Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.09.2022
Share:

By Village Missionary Movement

Wednesday, 21-Sep-2022

ಧೈನಂದಿನ ಧ್ಯಾನ(Kannada) – 21.09.2022

 

ಪರಿಪೂರ್ಣವಾದ ಆಶೀರ್ವಾದ

 

“ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು;..." - ಜ್ಞಾನೋಕ್ತಿ 28:20

 

ರಶೀತಾ ಅಕ್ಕನಿಗೆ ಒಬ್ಬ ಮಗನಿದ್ದನು. ಆ ಅಕ್ಕ ಅವರ ಮಗನಿಗೆ ಸರಿಯಾದ ಸಮಯಕ್ಕೆ ತನ್ನ ಕರ್ತವ್ಯಗಳನ್ನು ನಿರ್ವಹಿಸುವಂತೆ ನಿಯಮಗಳನ್ನು ಹಾಕುತ್ತಲೇ ಇದ್ದರು. ಸ್ನಾನಕ್ಕೆ ಹೋದರೆ ಟವೆಲ್ ಅನ್ನು ಸರಿಯಾಗಿ ಒಣಗಾಕಿದ್ದೀಯಾ? ಕೊಳಾಯಿಯನ್ನು ಸರಿಯಾಗಿ Close ಮಾಡಿದ್ದೀಯ? ಬಾತ್ ರೂಮ್ ಲೈಟ್ - ಆಫ್ ಮಾಡಿದ್ದೀಯಾ? School ನಿಂದ ಬಂದ ನಂತರ ನಿನ್ನ Uniform ಬದಲಾಯಿಸಿದ್ದೀಯಾ? ಬೈಬಲ್ ನಲ್ಲಿ ಎಷ್ಟು ಅಧ್ಯಾಯಗಳನ್ನು ಮುಗಿಸಿದ್ದೀಯಾ? Home work 9:00 ಗಂಟೆಗೆ ಮುಗಿಸಿದ್ದೀಯಾ? ಯೌವನದಲ್ಲೂ ಇದೇ ನಿಯಮಗಳನ್ನು, ಶಿಸ್ತನ್ನು ಅನುಸರಿಸಲು ಅವರು ಒತ್ತಾಯಿಸಿದರು.

 

ಈ ಯೌವನಸ್ಥ ಸಹೋದರನಿಗೆ ತುಂಬಾ ಕಿರಿಕಿರಿಯಾಗಿತ್ತು. ನಂತರ ವಿಧ್ಯಾಭ್ಯಾಸ ಮುಗಿಸಿ ಉದ್ಯೋಗ ಪಡೆಯಲು ಒಂದು Interview Attend ಮಾಡಬೇಕಿತ್ತು. ನಿಗದಿತ ದಿನ ಬಂದಿತು. ಮಹಡಿಯ ಕೊಠಡಿಯಲ್ಲಿ Interview ನಡೆಯಬೇಕಿತ್ತು. ಅವನು ಮುಂಭಾಗದ ಕೋಣೆಯನ್ನು ಪ್ರವೇಶಿಸಿದಾಗ, ಅಸ್ತವ್ಯಸ್ತವಾಗಿ ಬಿದ್ದಿದ್ದ ಕುರ್ಚಿಗಳನ್ನು ಜೋಡಿಸಿದನು. ಮೆಟ್ಟಿಲು ಹತ್ತುವಾಗ ಉರಿಯುತ್ತಿದ್ದ ಲೈಟ್ ಆಫ್ ಮಾಡಿದನು. ಪಕ್ಕದಲ್ಲಿದ್ದ ವಾಶ್ ಬೇಸಿನ್ ನಲ್ಲಿ ಸೋರುತ್ತಿದ್ದ ಪೈಪನ್ನು ಸರಿಪಡಿಸಿದನು. ಬಾಗಿದ ಪೆಡಲ್ ಅನ್ನು ನೇರಗೊಳಿಸಿದನು. ಅವನ ತಾಯಿ ಅವನಲ್ಲಿ ರೂಢಿಸಿದ ಅಭ್ಯಾಸಗಳು ಅವನಿಗೆ ಅರಿವಿಲ್ಲದೆ ಈ ಕೆಲಸಗಳನ್ನು ಮಾಡುವಂತೆ ಮಾಡಿತು. Late ಆಗಿ 100 ರಲ್ಲಿ 101 ನೇ ವ್ಯಕ್ತಿಯಾಗಿ ಬಂದು ಕುಳಿತನು. ಅವನು ಕುಳಿತ ತಕ್ಷಣ ಒಬ್ಬರು ಬಂದು ಅವನನ್ನು ಒಳಗೆ ಕರೆದೊಯ್ದರು. ಉಳಿದ 100 ಮಂದಿ ಅವನತ್ತ ತಿರುಗಿ ನೋಡಿದರು. ಸಿಸಿಟಿವಿ ಮೂಲಕ ಈತನ ಚಟುವಟಿಕೆಗಳನ್ನು ಗಮನಿಸಿದ ಕಂಪನಿ ಎಂ.ಡಿ ಅವನು ಪ್ರವೇಶಿಸಿದ ಕೂಡಲೇ ಟೈಪ್ ಮಾಡಿಟ್ಟಿದ್ದ Appointment Order ನ್ನು ಅವನಿಗೆ ನೀಡಿದರು. ಯಾವುದೇ ಪ್ರಶ್ನೆಗಳನ್ನೂ ಕೇಳಲಿಲ್ಲ.

 

ಸತ್ಯವೇದವೂ ಕೂಡ ನಾವು ಇಂತಹ ಕ್ರಮಬದ್ಧತೆಯನ್ನು ಅನುಸರಿಸಬೇಕೆಂದು ಹೇಳುತ್ತಿದೆ. ಮತ್ತು ನಾವು ಸಣ್ಣಸಣ್ಣ ವಿಷಯಗಳಲ್ಲಿ ಮನುಷ್ಯರ ಮುಂದೆ ನಿಲ್ಲುತ್ತಿದ್ದೇವೆ ಎಂದು ಭಾವಿಸಿ, ನಿಷ್ಠೆಯಿಂದ ಕೆಲಸಗಳನ್ನು ಮಾಡಿದರೆ, ನಾವು ಖಂಡಿತವಾಗಿಯೂ ದೇವರ ಆಶೀರ್ವಾದವನ್ನು ಪರಿಪೂರ್ಣವಾಗಿ ಪಡೆಯುತ್ತೇವೆ ಎಂಬುದರಲ್ಲಿ ಸಂದೇಹವೇ ಇಲ್ಲ.  

 

ಮೇಲಿನ ಕಥೆಯಲ್ಲಿ ಆ ಹುಡುಗನಿಗೆ ಯೌವನದಲ್ಲಿ ಆ ರೀತಿಯ ನಿಯಮಗಳು ಮತ್ತು ಶಿಸ್ತು ಕೋಪವನ್ನುಂಟು ಮಾಡಿದರೂ, ಅದೇ ಅವನಿಗೆ ದೊಡ್ಡ ಆಶೀರ್ವಾದವನ್ನು ತಂದುಕೊಟ್ಟಿತು. ಅದೇ ರೀತಿ ಸತ್ಯವೇದದ ನಿಯಮಗಳು ನಮಗೆ ಕಹಿಯಾಗಿದ್ದರೂ ಅವು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವುದಕ್ಕಾಗಿ ಮತ್ತು ದೇವರು ನಮ್ಮನ್ನು ಆಶೀರ್ವದಿಸುವುದಕ್ಕಾಗಿ ಎಂದು ಅರಿತು ಅವುಗಳನ್ನು ಪಾಲಿಸೋಣ. ದೇವರ ಆಶೀರ್ವಾದವನ್ನು ಪಡೆಯೋಣ. ಆಮೆನ್!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಮನೆ ಚರ್ಚ್ ನಿರ್ಮಾಣದ ಯೋಜನೆಯಡಿಯಲ್ಲಿ ಹೆಚ್ಚಿನ ಮನೆ ಚರ್ಚ್‌ಗಳು ರಚನೆಯಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al