By Village Missionary Movement
Thursday, 22-Sep-2022ಧೈನಂದಿನ ಧ್ಯಾನ(Kannada) – 22.09.2022
ಬಲಹೀನತೆಗಳು ಯಾಕೆ?
"...ನಾವು ತನ್ನ ಮಹಿಮೆಯನ್ನು ಪ್ರಖ್ಯಾತಿಪಡಿಸಬೇಕೆಂದು ಸಮಸ್ತಕಾರ್ಯಗಳನ್ನು ತನ್ನ ಇಷ್ಟದಂತೆ ನಡಿಸುವ ದೇವರು ತನ್ನ ಸಂಕಲ್ಪದ ಮೇರೆಗೆ ನಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು" - ಎಫೆಸ 1:12
ಆ ದಿನಗಳಲ್ಲಿ ಲಿಥುವೇನಿಯಾ ದೇಶದಲ್ಲಿ ಕ್ರೈಸ್ತರು ಹೆಚ್ಚಾಗಿ ಮೇಲ್ವಿಚಾರಣೆ ಮತ್ತು ಕಿರುಕುಳಕ್ಕೊಳಗಾದಾಗ, ವಯಸ್ಸಾದ ತಾಯಿಯೊಬ್ಬರು ಸಂಧಿವಾತದಿಂದ ಬಳಲುತ್ತಿದ್ದರು. ಅವರು ಅಸ್ವಸ್ಥರಾಗಿದ್ದದರಿಂದ ಕಾವಲುಗಾರರು ಆಕೆಯನ್ನು ಕಂಡುಕೊಳ್ಳುತ್ತಿರಲಿಲ್ಲ. ಆ ಕಾಯಿಲೆಯ ಕ್ರೌರ್ಯದಿಂದಾಗಿ ಕಾಲುಗಳು ತಿರುಚಿ ದೇಹದ ಕೆಳಗೆ ಸುತ್ತಿಕೊಂಡಿತ್ತು. ತಲೆ ಬಾಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು, ದೇಹದ ಅಂಗಾಂಗಗಳು ಸುರುಳಿಕೊಂಡಿದ್ದ ಸ್ಥಿತಿಯಲ್ಲಿತ್ತು, ಅವರ ಕಣ್ಣುಗಳು ಮತ್ತು ಬಲಗೈಯ ತೋರುಬೆರಳು ಮಾತ್ರ ಅವರ ನಿಯಂತ್ರಣದಲ್ಲಿತ್ತು.
ಬೆಳಗಿನ ಉಪಾಹಾರದ ನಂತರ ಸೋಫಾದಲ್ಲಿ, ಕೆಳಗೆ ಬೀಳದಂತೆ ತಲೆದಿಂಬಿನಿಂದ ಸುತ್ತಲ್ಪಟ್ಟು, ಟೇಬಲ್ ಮೇಲೆ ಟೈಪ್ ರೈಟರ್ ಇಟ್ಟುಕೊಂಡು, ತನ್ನ ಒಂದೇ ಬೆರಳಿನಿಂದ ರಾತ್ರಿ ಪೂರ್ತಿ ಆ ತಾಯಿಯವರು ಮಾಡಿದ್ದೇನು ಗೊತ್ತಾ? ರಷ್ಯನ್ ಭಾಷೆಯಲ್ಲಿ, ಲಾಟ್ವಿಯನ್ ಭಾಷೆಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸತ್ಯವೇದ ಪುಸ್ತಕಗಳನ್ನು ಮತ್ತು ಬಿಲ್ಲಿ ಗ್ರಹಾಂ ವಾಚ್‌ಮನ್ ನೀ ನಂತಹವರ ಪುಸ್ತಕಗಳನ್ನು ಅನುವಾದಿಸಿ ಟೈಪ್ ಮಾಡುತ್ತಿದ್ದರು ಮತ್ತು ಪ್ರಾರ್ಥಿಸುತ್ತಿದ್ದರು ಆ ತಾಯಿ.
ನಮ್ಮ ಸತ್ಯವೇದದಲ್ಲಿಯೂ ಸಹ ಅಪೊ. ಪೌಲನು ತನ್ನ ಬಲಹೀನತೆಯಲ್ಲಿ ದೇವರ ಸುವಾರ್ತೆಯನ್ನು ಬೋಧಿಸಿದರು. ಅವರ ದೇಹದಲ್ಲಿಯೂ ಒಂದು ಮುಳ್ಳು ಕೊಡಲಾಗಿತ್ತು ಎಂದು ಓದುತ್ತೇವೆ. ಹೌದು, ಬಲಹೀನತೆಗಳು, ಸಮಸ್ಯೆಗಳು ಮತ್ತು ಚಿಂತೆಗಳು ಅವರು ದೇವರ ಕೆಲಸವನ್ನು ಮಾಡುವುದನ್ನು ಎಂದಿಗೂ ತಡೆಯಲಾಗಲಿಲ್ಲ. ಇವೆಲ್ಲವೂ ನನಗೆ ಮೊದಲೇ ನಿಗದಿಯಾಗಿವೆ ಎಂದು ತಿಳಿದುಕೊಂಡಿದ್ದದರಿಂದ ಪೌಲನು ಇಹಲೋಕದ ವಿಷಯಗಳನ್ನೂ ಮೀರಿ ಹೋಗಿ ಕ್ರಿಸ್ತನಿಗಾಗಿ ಮಹತ್ಕಾರ್ಯಗಳನ್ನು ಮಾಡಿದನು.
ಹೌದು, ನನ್ನ ಪ್ರಿಯರೇ, ದೇವರನ್ನು ಹುಡುಕಿದರೂ ಯಾಕೆ ನನಗೆ ಈ ಬಲಹೀನತೆ? ನಾನು ಈ ದೋಷಗಳೊಂದಿಗೆ ಏಕೆ ಹುಟ್ಟಿದ್ದೇನೆ ಎಂದು ನೀವು ಅಂಗಲಾಚುತ್ತಿದ್ದೀರಾ! ಚಿಂತಿಸಬೇಡಿರಿ. ನಮ್ಮ ಸೃಷ್ಟಿಕರ್ತನು ತನ್ನ ಹೆಸರನ್ನು ಮಹಿಮೆಪಡಿಸಿಕೊಳ್ಳಲು ಆ ತಾಯಿಯನ್ನು ಬಳಸಲಿಲ್ಲವೇ? ನಿಶ್ಚಯವಾಗಿಯೂ ಆತನು ತನ್ನ ನಾಮ ಮಹಿಮೆ ಹೊಂದುವಂತೆ ನಿನ್ನನ್ನೂ ಉಪಯೋಗಿಸುತ್ತಾರೆ. ನಿಮ್ಮ ಬಲಹೀನತೆಯಲ್ಲಿ ಆತನನ್ನು ಸ್ತುತಿಸಿರಿ. ದೇವರಿಂದ ಅದ್ಭುತಗಳನ್ನು ನಿರೀಕ್ಷಿಸಿರಿ. ಕರ್ತನು ಖಂಡಿತವಾಗಿಯೂ ಮಹತ್ಕಾರ್ಯಗಳನ್ನು ಮಾಡುತ್ತಾರೆ.
- Mrs. ಮಂಜುಳಾ
ಪ್ರಾರ್ಥನಾ ಅಂಶ:
ಕಾರ್ಯ ಸ್ಥಳಗಳಲ್ಲಿ ನಾವು ಭೇಟಿಯಾಗುವ ಮಕ್ಕಳು ಮತ್ತು ಯೌವನಸ್ಥರು ಕರ್ತನಲ್ಲಿ ನೆಲೆಗೊಳ್ಳಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482