುತ್ತಿದೆ. ಆದ್ದರಿಂದ, ಈ ನಾಲಿಗೆಯನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡೋಣ. ಮೊದಲನೆಯದಾಗಿ, ನಮ್ಮ ನಾಲಿಗೆ ರುಚಿ ನೋಡುವಾಗ ಕೆಲವು ನಿಯಮಗಳ ಅಗತ್ಯವಿದೆ. ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶದ ಆಹಾರವನ್ನು ಮಾತ್ರ ಸೇವಿಸಬೇಕು. ನಾವು ಅದನ್ನು ಮೀರಿ ತಿನ್ನುವಾಗ, ಅದು "ಹೊಟ್ಟೆಬಾಕತನ" ಎಂದು ಸತ್ಯವೇದವು ಹೇಳುತ್ತಿದೆ. ಅದು ನಮಗೆ ಕಳಂಕ ತರುತ್ತದೆ.

 

ಅಂತಿಮವಾಗಿ, "ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ" ಎಂದು, "ಜೀವನಮರಣಗಳು ನಾಲಿಗೆಯ ವಶ" ಎಂದೂ ಸತ್ಯವೇದವು ಹೇಳುತ್ತಿದೆ. ಆದುದರಿಂದ ಮಾತನಾಡಬೇಕಾದ ಸಮಯದಲ್ಲಿ ಮಾತನಾಡುವುದು, ಮಾತನಾಡದೇ ಇರಬೇಕಾದ ಸಮಯದಲ್ಲಿ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೇದಲ್ಲವೇ! ಹಾಗಾಗಿ ನಮ್ಮ ದೇಹದ ಅತ್ಯಂತ ಚಿಕ್ಕ ಅಂಗವಾದ ನಾಲಿಗೆಯ ಶಕ್ತಿಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸೋಣ. ನಮ್ಮ ಆಯುಷ್ ದಿನಗಳನ್ನು ಕೂಡಿಸಿಕೊಳ್ಳೋಣ.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಭಾರತದಾದ್ಯಂತ ಒಂದು ಲಕ್ಷ ಹಳ್ಳಿಗಳಲ್ಲಿ ಚರ್ಚುಗಳು ರಚನೆಯಾಗಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al