Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.09.2022
Share:

By Village Missionary Movement

Monday, 19-Sep-2022

ಧೈನಂದಿನ ಧ್ಯಾನ(Kannada) – 20.09.2022

 

ನಿರ್ಲಕ್ಷ್ಯ

 

"ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು" - ಕೀರ್ತನೆ 118:22

 

ಒಂದು ಕಟ್ಟಡವನ್ನು ಕಟ್ಟುವಾಗ, ಸಾರ್ವೆ ಮರವನ್ನು ಪ್ರಾಮುಖ್ಯವಾಗಿಟ್ಟು ಕೋರೆಯನ್ನು ಕಟ್ಟಿ, ಅಡ್ಡ ಹಲಗೆಗಳನ್ನು ಹಾಕಿ ಅದರ ಮೇಲೆ ಅನೇಕ ಕೆಲಸಗಾರರು ನಿಂತು ಕೆಲಸ ಮಾಡುತ್ತಾ ಕಟ್ಟಡವು ದಿನ ದಿನಕ್ಕೆ ಮೇಲೇರುತ್ತಲೇ ಇರುತ್ತದೆ. ಆ ಕಟ್ಟಡಕ್ಕೆ ಬಣ್ಣ ಬಳಿದು ಎಲ್ಲವನ್ನೂ ಮುಗಿಸಿದ ನಂತರ, ಅವರು ಒಂದೊಂದೇ ಸಾರ್ವೆ ಮರವನ್ನು ಬಿಚ್ಚುತ್ತಾ ಬರುತ್ತಾರೆ. ಗೃಹ ನಿರ್ಮಾಣ ಮುಗಿದ ನಂತರ ಗೃಹ ಪ್ರವೇಶದಂದು ಯಾರ ಕಣ್ಣಿಗೂ ಕಾಣದಂತೆ ಆ ಸಾರ್ವೆ ಮರವನ್ನು ಹಿಂದೆ ಇಟ್ಟು ಮುಂದೆ ಎಲ್ಲೋ ಬೆಳೆದ ಬಾಳೆಗಿಡವನ್ನು ನೆಟ್ಟು ಗ್ರಹಪ್ರವೇಶವನ್ನು ನಡೆಸಿ ಎಲ್ಲರನ್ನೂ ಸ್ವಾಗತಿಸುತ್ತಾರೆ. ಎಲ್ಲಾ ಹೆಮ್ಮೆಯೂ ಬಾಳೆಗಿಡಕ್ಕೆ ಸೇರುತ್ತದೆ. ಇದರಲ್ಲಿ ಸತ್ಯ ಏನು? ಆ ಬಾಳೆ ಮರ ಕೇವಲ 3 ದಿನವೇ ಬದುಕುತ್ತದೆ. ಕುರಿಗಳು ಮತ್ತು ಹಸುಗಳು ಅದನ್ನು ಮೇಯ್ದು ಬಿಡುತ್ತವೆ ಮತ್ತು ಮಕ್ಕಳು ಕಿತ್ತೆಸೆದು ಬಿಡುತ್ತಾರೆ. ಎಲ್ಲೋ ಮೂಲೆಯಲ್ಲಿ ಬಿದ್ದಿರುತ್ತಲ್ಲಾ ಆ ಸಾರ್ವೆ ಮರ, ಮುಂದಿನ ಕಟ್ಟಡ ಕಟ್ಟಲು ಏಣಿಯಂತೆ ಸಿದ್ಧವಾಗಿರುತ್ತದೆ.

 

1 ಸಮುವೇಲ 17 ನೇ ಅಧ್ಯಾಯದಲ್ಲಿ ದಾವೀದ ಮತ್ತು ಗೊಲ್ಯಾತನ ನಡುವೆ ನಡೆದ ಯುದ್ಧ ನಮಗೆ ಗೊತ್ತು. ಅದರಲ್ಲಿ ಗೊಲ್ಯಾತನು ದಾವೀದನೊಂದಿಗೆ ಯುದ್ಧ ಮಾಡಲು ತನ್ನ ತಲೆಯ ಮೇಲೆ ತಾಮ್ರದ ಶಿರಸ್ತ್ರಾಣವನ್ನು, ಪಾದಗಳಲ್ಲಿ ತಾಮ್ರದ ಕವಚವನ್ನು ಮತ್ತು ಹೆಗಲ ಮೇಲೆ ತಾಮ್ರದ ಈಟಿಯನ್ನು ಹಿಡಿದು ದಾವೀದನೊಂದಿಗೆ ಹೋರಾಡಲು ನಿಂತನು. (1 ಸಮು. 17:5,6). ಆದರೆ ಈ ದಾವೀದನು ಐದು ನುಣುಪು ಕಲ್ಲುಗಳೊಂದಿಗೆ ಯುದ್ಧಕ್ಕೆ ಹೋದನು, ಅದು ಎಲ್ಲರ ದೃಷ್ಟಿಯಲ್ಲಿ ಬಹಳ ಕಡಿಮೆ ಎಣಿಕೆಯಾಗಿತ್ತು. ಗೊಲ್ಯಾತನು ಆಯುಧವನ್ನು ಹಿಡಿದಿದ್ದರೂ, ಅಲ್ಪವಾದ ನುಣುಪುಕಲ್ಲು ಹಿಡಿದಿದ್ದ ದಾವೀದನ ಬಳಿ ಸೋತುಹೋದನು. ದಾವೀದನು ಒಂದೇ ಒಂದು ಕಲ್ಲಿನಿಂದ ಗೊಲ್ಯಾತನನ್ನು ಸೋಲಿಸಿದನು. ಅವನ ಹಣೆಯೊಳಗೆ ಆ ಕಲ್ಲು ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು.

 

ಇದನ್ನು ಓದುತ್ತಿರುವ ದೇವರ ಮಕ್ಕಳೇ! ಸಾರ್ವೆ ಮರದಂತೆ ಮತ್ತು ನುಣುಪು ಕಲ್ಲುಗಳಂತೆ ಅನೇಕರು ನಮ್ಮನ್ನು ನಿರ್ಲಕ್ಷಿಸಿರಬಹುದು. ಇಲ್ಲದಿದ್ದರೆ ಮನುಷ್ಯರು ನಿಮ್ಮಿಂದ ಸಹಾಯವನ್ನು ಪಡೆದು, ನಿಮ್ಮನ್ನು ಅವಶ್ಯಕತೆಗೆ ಮಾತ್ರ ಬಳಸಿಕೊಂಡಿರಬಹುದು. ಚಿಂತಿಸಬೇಡಿರಿ. ಬಹುಶಃ ಇಂದು ನೀವು ಇರುವ ಸಂದರ್ಭಗಳನ್ನು ನೀವು ಕಡಿಮೆ ಅಂದಾಜು ಮಾಡುತ್ತಿರಬಹುದು. ಏಕೆಂದರೆ ಯೇಸುಕ್ರಿಸ್ತನು ಸಹ ಮನುಷ್ಯರಿಂದ ನಿರ್ಲಕ್ಷ್ಯ ಮತ್ತು ತಿರಸ್ಕಾರಕ್ಕೆ ಒಳಗಾದರು. ಇಂದು ನಾವು ನೋಡುತ್ತಿರುವ ಯಾವುದೇ ಸಂದರ್ಭಗಳು ಮತ್ತು ಸಮಸ್ಯೆಗಳು ಶಾಶ್ವತವಲ್ಲ. ನಮ್ಮ ದೇವರಿಂದ ಒಂದು ದಿನ ಖಂಡಿತ ಎಲ್ಲವೂ ಬದಲಾಗುತ್ತದೆ. ಆತ್ಮವಿಶ್ವಾಸದಿಂದಿರಿ. ದೇವರು ಪರಿಸ್ಥಿತಿಗಳನ್ನು ಬದಲಾಯಿಸುತ್ತಾರೆ ಮತ್ತು ನಿಮ್ಮನ್ನು ಮೇಲಕ್ಕೆತ್ತುತ್ತಾರೆ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

"ಯೇಹೋಶುವನೇ ಎದ್ದೇಳು" ಎಂಬ ಕಾರ್ಯಕ್ರಮವು ಎಲ್ಲಾ ಯುವಕರಿಗಾಗಿ ಪ್ರತಿ ಭಾನುವಾರ ನಮ್ಮ "ಯೂ ಟ್ಯೂಬ್ ಚಾನೆಲ್" ನಲ್ಲಿ ಪ್ರಸಾರವಾಗುತ್ತಿದೆ. ಇದರ ಮೂಲಕ ಯೌವ್ವನ ಮಕ್ಕಳು ಸ್ಪರ್ಶಿಸಲ್ಪಡಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet