By Village Missionary Movement
Thursday, 11-Feb-2021ಧೈನಂದಿನ ಧ್ಯಾನ(Kannada) – 11.02.2021
ಜಾತಿಗಳೆಲ್ಲಾ ಇಲ್ಲಾ....
"...ಯಾವ ಮನುಷ್ಯನನ್ನಾದರೂ ಹೊಲೆಯನು ಇಲ್ಲವೆ ಅಶುದ್ದನು ಅನ್ನಬಾರದೆಂದು ದೇವರು ತೋರಿಸಿದ್ದಾನೆ" - ಅಪೊಸ್ತಲ.10:28
ಸೃಷ್ಟಿಸಿದ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನವೇ. ಆದರೆ ಮುಟ್ಟಿದ್ದಕ್ಕೆಲ್ಲಾ ಜಾತಿ ನೋಡುವುದು ಮನುಷ್ಯನ ಗುಣವಾಗಿದೆ. ಕ್ರೈಸ್ತರೂ, ಸೇವೆ ಮಾಡುವವರೂ ಇದಕ್ಕೆ ಹೊರತಾಗಿಲ್ಲ. ಜಾತಿ ನೋಡುವುದರ ಅಂತಿಮ ಘಟ್ಟವಾಗಿ, ಒಂದೇ ಊರಿನಲ್ಲಿ ಎರಡು ಸಭೆಗಳನ್ನು ಕಟ್ಟಿ ಇದು ಈ ಜಾತಿಯವರಿಗೆ ಎಂದು, ಅದು ಆ ಜಾತಿಯವರಿಗೆ ಎಂದು ಬೇರ್ಪಡಿಸಿ ಆರಾಧಿಸುತ್ತಿದ್ದಾರೆ. ಅನೇಕ ಮಿಷಿನರಿ ಸಂಸ್ಥೆಗಳು ಅಗತ್ಯವುಳ್ಳ ಸ್ಥಳಗಳಲ್ಲಿ ಕೂಡ ಒಂದು ಆಲಯವನ್ನು ಕಟ್ಟಲು ಸಾಧ್ಯವಾಗದೇ ಆರ್ಥಿಕವಾಗಿ ಕಷ್ಟಪಡುವಾಗ, ಒಂದು ಊರಿನಲ್ಲಿ ಎರಡು ಆಲಯಗಳು! ಇದು ವೇದನೆಯಾದದ್ದು! ಜಾತಿಯಿಂದ ಹೇಗೆ ಬೇರ್ಪಡುವುದು ನ್ಯಾಯವಾ? ಎಂದು ಒಂದೊಂದು ಕ್ರೈಸ್ತನು ಯೋಚಿಸಬೇಕು!
ಪರಿಶುದ್ಧ ಗ್ರಂಥದಲ್ಲಿ ಅಪೊಸ್ತಲ. 10 ನೆಯ ಅಧ್ಯಾಯವನ್ನು ನೋಡುವಾಗ, ಪೇತ್ರನಿಗೆ ದೇವರು ಒಂದು ದರ್ಶನವನ್ನು ಕೊಟ್ಟರು. ಅದರಲ್ಲಿ ನಾಲ್ಕು ಮೂಲೆಗಳಲ್ಲೂ ಕಟ್ಟಲ್ಪಟ್ಟ, ದೊಡ್ಡ ಕಂಬಳಿಯ ಹಾಗೆ ಒಂದು ಗೂಡು ಆಕಾಶದಿಂದ ಇಳಿದುಬಂತು. ಅದರಲ್ಲಿ ಭೂಮಿಯಲ್ಲಿರುವ ನಾಲ್ಕು ಕಾಲುಳ್ಳ ಜೀವಿಗಳು, ಕಾಡುಮೃಗಗಳು, ತೆವಳುವ ಪ್ರಾಣಿಗಳು, ಆಕಾಶ ಪಕ್ಷಿಗಳನ್ನು ನೋಡಿದರು. ಮತ್ತು ಪೇತ್ರನೇ ಹೊಡೆದು ತಿನ್ನು ಎಂಬ ಶಬ್ಧವನ್ನು ಕೇಳಿದರು. ಪೇತ್ರನು ಹೊಲೆಯಾದದ್ದನ್ನು ಅಶುದ್ಧ ವಾದದ್ದನ್ನು ಎಂದಿಗೂ ತಿನ್ನುವುದಿಲ್ಲ ಎಂದು ಹೇಳಿದನು. ಆದರೆ ಪೇತ್ರನು ಕೇಳಿದ ಒಂದು ಶಬ್ಧ, "ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆಯಾಗಿ ನೆನೆಸಬೇಡ" ಎಂಬುದೇ. ಇದರಂತೆ ಮೂರು ಬಾರಿ ನಡೆಯುತ್ತದೆ. ಆಗ ಪೇತ್ರನು ಯೆಹೂದ್ಯನಲ್ಲದ ಕೊರ್ನೇಲ್ಯನೆಂಬ ಮನುಷ್ಯನ ಮನೆಗೆ ಹೋಗಿ "ಯಾವ ಮನುಷ್ಯನನ್ನು ಹೊಲೆಯಾದವನೆಂದು ಅಶುದ್ಧನೆಂದು ನಾನು ಹೇಳದ ಹಾಗೆ ದೇವರು ನನಗೆ ತೋರಿಸಿದ್ದಾರೆ. ಎಂತಹ ಒಂದು ಪಾಠ ನೋಡಿದಿರಾ.
ಇದನ್ನು ಓದುತ್ತಿರುವ ಸ್ನೇಹಿತರೇ! ನಾವು ಇಂದು ಯಾರನ್ನು ಹೊಲೆಯಾದವರೆಂದು, ಅಶುದ್ಧರೆಂದು ನೋಡದ ಹಾಗೆ ಎಚ್ಚರಿಕೆಯಾಗಿರೋಣ. ಜಾತಿಯನ್ನು ಇಟ್ಟುಕೊಂಡು ದೇವರು ಶುದ್ಧ ಮಾಡಿದ ಮನುಷ್ಯರನ್ನು ನಾವು ಅಶುದ್ಧವಾಗಿಯೂ, ಹೊಲೆಯಾಗಿಯು ನೆನೆಸಲೇ ಬಾರದು. "ಜಾತಿಗಳು ಇಲ್ಲ ಕಣೇ ಮಗು, ಜಾತಿಗಳಿಂದ ಹೆಚ್ಚು ಕಡಿಮೆ ಎಂದು ಹೇಳುವುದು ಪಾಪ" ಎಂಬ ಭಾರತೀಯರ ಸಾಲುಗಳನ್ನು ನೆನಪಿಸಿಕೊಳ್ಳೋಣ. ದೇವರನ್ನು ಅಂಗೀಕರಿಸಿದ ಒಬ್ಬೊಬ್ಬರೂ ಅಪೊಸ್ತಲರಲ್ಲಿರುವ ಮೇಲ್ಕಂಡ ಸಂಭವವನ್ನು ಧ್ಯಾನಿಸಿ ಒಪ್ಪಿಸಿಕೊಟ್ಟರೆ ನಿಮ್ಮನ್ನೂ ದೇವರು ಪೇತ್ರನ ಹಾಗೆ ಮಾರ್ಪಡಿಸುತ್ತಾರೆ. ಆಮೆನ್.
- T. ಶಂಕರ್ ರಾಜನ್
ಪ್ರಾರ್ಥನಾ ಅಂಶ:-
YouTube, Twitter, Facebook ಮೂಲಕ ಹೊರಬರುವ ನಮ್ಮ ಕಿರಿಯರ ಮತ್ತು ಯೌವ್ವನಸ್ಥರ ಕಾರ್ಯಕ್ರಮಗಳ ಮೂಲಕ ಅನೇಕರು ದೇವರನ್ನು ಅರಿತುಕೊಂಡು ದೇವರ ಜ್ಞಾನದಲ್ಲಿ ಅಭಿವೃದ್ಧಿಯಾಗುವಂತೆ ಪ್ರಾರ್ಥಿಸಿರಿ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482